ಆಸ್ಪತ್ರೆಗೆ ಕೊರೊನಾ ಶಂಕಿತ ಬಂದಿದ್ದ ಎಂದಿದ್ದಕ್ಕೆ ಕೆಲಸ ಕಳೆದುಕೊಂಡ ವೈದ್ಯೆ
ತ್ರಿಶೂರ್, ಮಾರ್ಚ್ 10: ಆಸ್ಪತ್ರೆಗೆ ಕೊರೊನಾ ಶಂಕಿತನೊಬ್ಬ ಬಂದಿದ್ದ ಎಂದು ಮಾಹಿತಿ ನೀಡಿದ್ದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯೆಯನ್ನು ಕೆಲಸದಿಂದ ತೆಗೆದು ಹಾಕಿದೆ.
ವೈದ್ಯೆ ಶಿನು ಶ್ಯಾಮಲನ್ ತ್ರಿಶೂರ್ ಜಿಲ್ಲೆಯ ತಳಿಕುಳಂ ಪ್ರದೇಶದಲ್ಲಿ ಖಾಸಗಿ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಆಸ್ಪತ್ರೆಗೆ ಕೊರೊನಾ ಲಕ್ಷಣವಿರುವ ವ್ಯಕ್ತಿ ಬಂದಿದ್ದ ಎಂಬುದರ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಹೀಗೆ ಕೊರೊನಾ ರೋಗಿಯೊಬ್ಬ ನಮ್ಮ ಆಸ್ಪತ್ರೆಗೆ ಬಂದಿದ್ದ ಎಂದು ಗೊತ್ತಾದರೆ ಬೇರೆ ರೋಗಿಗಳು ನಮ್ಮ ಆಸ್ಪತ್ರೆಗೆ ಬರ್ತಾರಾ ಎಂದು ಪ್ರಶ್ನೆ ಮಾಡಿ ಕೆಲಸದಿಂದ ತೆಗೆದುಹಾಕಿದ್ದಾರೆ.

ಖಾಸಗಿ ಕ್ಲಿನಿಕ್‌ಗೆ ಬಂದ ರೋಗಿಯಲ್ಲಿ ಸೋಂಕು ಶಂಕೆ ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಆರೋಗ್ಯ ಇಲಾಖೆಗೆ, ಮರುದಿನ ಪೊಲೀಸರಿಗೆ ರಿಪೋರ್ಟ್ ಮಾಡಿದ್ದಕ್ಕೆ, ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಕ್ಕೆ, ಟಿವಿ ಚಾನೆಲ್‌ಗಳ ಮುಂದೆ ಹೇಳಿದ್ದಕ್ಕೆ ನನ್ನನ್ನು ಕೆಲಸದಿಂದ ಕೈಬಿಟ್ಟಿದ್ದಾರೆ.
ರೋಗಿಯ ಬಗ್ಗೆಯಾಗಲೀ, ಕ್ಲಿನಿಕ್ ಕುರಿತಾಗಲೀ ನಾನು ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಮಾಲೀಕರು ಹೇಳುವಂತೆ ಏನೂ ಮಾತನಾಡದೇ ಇರುವ ವಿಚಾರವಂಥದ್ದೇನಿದೆ.
ನಿಮಗೆಲ್ಲಾ ಆರೋಗ್ಯ ಕ್ಷೇತ್ರ ಎನ್ನುವುದು ಬಿಸಿನೆಸ್. ಕ್ಷಮಿಸಿಬಿಡಿ, ತಪ್ಪು ಕಾಣಿಸಿದರೆ ಧೈರ್ಯದಿಂದ ಹೇಳುತ್ತೇನೆ, ಇನ್ನು ಮುಂದೆಯೂ ಅದನ್ನೇ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications