• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಕಿಪಾಕ್ಸ್‌ ಪತ್ತೆ ಹಿನ್ನೆಲೆ: ಕೇರಳಕ್ಕೆ ಬಂದ ಕೇಂದ್ರ ತಂಡ

|
Google Oneindia Kannada News

ತಿರುವನಂತಪುರಂ,ಜುಲೈ.16: ಕೇರಳದಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ಕೇರಳಕ್ಕೆ ಉನ್ನತ ಮಟ್ಟದ ಪರಿಶೀಲನಾ ತಂಡ ಶನಿವಾರ ತಿರುವನಂತಪುರಕ್ಕೆ ಆಗಮಿಸಿದೆ.

ರಾಜ್ಯದಲ್ಲಿ ಪರಿಸ್ಥಿತಿಯ ಅವಲೋಕನ ಮತ್ತು ಅಗತ್ಯ ಮಧ್ಯಸ್ಥಿಕೆಗಳನ್ನು ಶಿಫಾರಸು ಮಾಡುವ ಬಹುಶಿಸ್ತೀಯ ತಂಡವು ಶನಿವಾರ ಆರೋಗ್ಯ ಸೇವೆಗಳ ನಿರ್ದೇಶನಾಲಯಕ್ಕೆ ಆಗಮಿಸಿತು. ತಂಡದ ಸದಸ್ಯರಲ್ಲಿ ಆರೋಗ್ಯ ಸಚಿವಾಲಯದ ಸಲಹೆಗಾರರಾದ ಪಿ ರವೀಂದ್ರನ್, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಜಂಟಿ ನಿರ್ದೇಶಕ ಸಂಕೇತ್ ಕುಲಕರ್ಣಿ ಇತರರು ಇದ್ದರು.

ಹುಷಾರಪ್ಪಾ: ಕೇರಳಕ್ಕೂ ಕಾಲಿಟ್ಟಿದೆ ಜಗತ್ತನ್ನೇ ಕಾಡಿದ ಮಂಕಿಪಾಕ್ಸ್ಹುಷಾರಪ್ಪಾ: ಕೇರಳಕ್ಕೂ ಕಾಲಿಟ್ಟಿದೆ ಜಗತ್ತನ್ನೇ ಕಾಡಿದ ಮಂಕಿಪಾಕ್ಸ್

ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿ ಮಂಗನ ಕಾಯಿಲೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಲಹೆ ಹಾಗೂ ಸಹಕಾರಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಕೇಂದ್ರ ತಂಡವನ್ನು ಕೇರಳಕ್ಕೆ ಧಾವಿಸಿದೆ. ಕೇಂದ್ರ ತಂಡವೂ ಕೊಲ್ಲಂಗೆ ಭೇಟಿ ನೀಡುವ ಸಾಧ್ಯತೆ ಇದ್ದು, ನಾವು ಸರ್ಕಾರದಿಂದ ಸೂಚನೆಗಳನ್ನು ಪಡೆದ ನಂತರ ಬರುತ್ತೇವೆ. ನಾವು ಕೊಲ್ಲಂಗೂ ಕೂಡ ಹೋಗಬಹುದು ಎಂದು ಆರೋಗ್ಯ ಸಚಿವಾಲಯದ ಸಲಹೆಗಾರ ಪಿ. ರವೀಂದ್ರನ್ ಹೇಳಿದ್ದಾರೆ.

ಮಂಕಿಪಾಕ್ಸ್ ರೋಗಿಯೊಬ್ಬರು ದುಬೈನಿಂದ ಕೇರಳಕ್ಕೆ ಆಗಮಿಸಿದ್ದು, ಗುರುವಾರ ಅವರಿಗೆ ಪಾಸಿಟಿವ್‌ ಕಂಡು ಬಂದಿತ್ತು. ಅವರು ಪ್ರಸ್ತುತ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರ ತಂಡವು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ), ಆರ್‌ಎಂಎಲ್ ಆಸ್ಪತ್ರೆ, ನವದೆಹಲಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಾದೇಶಿಕ ಕಚೇರಿಯ ತಜ್ಞರನ್ನು ಒಳಗೊಂಡಿದೆ.

 ಪೂರ್ವಭಾವಿ ಕ್ರಮಗಳ ಕೈಗೊಳ್ಳಲಿದೆ

ಪೂರ್ವಭಾವಿ ಕ್ರಮಗಳ ಕೈಗೊಳ್ಳಲಿದೆ

ಕೇಂದ್ರ ತಂಡವು ರಾಜ್ಯ ಆರೋಗ್ಯ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಪರಿಸ್ಥಿತಿಯನ್ನು ಪರಿಶೀಲಿಸುತ್ತದೆ ಹಾಗೂ ಅಗತ್ಯ ಸಾರ್ವಜನಿಕ ಆರೋಗ್ಯ ಸೂಚನೆಗಳನ್ನು ಶಿಫಾರಸು ಮಾಡುತ್ತದೆ. ಕೇಂದ್ರವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುವ ಮೂಲಕ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಏಕಾಏಕಿ ಸಂಭವಿಸುವ ಆರೋಗ್ಯ ವಿಪತ್ತಿನ ಸಂದರ್ಭದಲ್ಲಿ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ದುಬೈನಿಂದ ಬಂದ ವ್ಯಕ್ತಿಗೆ ಮಂಗನ ಕಾಯಿಲೆ

ದುಬೈನಿಂದ ಬಂದ ವ್ಯಕ್ತಿಗೆ ಮಂಗನ ಕಾಯಿಲೆ

ಮಂಕಿಪಾಕ್ಸ್ ಬಗ್ಗೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ನಿರ್ದೇಶನಗಳನ್ನು ನೀಡಿರುವುದರಿಂದ ಗಾಬರಿಗೊಳ್ಳುವ ಅಗತ್ಯವಿಲ್ಲ. ಗಾಯಗಳು, ದೇಹದ ದ್ರವಗಳು, ಉಸಿರಾಟದ ಮೂಲಕ ಮತ್ತು ಹಾಸಿಗೆಯಂತಹ ಕಲುಷಿತ ವಸ್ತುಗಳೊಂದಿಗಿನ ದೀರ್ಘಕಾಲದ ಸಂಪರ್ಕದಿಂದ ಇದು ಹರಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮಂಕಿಪಾಕ್ಸ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಆ ವ್ಯಕ್ತಿ ದುಬೈನಿಂದ ಬಂದವರಾಗಿದ್ದಾರೆ. ಅವರು ಜುಲೈ 12 ರಂದು ರಾಜ್ಯಕ್ಕೆ ಬಂದು ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಿದರು. ಡಬ್ಲ್ಯೂಎಚ್‌ಒ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

 ಮಂಗನ ಕಾಯಿಲೆಯ ನಿರ್ವಹಣೆಗೆ ಮಾರ್ಗಸೂಚಿ

ಮಂಗನ ಕಾಯಿಲೆಯ ನಿರ್ವಹಣೆಗೆ ಮಾರ್ಗಸೂಚಿ

ಏತನ್ಮಧ್ಯೆ, ಕೇಂದ್ರ ಸರ್ಕಾರ ಗುರುವಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಮಂಕಿಪಾಕ್ಸ್‌ ರೋಗ ಹರಡುವುದನ್ನು ತಡೆಯಲು ಅಗತ್ಯವಿರುವ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮೇ 31ರಂದು ಸಚಿವಾಲಯವು ಕಳುಹಿಸಿದ ಪತ್ರವನ್ನು ಉಲ್ಲೇಖಿಸಿ ಅದರಲ್ಲಿ ಸಮಗ್ರವಾಗಿ ಮಂಗನ ಕಾಯಿಲೆಯ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

 ಸಮಯೋಚಿತ ಚಿಕಿತ್ಸೆ ನೀಡಲು ಕ್ರಮ

ಸಮಯೋಚಿತ ಚಿಕಿತ್ಸೆ ನೀಡಲು ಕ್ರಮ

ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಎಲ್ಲಾ ಶಂಕಿತ ಪ್ರಕರಣಗಳನ್ನು ಆರಂಭದಲ್ಲೇ ಜನ ಸಮುದಾಯದಲ್ಲಿ ಪರೀಕ್ಷಿಸಲು ಹೇಳಿದ್ದಾರೆ. ರೋಗಿಯ ಪ್ರತ್ಯೇಕತೆ, ಹುಣ್ಣುಗಳ ಅವಲೋಕನ, ರೋಗಲಕ್ಷಣ ಮತ್ತು ಪೂರಕ ಚಿಕಿತ್ಸೆಗಳು, ನಿರಂತರ ಮೇಲ್ವಿಚಾರಣೆ ಮತ್ತು ತೊಡಕುಗಳ ಸಮಯೋಚಿತ ಚಿಕಿತ್ಸೆಯು ಮರಣವನ್ನು ತಡೆಗಟ್ಟುವ ಪ್ರಮುಖ ಕ್ರಮಗಳಾಗಿವೆ ಎಂದು ಅವರು ಹೇಳಿದರು.

 ಒಟ್ಟು 3,413 ಮಂಕಿಪಾಕ್ಸ್ ಪ್ರಕರಣ ಪತ್ತೆ

ಒಟ್ಟು 3,413 ಮಂಕಿಪಾಕ್ಸ್ ಪ್ರಕರಣ ಪತ್ತೆ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮಂಕಿಪಾಕ್ಸ್ ಒಂದು ವೈರಸ್‌ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರವಾಗಿರುತ್ತದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದಂತೆ ಜನವರಿ 1, 2022ರಿಂದ ಮತ್ತು ಜೂನ್ 22, 2022ರವರೆಗೆ, 50 ದೇಶಗಗಳಿಂದ ಒಟ್ಟು 3,413 ಮಂಕಿಪಾಕ್ಸ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ.

English summary
A high-level inspection team from the Center for Kerala arrived in Thiruvananthapuram on Saturday in view of the detection of monkeypox infection in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X