ಪೊಲೀಸರಿಗೆ ದಿನವೂ ಆಹಾರ, ಹಣ್ಣುಗಳನ್ನು ನೀಡುತ್ತಿದ್ದಾರೆ ಈ ಬಡ ವ್ಯಕ್ತಿ

ತಿರುವನಂತಪುರಂ‎, ಏಪ್ರಿಲ್ 21: ಕೇರಳದಲ್ಲಿ ಒಬ್ಬ ಬಡ ವ್ಯಕ್ತಿ ಪ್ರತಿ ದಿನ ಪೊಲೀಸರಿಗೆ ಆಹಾರ ಹಾಗೂ ಹಣ್ಣುಗಳನ್ನು ನೀಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಶ್ರಮಪಡುತ್ತಿರುವ ಪೊಲೀಸರಿಗೆ ಈ ವ್ಯಕ್ತಿ ತನ್ನ ಕೈಲಾದ ನೆರವು ನೀಡುತ್ತಿದ್ದಾರೆ.

Recommended Video

      ಬೆಂಗಳೂರಿನಲ್ಲಿ ರಸ್ತೆಗೇನಾದ್ರು ಇಳಿದ್ರೆ ಯಮ‌ ಮಾತ್ರ ನಿಮ್ಮನ್ನ ಬಿಡೋದಿಲ್ಲ | Oneindia kannada

      ಗಿರೀಶ್ ತೆಂಗಿನ ಮರ ಹತ್ತುವ ಕೆಲಸ ಮಾಡುತ್ತಾರೆ. ತೆಂಗಿನ ಕಾಯಿಗಳನ್ನು ಮರದಿಂದ ಕೆಳಗೆ ಇಳಿಸಿ ಹಣ ಸಂಪಾದನೆ ಮಾಡುತ್ತಾರೆ. ತಮ್ಮ ಬದುಕೆ ಕಷ್ಟದಲ್ಲಿ ಇದ್ದರೂ, ಈ ಸಂಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಹಸ್ತ ಚಾಚಿದ್ದಾರೆ. ಲಾಕ್‌ಡೌನ್ ಶುರು ಆದಾಗಿನಿಂದ ಪೊಲೀಸರಿಗೆ ಇವರು ಆಹಾರ ಹಾಗೂ ಹಣ್ಣುಗಳನ್ನು ನೀಡಿಕೊಂಡು ಬರುತ್ತಿದ್ದಾರೆ.

      ಈ ಬಗ್ಗೆ ಮಾತನಾಡಿರುವ ಗಿರೀಶ್ ''ನಾನು ನನ್ನ ಸಣ್ಣ ಸಂಪಾದನೆಯಲ್ಲಿ, ಸಣ್ಣ ಮಟ್ಟದ ಸಹಾಯ ಮಾಡುತ್ತಿದ್ದೇನೆ. ನಮಗಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಅವರಿಗೆ ಸಹಾಯ ಮಾಡಬೇಕು ಎಂದು ನನಗೆ ಅನಿಸಿತು.'' ಎಂದು ತಿಳಿಸಿದ್ದಾರೆ.

      Gireesh A Coconut Tree Climber Provides Food To Police Personnel

      ''ನಾನು ಹೆಚ್ಚು ಸಂಪಾದನೆ ಮಾಡುವುದಿಲ್ಲ. ತನ್ನ ಕೈನಲ್ಲಿ ಆದ ಸಹಾಯ ಮಾಡುತ್ತಿದ್ದೇನೆ. ಊಟ ಅಥವಾ ಬಾಳೆಹಣ್ಣುಗಳನ್ನು ಪೊಲೀಸರಿಗೆ ನೀಡುತ್ತೇನೆ'' ಎಂದಿದ್ದಾರೆ.

      ತಮ್ಮ ಮನೆ, ಮಕ್ಕಳು, ಸಂಸಾರದಿಂದ ದೂರ ಇದ್ದು, ಕೊರೊನಾ ಭೀತಿ ನಡುವೆ ಜನರ ರಕ್ಷಣೆಗೆ ನಿಂತ ಪೊಲೀಸರಿಗೆ ಗಿರೀಶ್ ಈ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

      ಕೇರಳದಲ್ಲಿ 387 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ. ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+