ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಭಕ್ತರಿಗೆ ಸಿಹಿ ಸುದ್ದಿ: ಯಾತ್ರೆಗೆ ಹೋಗುವುದು ಇನ್ನು ಸುಲಭ

|
Google Oneindia Kannada News

ತಿರುವನಂತಪುರಂ, ಜನವರಿ 8: ಪ್ರತಿ ವರ್ಷ ಮಕರವಿಳಕ್ಕು ಅವಧಿಯಲ್ಲಿ ದಿನವೂ ಲಕ್ಷಾಂತರ ಭಕ್ತರಿಂದ ಗಿಜಿಗುಡುತ್ತಿದ್ದ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿ ಈ ಬಾರಿ ಹಬ್ಬದ ಸಂಭ್ರಮವಿಲ್ಲದೆ ಕಳೆಗುಂದಿದೆ. ಕೊರೊನಾ ವೈರಸ್ ಸೋಂಕಿನ ನಿರ್ಬಂಧಗಳಿಂದಾಗಿ ಈ ಬಾರಿ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಪ್ರತಿ ವರ್ಷ ವ್ರತ ಕೈಗೊಂಡು ಅಲ್ಲಿಗೆ ತೆರಳುತ್ತಿದ್ದ ಭಕ್ತರು ಈ ಬಾರಿ ನಿರಾಶೆಗೊಂಡಿದ್ದಾರೆ. ಈ ಬೇಸರದ ನಡುವೆಯೇ ಖುಷಿಯ ಸಂಗತಿಯೊಂದು ದೊರಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಬಾರಿ ಶಬರಿಮಲೆ ಯಾತ್ರೆಗೆ ಭಕ್ತರು ರೈಲಿನಲ್ಲಿ ಸಾಗಬಹುದು. ದೂರ ಊರುಗಳಿಂದ ವಾಹನ ಮಾಡಿಕೊಂಡು ಹೋಗುವ ಸಂಕಷ್ಟಗಳು ದೂರವಾಗಲಿದೆ. ಶಬರಿಮಲೆಗೆ ಸುಮಾರು 23 ವರ್ಷಗಳಿಂದ ಬಾಕಿ ಉಳಿದಿದ್ದ ರೈಲ್ವೆ ಯೋಜನೆಯು ಕೊನೆಗೂ ಅನುಮೋದನೆಗೊಂಡಿದೆ.

ಶಬರಿಮಲೆ ವಿವಾದ: ಕೂಡಲೇ ಅರ್ಜಿ ವಿಚಾರಣೆ ನಡೆಸಲು ಕೇರಳ ಸರ್ಕಾರ ಮನವಿಶಬರಿಮಲೆ ವಿವಾದ: ಕೂಡಲೇ ಅರ್ಜಿ ವಿಚಾರಣೆ ನಡೆಸಲು ಕೇರಳ ಸರ್ಕಾರ ಮನವಿ

ಶಬರಿಮಲೆ ರೈಲ್ವೆ ಮಾರ್ಗಕ್ಕೆ ತಗುಲುವ ವೆಚ್ಚದ ಶೇ 50ರಷ್ಟನ್ನು ಭರಿಸಲು ಕೇರಳ ಸರ್ಕಾರ ಒಪ್ಪಿಕೊಂಡಿದೆ. ಈ ಯೋಜನೆಗೆ 2,815 ಕೋಟಿ ರೂ ವೆಚ್ಚ ತಗುಲಲಿದ್ದು, ಅದರಲ್ಲಿ ಅರ್ಧದಷ್ಟು ವೆಚ್ಚವನ್ನು ಕೇರಳ ಭರಿಸಲಿದೆ. ದೇಶದೆಲ್ಲೆಡೆಯಿಂದ ಬರುವ ಲಕ್ಷಾಂತರ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮುಂದೆ ಓದಿ...

1997-98ರ ಯೋಜನೆ

1997-98ರ ಯೋಜನೆ

ಶಬರಿಮಲೆ ರೈಲು ಯೋಜನೆಯು ಕೇರಳದ ಎರ್ನಾಕುಲಂ ಜಿಲ್ಲೆಯ ಅಂಗಮಲೈ ಮತ್ತು ಕೊಟ್ಟಾಯಂ ಜಿಲ್ಲೆಯ ಎರುಮೇಲಿ ನಡುವೆ ಸುಮಾರು 111 ಕಿಮೀ ಸಂಪರ್ಕ ಕಲ್ಪಿಸಲಿದೆ. ಶಬರಿಮಲೆ ಯಾತ್ರಿಕರ ಮೂಲ ನೆಲೆಯಾದ ಪಂಬಾದಿಂದ ಎರುಮೇಲಿ ರೈಲು ನಿಲ್ದಾಣದಿಂದ 18 ಕಿಮೀ ದೂರದಲ್ಲಿದೆ. ಈ ಯೋಜನೆಯನ್ನು 1997-98ರ ಆಯವ್ಯಯದಲ್ಲಿ 517 ಕೋಟಿ ರೂ ವೆಚ್ಚದಲ್ಲಿ ಘೋಷಿಸಲಾಗಿತ್ತು. ಆದರೆ ಆಗ ಶೇ 50ರಷ್ಟು ವೆಚ್ಚ ಭರಿಸುವ ಷರತ್ತನ್ನು ಕೇರಳ ಸರ್ಕಾರ ಒಪ್ಪಿರಲಿಲ್ಲ.

ವಾಹನಗಳಲ್ಲಿ ದೂರ ಪ್ರಯಾಣಿಸಬೇಕು

ವಾಹನಗಳಲ್ಲಿ ದೂರ ಪ್ರಯಾಣಿಸಬೇಕು

ಪ್ರಸ್ತುತ ಶಬರಿಮಲೆ ಭಕ್ತರು ಶಬರಿಮಲೆಗೆ ತೆರಳಲು ಸಾಕಷ್ಟು ದೂರ ಪ್ರಯಾಣಿಸಬೇಕಾಗುತ್ತದೆ. ರೈಲು, ವಿಮಾನಗಳಲ್ಲಿ ಬರುವವರು ಕ್ಯಾಬ್, ಬಸ್‌ಗಳ ಮೂಲಕ ಪಂಬಾಕ್ಕೆ ಬರಬೇಕು. ಕೊಚ್ಚಿ ಮತ್ತು ತಿರುವನಂಪುರಂ ವಿಮಾನ ನಿಲ್ದಾಣಗಳಿಂದ ಐದಾರು ಗಂಟೆ ಪ್ರಯಾಣಿಸಬೇಕಾಗುತ್ತದೆ. ಕೊಟ್ಟಾಯಂ, ಚೆಂಗನ್ನೂರ್ ರೈಲು ನಿಲ್ದಾಣದಲ್ಲಿ ಇಳಿದರೂ ಪಂಬಾಕ್ಕೆ ಐದು ಗಂಟೆ ಮತ್ತೆ ಪ್ರಯಾಣಿಸಬೇಕು.

ಶಬರಿಮಲೆ: ಭಕ್ತರಿಂದ 40 ನಕಲಿ ಕೋವಿಡ್ ಪರೀಕ್ಷೆ ಪ್ರಮಾಣ ಪತ್ರ ವಶಶಬರಿಮಲೆ: ಭಕ್ತರಿಂದ 40 ನಕಲಿ ಕೋವಿಡ್ ಪರೀಕ್ಷೆ ಪ್ರಮಾಣ ಪತ್ರ ವಶ

2016ರಲ್ಲಿ ಮತ್ತೆ ಜೀವ

2016ರಲ್ಲಿ ಮತ್ತೆ ಜೀವ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ 2016ರಲ್ಲಿ ಮತ್ತೆ ಜೀವ ಸಿಕ್ಕಿತ್ತು. ಕೇಂದ್ರ ರೈಲ್ವೆ ಇಲಾಖೆ ಮತ್ತು ಕೇರಳ ಸರ್ಕಾರಗಳು ಲಾಭದಾಯಕ ಯೋಜನೆಗಳನ್ನು ಗುರುತಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಅದರಲ್ಲಿ ಅಂಗಮಲೈ-ಎರುಮೇಲಿ ರೈಲು ಯೋಜನೆ ಕೂಡ ಸೇರಿತ್ತು. ಪ್ರಸ್ತುತ ಅದರ ವೆಚ್ಚ 2,187 ಕೋಟಿ ರೂ ಇದ್ದು, ಯೋಜನೆಯಿಂದ ಬರುವ ಲಾಭದ ಸಮಪಾಲು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆಯಾಗಲಿದೆ.

ಯೋಜನೆ ವಿಸ್ತರಣೆಗೂ ಅವಕಾಶ

ಯೋಜನೆ ವಿಸ್ತರಣೆಗೂ ಅವಕಾಶ

ಈ ರೈಲು ಯೋಜನೆಯ ಮೊದಲ ಹಂತದಲ್ಲಿ ಎರುಮೇಲಿ ಕೊನೆಯ ನಿಲ್ದಾಣವಾಗಿದೆ. ಎರಡನೆಯ ಹಂತದಲ್ಲಿ ರೈಲು ಮಾರ್ಗವು ಕೊಲ್ಲಂ ಜಿಲ್ಲೆಯ ಪುನಲೂರಿನವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಅದು ಸಾಧ್ಯವಾದರೆ ತಮಿಳುನಾಡಿನ ಸಂಪರ್ಕ ಕೂಡ ಹತ್ತಿರವಾಗಲಿದೆ. ನಂತರ ಪುನಲೂರಿನಿಂದ ತಿರುವನಂತಪುರಂನ ನೆಮೋಮ್ ವರೆಗೆ ಕೂಡ ರೈಲು ಮಾರ್ಗ ವಿಸ್ತರಿಸಲು ಅವಕಾಶವಿದೆ.

English summary
The Kerala government has agreed to bear 50% of the estimate of Rs 2815 crore for Sabarimala Railway line which help the devotees to travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X