• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ನಂತರದ ಬದಲಾವಣೆ: ಕ್ರಾಂತಿಕಾರಿ ಹೆಜ್ಜೆ ಇಟ್ಟ ಕೇರಳ

|

ತಿರುವನಂತಪುರಂ, ಮೇ 30: ಕೇರಳ ಸರ್ಕಾರ ಡಿಜಿಟಲ್ ವ್ಯವಹಾರ, ಚಟುವಟಿಕೆ ಉತ್ತೇಜಿಸಲು ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗಿದೆ. ಕೇರಳ ನಾಗರಿಕರಿಗೆ ಉಚಿತ ಇಂಟರ್‌ನೆಟ್‌ ಕೊಡಲು ಮುಂದಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ Kerala Fibre Optic Network (K-FON) ಎಂಬ ಮಹತ್ವಾಕಾಂಕ್ಷೆಯ ಯೋಜನೆ ಘೋಷಣೆ ಮಾಡಿದ್ದಾರೆ. ಈ ಯೋಜನೆಗೆ ಈ ವರ್ಷದ ಡಿಸೆಂಬರ್‌ನಲ್ಲಿ ಚಾಲನೆ ಸಿಗಲಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಸಿನಿಮಾ ಸೆಟ್ ದ್ವಂಸ: ಭಜರಂಗದಳ ವ್ಯಕ್ತಿ ಬಂಧನ, ಕೇರಳ ಸಿಎಂ ಎಚ್ಚರಿಕೆ

'ಯೋಜನೆಯ ಪ್ರಕಾರ ಕೇರಳದ ಬಡವರಿಗೆ ಉಚಿತ ಇಂಟರ್‌ನೆಟ್ ಒದಗಿಸಲಾಗುತ್ತದೆ. ಮಧ್ಯಮ ವರ್ಗದವರಿಗೆ ಅತ್ಯಂತ ಕಡಿಮೆ ದರದಲ್ಲಿ ಇಂಟರ್‌ನೆಟ್ ಒದಗಿಸಲಾಗುತ್ತದೆ. ರಾಜ್ಯದ ಎಲ್ಲ ಹಳ್ಳಿಗಳಿಗೂ ಈ ಸೌಲಭ್ಯವನ್ನು ಒದಗಿಸಲಾಗುವುದು. ಇಂಟರ್‌ನೆಟ್ ಒಂದು ಮೂಲಭೂತ ಅಗತ್ಯ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

1500 ಕೋಟಿ ರುಪಾಯಿಯ ಯೋಜನೆ

1500 ಕೋಟಿ ರುಪಾಯಿಯ ಯೋಜನೆ

ಕೇರಳ ಜಾರಿಗೆ ತರಲು ಹೊರಟಿರುವ Kerala Fibre Optic Network (K-FON) ಯೋಜನೆಗೆ 1500 ಕೋಟಿ ರುಪಾಯಿಯನ್ನು ತಗೆದಿರಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ವಿಜಯನ್ ಅವರು ಶುಕ್ರವಾರ ಟೆಲಿಕಾಮ್‌ ಕಂಪೆನಿಗಳ ಪ್ರಮುಖರೊಡನೆ ಸಭೆ ನಡೆಸಿ, ಬಳಿಕ ಮಾಧ್ಯಮಗಳ ಎದುರು ಯೋಜನೆ ಘೋಷಣೆ ಮಾಡಿದರು.

ಕೋವಿಡ್ 19 ಪಾಠ

ಕೋವಿಡ್ 19 ಪಾಠ

ಕೋವಿಡ್ 19 ನಾಗರಿಕ ಜಗತ್ತಿಗೆ ಹೊಸ ಪಾಠ ಕಲಿಸಿದೆ. ಮನುಷ್ಯ ಕೂಡ ಇದಕ್ಕೆ ಹೊಂದಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಬೇಕಾದರೆ ಇಂಟರ್‌ನೆಟ್ ಬೇಕೆ ಬೇಕು. ಹೀಗಾಗಿ K-FON ಮೂಲಕ ಜನರಿಗೆ ಉಚಿತ ಇಂಟರ್‌ನೆಟ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಜಯನ್ ತಿಳಿಸಿದ್ದಾರೆ.

ಆಪ್ಟಿಕಲ್ ಫೈಬರ್ ಕೇಬಲ್‌

ಆಪ್ಟಿಕಲ್ ಫೈಬರ್ ಕೇಬಲ್‌

ಕೆಎಸ್‌ಇಬಿ ಬಳಸಿಕೊಂಡು ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ರಾಜ್ಯಾದ್ಯಂತ ಹಾಕಲಾಗುತ್ತಿತ್ತು. K-FON ನೆಟ್‌ವರ್ಕ್ ಶಾಲೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಂಸ್ಥೆಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವುದರಿಂದ ರಾಜ್ಯಕ್ಕೆ ಅಪಾರ ಪ್ರಯೋಜನವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ದೇಶದಲ್ಲೇ ಮೊದಲು

ದೇಶದಲ್ಲೇ ಮೊದಲು

ತನ್ನ ನಾಗರಿಕರಿಗೆ ಉಚಿತ ಇಂಟರ್‌ನೆಟ್ ಒದಗಿಸುತ್ತಿರುವ ಕೇರಳ ಸರ್ಕಾರದ ನಿರ್ಧಾರ ದೇಶದಲ್ಲೇ ಮೊದಲು ಎನಿಸಿಕೊಂಡಿದೆ. ಯಾವುದೇ ರಾಜ್ಯಗಳು ಇದುವರೆಗೆ ಸರ್ಕಾರದಿಂದಲೇ ಉಚಿತ ಇಂಟರ್‌ನೆಟ್ ಒದಗಿಸುವ ಯೋಜನೆ ರೂಪಿಸಿರಲಿಲ್ಲ.

English summary
Free Internet Scheme Announced By Kerala Government. through Kerala Fibre Optic Network (K-FON) Scheme internet will provide. Kerala CM Pinarayi Vijayan Announced it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X