ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BREAKING: ಕೇರಳದಲ್ಲಿ 3 ವರ್ಷದ ಮಗುವಿಗೂ ಕೊರೊನಾ ಸೋಂಕು

|
Google Oneindia Kannada News

ತಿರುವನಂತಪುರಂ, ಮಾರ್ಚ್ 9: ಚೀನಾ, ಇಟಲಿಯಲ್ಲಿ ಸಾವಿರಾರು ಮಂದಿ ಬಲಿಪಡೆದಿರುವ ಕೊವಿಡ್ 19 ಇದೀಗ ಕೇರಳದಲ್ಲಿ ಮೂರು ವರ್ಷದ ಮಗವಿಗೂ ತಗುಲಿದೆ.

ಮಗು ಇತ್ತೀಚೆಗಷ್ಟೇ ಪೋಷಕರ ಜೊತೆ ಇಟಲಿಗೆ ಹೋಗಿದ್ದು, ಅಲ್ಲಿಂದ ವಾಪಸಾದ ಬಳಿಕ ಕೊರೊನಾ ವೈರಸ್‌ ಲಕ್ಷಣಗಳು ಕಾಣಿಸಿಕೊಂಡಿದೆ. ಮಗುವನ್ನು ಎರ್ನಾಕುಲಮ್‌ನಲ್ಲಿರುವ ಮೆಡಿಕಲ್ ಕಾಲೇಜಿನ ಐಸೋಲೇಷನ್‌ನಲ್ಲಿ ಇಡಲಾಗಿದೆ. ಇದೀಗ ಕೇರಳದಲ್ಲಿ ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ 9ಕ್ಕೆ ಏರಿಕೆಯಾದಂತಾಗಿದೆ.

ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು

ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು

ಮಾರಕ ಕೊರೊನಾ ವೈರಸ್ ಭಾರತದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದ್ದು, ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ವೈರಾಣು ತಗುಲಿರುವ ಆಘಾತಕಾರಿ ಬೆಳವಣಿಗೆ ನಡೆದಿದೆ.

ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!ಕೊರೊನಾ ವೈರಸ್ ಭೀತಿಯ ನಡುವೆ ಕೇರಳದಲ್ಲಿ ಹಕ್ಕಿ ಜ್ವರ!

ವಿಮಾನ ನಿಲ್ದಾಣದಲ್ಲೂ ತಪಾಸಣೆ ಮಾಡಿಸಿರಲಿಲ್ಲ

ವಿಮಾನ ನಿಲ್ದಾಣದಲ್ಲೂ ತಪಾಸಣೆ ಮಾಡಿಸಿರಲಿಲ್ಲ

ಈ ಐವರು ಇಟಲಿಯಿಂದ ಮರಳಿ ಬಂದ ಕುರಿತು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದ್ದು, ವಿಮಾನ ನಿಲ್ದಾಣದಲ್ಲೂ ಪರೀಕ್ಷೆ ಮಾಡಿಸಿರಲಿಲ್ಲ. ಇತ್ತೀಚಿಗೆ ಇಟಲಿಗೆ ಪ್ರಯಾಣ ಬೆಳೆಸಿದ್ದ ಒಂದೇ ಕುಟುಂಬದ ಐವರಲ್ಲಿ ಕೊರೊನಾ ವೈರಸ್ ಪರೀಕ್ಷೆ ನಡೆಸಿದಾಗ ಧನಾತ್ಮಕ ಫಲಿತಾಂಶ ಹೊರ ಬಂದಿರುವುದು ಕೇರಳವನ್ನು ಬೆಚ್ಚಿ ಬೀಳಿಸಿದೆ.

ಆಸ್ಪತ್ರೆಗೆ ದಾಖಲಿಸಲೂ ನಿರಾಕರಿಸಿದ್ದರು

ಆಸ್ಪತ್ರೆಗೆ ದಾಖಲಿಸಲೂ ನಿರಾಕರಿಸಿದ್ದರು

ಈ ಕುರಿತು ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ, ಒಂದೇ ಕುಟುಂಬದ ಐವರು ಸದಸ್ಯರು ಆಸ್ಪತ್ರೆಗೆ ದಾಖಲಾಗಲೂ ನಿರಾಕರಿಸಿದ್ದರು ಎಂದು ಹೇಳಿದ್ದಾರೆ. ನಂತರ ಬಲವಂತವಾಗಿ ಐವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೇರಳದಲ್ಲಿ ಒಂದೇ ಕುಟುಂಬದ 5 ಮಂದಿಗೆ ಕೊರೊನಾ ಸೋಂಕುಕೇರಳದಲ್ಲಿ ಒಂದೇ ಕುಟುಂಬದ 5 ಮಂದಿಗೆ ಕೊರೊನಾ ಸೋಂಕು

ಐವರಲ್ಲಿ ಓರ್ವ ಮಗು ಕೂಡ ಇದೆ

ಐವರಲ್ಲಿ ಓರ್ವ ಮಗು ಕೂಡ ಇದೆ

ಇನ್ನು ಕೇರಳದಲ್ಲಿ ಐವರಿಗೆ ಕೊರೊನಾ ಸೋಂಕು ತಗುಲುವ ಮೂಲಕ ಭಾರತದಲ್ಲಿ ಇದುವರೆಗೂ ವೈರಾಣುವಿನ 39 ಪ್ರಕರಣಗಳು ದಾಖಲಾಗಿವೆ. ಇದು ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿರುವುದರತ್ತ ಬೊಟ್ಟು ಮಾಡಿದ್ದು, ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.

English summary
One 3-year-old child who recently travelled to Italy has been tested positive for CoronaVirus. The child has been kept in isolation ward at Ernakulam Medical College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X