ಧಾರ್ಮಿಕ ಭಯೋತ್ಪಾದನೆ ವಿರುದ್ಧ ಅಭಿಯಾನಕ್ಕೆ ಕೇರಳ ಬಿಜೆಪಿ ಸಜ್ಜು!

ತಿರುವನಂತಪುರಂ, ಏಪ್ರಿಲ್ 19: ರಾಜ್ಯದಲ್ಲಿ ಧಾರ್ಮಿಕ ಭಯೋತ್ಪಾದನೆಯು ಅಧಿಕವಾಗುತ್ತಿದೆ. ಅಂತಹ ಹಲವಾರು ಘಟನೆಗಳು ನಡೆಯುತ್ತಿದೆ ಎಂದು ಆರೋಪ ಮಾಡಿರುವ ಕೇರಳ ಬಿಜೆಪಿ ಈ ಧಾರ್ಮಿಕ ಭಯೋತ್ಪಾದನೆಯ ವಿರುದ್ಧವಾಗಿ ಅಭಿಯಾನವನ್ನು ಪ್ರಾರಂಭ ಮಾಡಲು ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಏಪ್ರಿಲ್ 29 ರಂದು ಬಿಜೆಪಿಯ ರಾಜ್ಯ ನಾಯಕತ್ವದ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.

ಕೇರಳದಲ್ಲಿ 'ಧಾರ್ಮಿಕ ಭಯೋತ್ಪಾದನೆ' ವಿರುದ್ಧ ಬಿಜೆಪಿ ತನ್ನ ಅಭಿಯಾನವನ್ನು ತೀವ್ರಗೊಳಿಸಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಸೋಮವಾರ ಹೇಳಿದ್ದಾರೆ. ಹಾಗೆಯೇ ಏಪ್ರಿಲ್ 29 ರಂದು ಬಿಜೆಪಿಯ ರಾಜ್ಯ ನಾಯಕತ್ವದ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

"ಸಮಾಜಕ್ಕೆ ಹಾನಿಕರವಾಗಿರುವ ಲವ್ ಜಿಹಾದ್ (ಮುಸ್ಲಿಂ ಪುರುಷರ ಅಂತರ್ಧರ್ಮೀಯ ವಿವಾಹಕ್ಕೆ ಹಿಂದುತ್ವ ಸಂಘಟನೆಗಳಿಟ್ಟ ಹೆಸರು) ಸೇರಿದಂತೆ ಬೆಳೆಯುತ್ತಿರುವ ಧಾರ್ಮಿಕ ಭಯೋತ್ಪಾದನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಪಕ್ಷವು ಕೇಂದ್ರ ಗೃಹ ಸಚಿವರಿಗೆ ತಿಳಿಸುತ್ತದೆ," ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದರು.

 ರಾಜಕೀಯ ಹತ್ಯೆ, ಲವ್ ಜಿಹಾದ್ ಉಲ್ಲೇಖ

ರಾಜಕೀಯ ಹತ್ಯೆ, ಲವ್ ಜಿಹಾದ್ ಉಲ್ಲೇಖ

"ಕಳೆದ ಆರು ವರ್ಷಗಳಲ್ಲಿ, ಕೇರಳದಲ್ಲಿ 24 ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೊಲ್ಲಲಾಗಿದೆ. ಅವರಲ್ಲಿ ಏಳು ಮಂದಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಕೊಲ್ಲಲ್ಪಟ್ಟಿದ್ದಾರೆ. ಲವ್ ಜಿಹಾದ್ ಎಂಬ ಅನಾಗರಿಕ ಕೃತ್ಯದ ಮೂಲಕ ಹಲವಾರು ಕ್ರಿಶ್ಚಿಯನ್ ಮಹಿಳೆಯರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ," ಎಂದು ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಆರೋಪ ಮಾಡಿದ್ದಾರೆ. ಮೂರು ಮುಸ್ಲಿಂ ಸಂಘಟನೆಗಳ ವಿಲೀನದ ಮೂಲಕ 2007 ರಲ್ಲಿ ರಚಿಸಲಾದ ಪಿಎಫ್‌ಐ ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಪ್ರಭಾವವನ್ನು ಹೊಂದಿದೆ. ಈ ಸಂಘಟನೆಯನ್ನು ಬಿಜೆಪಿಯು ಗುರಿಯಾಗಿಸಿಕೊಂಡಿದೆ. ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಕೊಲೆ ನಡೆದಿದ್ದು ಇದನ್ನು ಪಿಎಫ್‌ಐ-ಎಸ್‌ಡಿಪಿಐ ಕಾರ್ಯಕರ್ತರು ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕೋಝಿಕ್ಕೋಡ್‌ನಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಅಂತರ್‌ಧರ್ಮೀಯ ವಿವಾಹದ ವಿಚಾರವನ್ನು ಲವ್ ಜಿಹಾದ್ ಎಂದು ಹೇಳಿಕೊಂಡು ಬಿಜೆಪಿ ಪ್ರಚಾರ ನಡೆಸುತ್ತಿದೆ.

 ಕೇರಳದಲ್ಲಿ ಅಲ್ಪಸಂಖ್ಯಾತ ಭಯೋತ್ಪಾದನೆ ಎಂದ ಬಿಜೆಪಿ

ಕೇರಳದಲ್ಲಿ ಅಲ್ಪಸಂಖ್ಯಾತ ಭಯೋತ್ಪಾದನೆ ಎಂದ ಬಿಜೆಪಿ

ಪಾಲಕ್ಕಾಡ್‌ನ ಅದೇ ಪ್ರದೇಶದಲ್ಲಿ ಬಿಜೆಪಿ-ಆರ್‌ಎಸ್‌ಎಸ್‌ನವರು ಪಿಎಫ್‌ಐ ಕಾರ್ಯಕರ್ತರನ್ನು ಕೊಂದ ಒಂದು ದಿನದ ನಂತರ ಶನಿವಾರ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ನಡೆದಿದೆ. ಆದರೆ ಪಿಎಫ್‌ಐ ಕಾರ್ಯಕರ್ತನ ಹತ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಯಾವುದೇ ಪಾತ್ರವಿಲ್ಲ ಎಂದು ಸುರೇಂದ್ರನ್ ಹೇಳಿಕೊಂಡಿದ್ದಾರೆ. ಕೇರಳದಲ್ಲಿ ಅಲ್ಪಸಂಖ್ಯಾತ ಭಯೋತ್ಪಾದನೆಗೆ ಆಡಳಿತಾರೂಢ ಸಿಪಿಐ(ಎಂ) ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಿದೆ ಎಂದು ಆರೋಪ ಮಾಡಿದ್ದಾರೆ. "ಅಲ್ಪಸಂಖ್ಯಾತ ಮೂಲಭೂತವಾದವು ಕೇರಳಕ್ಕೆ ಬೆದರಿಕೆಯಾಗಿ ಬೆಳೆದಿದೆ. ನಮ್ಮ ಪಕ್ಷದ ಹೆಚ್ಚಿನ ಕಾರ್ಯಕರ್ತರು ಸತ್ತರೂ ಭಯೋತ್ಪಾದನೆ ವಿರುದ್ಧದ ಅಭಿಯಾನಕ್ಕೆ ಬಿಜೆಪಿ ಹಿಂದೆ ಸರಿಯುವುದಿಲ್ಲ," ಎಂದು ಸುರೇಂದ್ರನ್ ಹೇಳಿದರು.

"ಲವ್ ಜಿಹಾದ್" ವಿಚಾರದಲ್ಲಿ ಕ್ರೈಸ್ತ ಸಮುದಾಯದ ಓಲೈಕೆ!

ಮುಖ್ಯವಾಗಿ "ಲವ್ ಜಿಹಾದ್" ವಿಷಯದಲ್ಲಿ ಬಿಜೆಪಿಯು ಕೇರಳದಲ್ಲಿ ಕ್ರೈಸ್ತ ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಕ್ರೈಸ್ತ ಸಮುದಾಯದ ಓಲೈಕೆ ಮಾಡಲು ಬಿಜೆಪಿ ಮತ್ತೆ ಪ್ರಯತ್ನ ಮುಂದುವರಿಸುತ್ತದೆ ಎಂದು ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ. . ಸಿಪಿಐ(ಎಂ) ಮತ್ತು ಕಾಂಗ್ರೆಸ್ ಎರಡೂ ಕಡೆ ಆರೋಪ ಮಾಡದೆ ಸಮತೋಲನವನ್ನು ಕಾಯ್ದುಕೊಂಡು ಬಂದಿದೆ. ಆದರೆ ಬಿಜೆಪಿ ಮಾತ್ರ "ಅಂತರ್ಧರ್ಮೀಯ ವಿವಾಹಗಳಲ್ಲಿ ಕ್ರೈಸ್ತರನ್ನೇ ಬಂಡವಾಳವಾಗಿಸಿಕೊಳ್ಳಬಹುದು," ಎಂದು ಬಿಜೆಪಿ ಪಕ್ಷದ ಮುಖಂಡರು ಹೇಳುತ್ತಾರೆ.

 ಅಂತರ್ಧರ್ಮೀಯ ವಿವಾಹಕ್ಕೆ ಬಿಜೆಪಿ ಕಿಡಿ

ಅಂತರ್ಧರ್ಮೀಯ ವಿವಾಹಕ್ಕೆ ಬಿಜೆಪಿ ಕಿಡಿ

ಕಳೆದ ವಾರ, ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿಪಿಐ(ಎಂ) ಕಾರ್ಯಕರ್ತರೊಬ್ಬರು ಕೋಝಿಕ್ಕೋಡ್‌ನಲ್ಲಿ ಕ್ರಿಶ್ಚಿಯನ್ ಮಹಿಳೆಯನ್ನು ವಿವಾಹವಾಗಿದ್ದಾರೆ. ಆಕೆಯ ಕುಟುಂಬವು ಇದು ಬಾಹ್ಯ ಶಕ್ತಿಯ ಪ್ರಭಾವ ಇದರಲ್ಲಿ ಕೈವಾಡವಿದೆ ಎಂದು ದೂಷಿಸಿದೆ. ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ನಂತರ, ಬಿಜೆಪಿ ನಾಯಕರು ಕೇಂದ್ರ ಏಜೆನ್ಸಿಗಳಿಂದ ತನಿಖೆಗೆ ಒತ್ತಾಯಿಸಿದ್ದರು. ಮದುವೆಯ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ಕೇಸರಿ ಪಕ್ಷ ಆರೋಪಿಸಿದೆ. ಕೇಂದ್ರೀಯ ಸಂಸ್ಥೆಗಳಿಂದ ತನಿಖೆಗಾಗಿ ಮಹಿಳೆಯ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ನೀಡುವುದಾಗಿ ಕೂಡಾ ಹೇಳಿಕೊಂಡಿದೆ. ಸಿಪಿಐ(ಎಂ)ನ ಮಾಜಿ ಶಾಸಕ ಜಾರ್ಜ್ ಎಂ ಥಾಮಸ್ ಆರಂಭದಲ್ಲಿ ಅಂತರ್ಧರ್ಮೀಯ ವಿವಾಹವು ಈ ಪ್ರದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದರು. ಆದರೆ ನಂತರ ಪಕ್ಷವು ಅಂತರ್ಧರ್ಮೀಯ ವಿವಾಹಗಳನ್ನು ಉತ್ತೇಜಿಸಲು ಬಯಸುತ್ತದೆ ಎಂದು ಹೇಳಿದರು. ಕೋಮುವಾದಿ ಸಂಘಟನೆಗಳ ಒತ್ತಾಯದ ಮೇರೆಗೆ ಥಾಮಸ್ ತಮ್ಮ ನಿಲುವನ್ನು ಬದಲಾಯಿಸುವಂತೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+