ಕೇರಳದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋ ಮ್ಯಾನ್ ಶ್ರೀಧರನ್‌ಗೆ ಮುನ್ನಡೆ

ತಿರುವನಂತಪುರಂ, ಮೇ 02: ಕೇರಳದಲ್ಲಿ ಬಿಜೆಪಿಯು ಎರಡು ಕ್ಷೇತ್ರಗಳನ್ನು ಮುನ್ನಡೆ ಕಾಯ್ದುಕೊಂಡಿದ್ದು, ವಿಶ್ವಾಸವನ್ನು ಹೆಚ್ಚಿದೆ.

ಮೆಟ್ರೋ ಮ್ಯಾನ್ ಇ ಶ್ರೀಧರನ್ ಪಾಲಕ್ಕಾಡ್‌ ಕ್ಷೇತ್ರದಲ್ಲಿ ಮುಂದಿದ್ದಾರೆ. ಈಗಿರುವ ಟ್ರೆಂಡ್ ಗಮನಿಸಿದರೆ ಶ್ರೀಧರನ್ ಮೂಲಕ ಬಿಜೆಪಿಯು ಪಾಲಕ್ಕಾಡ್ ಗೆಲ್ಲು ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ನೆಮೊಮ್‌ನಲ್ಲಿ ಕುಮ್ಮನಮ್ ರಾಜಶೇಖರನ್ ಮುಂದಿದ್ದಾರೆ. ಕೇರಳದಲ್ಲಿ 140 ಸ್ಥಾನಗಳಿಗೆ ಏಪ್ರಿಲ್ 26 ರಂದು ಮತದಾನ ನಡೆದಿತ್ತು. ಇಂದು ಫಲಿತಾಂಶ ಹೊರಬೀಳಲಿದೆ.

Kerala Assembly Election Results 2021: BJP Candidate Metro Man E Sreedharan Leading

ದಿಲ್ಲಿ ಮೆಟ್ರೋ ಸೇರಿದಂತೆ ದೇಶದ ಹಲವು ರೈಲು ಯೋಜನೆಗಳ ಹಿಂದಿನ ಚಾಲಕಶಕ್ತಿ ಇ ಶ್ರೀಧರನ್‌ ಫೆಬ್ರವರಿ 25 ರಂದು ಕೇಂದ್ರ ಸಚಿವ ಆರ್‌ಕೆ ಸಿಂಗ್‌ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು, ಬಿಜೆಪಿಯ ರಾಜ್ಯ ಚುನಾವಣಾ ಸಮಿತಿಯ 16 ಸದಸ್ಯರಲ್ಲಿ 88 ವರ್ಷದ ಶ್ರೀಧರನ್‌ ಕೂಡ ಒಬ್ಬರಾಗಿದ್ದಾರೆ.

ಇಂದು ಕೇರಳ, ತಮಿಳುನಾಡು, ಪುದುಚೇರಿ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+