Money: ಕೈ ತುಂಬಾ ಹಣ - ಐಷಾರಾಮಿ ಜೀವನ ನಡೆಸಬೇಕೇ, ಈ ಐದು ವಾಸ್ತು ಸಲಹೆಗಳನ್ನು ಅನುಸರಿಸಿದರೆ ಸಾಕು
Money: ವಾಸ್ತು ಶಾಸ್ತ್ರದಲ್ಲಿ, ಮನೆಯ ದಿಕ್ಕು ಮತ್ತು ಅಲ್ಲಿ ಇರಿಸಲಾಗಿರುವ ವಸ್ತುಗಳು ಬಹಳ ಮುಖ್ಯವಾಗಿರುತ್ತದೆ. ಸರಿಯಾದ ಶಕ್ತಿಯನ್ನು ಹೊಂದಿರುವ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಂಪತ್ತು ಹೆಚ್ಚಾಗುವುದು. ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ.
ಕೈ ತುಂಬಾ ಸಂಪಾದಿಸುತ್ತಾರೆ. ಆದರೂ ಕೈಯ್ಯಲ್ಲಿ ಹಣ ಉಳಿಯುವುದೇ ಇಲ್ಲ. ಒಂದಲ್ಲ ಒಂದು ರೀತಿಯ ಆರ್ಥಿಕ ಸಮಸ್ಯೆಗಳು ಎದುರಾಗುತ್ತಲೇ ಇರುವುದು. ಹೀಗಾದಾಗ ಕೆಲವು ಸರಳ ವಾಸ್ತು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಾಸ್ತು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುವುದು. ಈ ಮೂಲಕ ಪ್ರಗತಿಯ ದಾರಿ ತೆರೆದುಕೊಳ್ಳುವುದು.
ಮುಖ್ಯ ದ್ವಾರ
ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರವು ಯಾವಾಗಲೂ ಸ್ವಚ್ಛ ಮತ್ತು ವ್ಯವಸ್ಥಿತವಾಗಿರಬೇಕು. ಧನಾತ್ಮಕ ಶಕ್ತಿಯು ಇಲ್ಲಿಂದಲೇ ಮನೆಯೊಳಗೆ ಪ್ರವೇಶಿಸುವುದು. ಬಾಗಿಲಿನ ಸುತ್ತಲೂ ಕಸ ಅಥವಾ ಮುರಿದ ವಸ್ತುಗಳನ್ನು ಇಡಬಾರದು. ಅನೇಕರು ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಅಥವಾ ಶುಭ ಚಿಹ್ನೆಯನ್ನು ಇಡುತ್ತಾರೆ.

ಇದು ಯಾವಾಗಲೂ ಶುಭ ಪರಿಣಾಮಗಳನ್ನು ಬೀರುತ್ತದೆ. ಇದಲ್ಲದೆ, ಸಂಜೆ ಮನೆಯ ಹೊರಗೆ ಅಂದರೆ ಮುಖ್ಯ ದ್ವಾರದ ಬಳಿ ದೀಪವನ್ನು ಬೆಳಗಬೇಕು. ಇದು ಸಹ ವಾಸ್ತು ದೋಷವನ್ನು ನಿವಾರಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣವನ್ನು ಸೃಷ್ಟಿಸುತ್ತದೆ.
ಆರ್ಥಿಕ ಸ್ಥಿತಿ ಬಲಪಡಿಸಲು
ಮನೆಯ ಉತ್ತರ ಭಾಗವು ಸಂಪತ್ತಿನೊಂದಿಗೆ ಸಂಬಂಧ ಹೊಂದಿದೆ. ವಾಸ್ತು ನಂಬಿಕೆಗಳ ಪ್ರಕಾರ, ಈ ದಿಕ್ಕು ಯಾವಾಗಲೂ ಖಾಲಿಯಾಗಿರಬೇಕು. ಈ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಸಂಗ್ರಹಿಸಿಡಬಾರದು. ಅನೇಕರು ಈ ದಿಕ್ಕಿನಲ್ಲಿ ನೀರಿಗೆ ಸಂಬಂಧಿಸಿದ ವಸ್ತುಗಳನ್ನು ಇಡುತ್ತಾರೆ. ಉತ್ತರ ದಿಕ್ಕಿನಲ್ಲಿ ಸಣ್ಣ ಕಾರಂಜಿ ಅಥವಾ ನೀರಿನ ಪಾತ್ರೆ ಇಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಸುಧಾರಿಸುವುದು. ನೈಋತ್ಯ ದಿಕ್ಕಿನಲ್ಲಿ ಲಾಕರ್ ಅಥವಾ ಹಣದ ಸಂಗ್ರಹಣಾ ಸ್ಥಳವನ್ನು ಇಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಗ್ಯಾಸ್ ಸ್ಟೌವ್ ಶುಚಿಯಾಗಿರಬೇಕು
ವಾಸ್ತುವಿನಲ್ಲಿ ಅಡುಗೆಮನೆ ಮತ್ತು ದೇವರ ಕೋಣೆಯ ಬಗ್ಗೆ ಸಹ ಉಲ್ಲೇಖಿಸಲಾಗಿದೆ. ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಗ್ಯಾಸ್ ಸ್ಟೌವ್ ಸುತ್ತಲೂ ಯಾವುದೇ ರೀತಿಯ ಅಸ್ತವ್ಯಸ್ತತೆ ಇರಬಾರದು. ದೇವರ ಕೋಣೆಯಲ್ಲಿ ಪ್ರತಿದಿನ ದೀಪ ಮತ್ತು ಧೂಪದ್ರವ್ಯವನ್ನು ಬೆಳಗಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಹೆಚ್ಚಿನವರು ತಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ. ವಾಸ್ತು ಪ್ರಕಾರ, ತುಳಸಿಯನ್ನು ಸಂತೋಷ ಮತ್ತು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೆಟ್ಟು ನಿಂತ ಗಡಿಯಾರ ಅಶುಭ
ವಾಸ್ತುದಲ್ಲಿ, ಮುರಿದ ವಸ್ತುಗಳು ಮತ್ತು ನಿಂತುಹೋದ ಗಡಿಯಾರಗಳನ್ನು ಅಶುಭವೆಂದು ಹೇಳಲಾಗುತ್ತದೆ. ಅಂಥಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಆದ್ದರಿಂದ, ಹಳೆಯ ಮತ್ತು ಹಾನಿಗೊಳಗಾದ ವಸ್ತುಗಳನ್ನು ಕಾಲಕಾಲಕ್ಕೆ ಮನೆಯಿಂದ ಹೊರ ಹಾಕಬೇಕು. ಮನೆಯಲ್ಲಿ ಸೌಮ್ಯವಾದ ಪರಿಮಳ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಶುದ್ಧ ವಾತಾವರಣ ಮತ್ತು ಸಕಾರಾತ್ಮಕ ಚಿಂತನೆ ಇರುವಲ್ಲಿ ಪ್ರಗತಿ ತಾನಾಗಿಯೇ ಹರಿದು ಬರುತ್ತದೆ. ಹಾಗಾಗಿಯೇ ಜನರು ತಮ್ಮ ಜೀವನದಲ್ಲಿ ವಾಸ್ತುವಿನ ಸರಳ ನಿಯಮಗಳನ್ನು ಅನುಸರಿಸುತ್ತಾರೆ.
ಬರಹ: ರಂಜಿತಾ ಆರ್.ಕೆ













Click it and Unblock the Notifications