Adani: ಉದ್ಯಮಿ ಅದಾನಿ ಮೇಲಿನ ಕ್ರಿಮಿನಲ್ ಪ್ರಕರಣಗಳ ಕೈ ಬಿಟ್ಟ ಯುಎಸ್ ನ್ಯಾಯ ಇಲಾಖೆ
ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅಮೆರಿಕಾದ ನ್ಯಾಯಾಂಗ ಇಲಾಖೆ (DOJ) ಇವರ ವಿರುದ್ಧದ ನ್ಯೂಯಾರ್ಕ್‌ನಲ್ಲಿ ದಾಖಲಾಗಿದ್ದ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಸೇರಿದಂತೆ ಎಲ್ಲಾ ಕ್ರಿಮಿನಲ್ ಆರೋಪ ಪ್ರಕರಣಗಳನ್ನು ಶಾಶ್ವತವಾಗಿ ಕೈಬಿಟ್ಟಿದೆ. ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಮತ್ತು ಅದಾನಿ ಗ್ರೂಪ್‌ಗೆ ಇದು ಬಹುದೊಡ್ಡ ಸಮಾಧಾನ ತಂದಿದೆ. ದೀರ್ಘಕಾಲದ ಕಾನೂನು ಸಮರಕ್ಕೆ ತೆರೆ ಬಿದ್ದಿದೆ.
ನ್ಯಾಯಾಲಯವು ಆರೋಪಪಟ್ಟಿಯನ್ನು "ಪೂರ್ವಗ್ರಹದಿಂದ ವಜಾಗೊಳಿಸಿದೆ. ಇದರರ್ಥ ಭವಿಷ್ಯದಲ್ಲಿ ಈ ಪ್ರಕರಣವನ್ನು ಪುನರಾರಂಭಿಸಲು ಸಾಧ್ಯವಿಲ್ಲ. ಸಂಬಂಧಿತ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಮತ್ತು ಅಮೆರಿಕಾ ಖಜಾನೆ ಇಲಾಖೆಯ ವಿದೇಶಿ ಸ್ವತ್ತುಗಳ ನಿಯಂತ್ರಣ ಕಚೇರಿ (OFAC) ಇತ್ಯರ್ಥಗಳನ್ನು ವಿಶಾಲವಾದ ನಿಯಂತ್ರಕ ಇತ್ಯರ್ಥಗಳ ಭಾಗವಾಗಿ ಪರಿಗಣಿಸಲಾಗಿದೆ ಎಂದು ವರದಿ ಆಗಿದೆ. ಅಮೆರಿಕಾದ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, ವಿಷಯವನ್ನು ಸಮಗ್ರ ಪರಿಶೀಲಿ ಪ್ರಕರಣಕ್ಕೆ ಹೆಚ್ಚಿನ ಕಾನೂನು ಸಂಪನ್ಮೂಲಗಳನ್ನು ಮೀಸಲಿಡದಿರಲು ನ್ಯಾಯಾಂಗ ಇಲಾಖೆ ನಿರ್ಧರಿಸಿತ್ತು. ನ್ಯಾಯಾಂಗ ಇಲಾಖೆಯು ಈ ಪ್ರಕರಣವನ್ನು ಪರಿಶೀಲಿಸಿದೆ. ವೈಯಕ್ತಿಕ ಪ್ರತಿವಾದಿಗಳ ವಿರುದ್ಧದ ಈ ಕ್ರಿಮಿನಲ್ ಆರೋಪಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸದಿರಲು ತನ್ನ ಪ್ರಾಸಿಕ್ಯೂಟೋರಿಯಲ್ ವಿವೇಚನೆಯಲ್ಲಿ ನಿರ್ಧರಿಸಿದ್ದನ್ನು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

ಹೂಡಿಕೆದಾರರ ಚಿಂತೆ ದೂರ
ಈ ಕಾನೂನು ಸಮರವು 2024ರ ಅಂತ್ಯದಿಂದ ಅದಾನಿ ಗ್ರೂಪ್‌ನ ಅಂತಾರಾಷ್ಟ್ರೀಯ ವ್ಯಾಪಾರ ವಿಸ್ತರಣೆ ಮತ್ತು ಹೂಡಿಕೆದಾರರ ಭಾವನೆಗಳ ಮೇಲೆ ಆವರಿಸಿದ್ದ ಅನಿಶ್ಚಿತತೆ ದೂರ ಮಾಡಿದೆ. ದೇಸದಲ್ಲಿ ಸೌರ ಶಕ್ತಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರ ಬಹಿರಂಗಪಡಿಸುವಿಕೆ ಕುರಿತ ನಾಗರಿಕ ಹಣಕಾಸು ಆರೋಪಗಳನ್ನು ಅಮೆರಿಕಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ (SEC) ಇತ್ಯರ್ಥಪಡಿಸಿದ ಕೆಲವು ದಿನಗಳ ನಂತರ ಕೈ ಬಿಡಲು ನಿರ್ಧರಿಸಿದೆ.
ಹಣ ಪಾವತಿಗೆ ಒಪ್ಪಿಕೊಂಡ ಅದಾನಿ
ಎಸ್‌ಇಸಿ ಜೊತೆಗಿನ ಇತ್ಯರ್ಥದ ಭಾಗವಾಗಿ, ಗೌತಮ್ ಅದಾನಿ ಯಾವುದೇ ತಪ್ಪನ್ನು ಒಪ್ಪಿಕೊಳ್ಳದೆ 6 ಮಿಲಿಯನ್ ಪಾವತಿಸಲು ಒಪ್ಪಿದ್ದರು. ಅದೇ ರೀತಿ, ಸಾಗರ್ ಅದಾನಿ 12 ಮಿಲಿಯನ್ ಪಾವತಿಸಲು ಒಪ್ಪಿಕೊಂಡಿದ್ದಾರೆ. ಇನ್ನೂ ಅಮೆರಿಕಾದ ಖಜಾನೆ ಇಲಾಖೆಯ ವಿದೇಶಿ ಸ್ವತ್ತುಗಳ ನಿಯಂತ್ರಣ ಕಚೇರಿ ಇರಾನ್ ನಿರ್ಬಂಧಗಳಿಗೆ ಸಂಬಂಧಿಸಿದ ಎಲ್‌ಪಿಜಿ ಆಮದುಗಳ ಆರೋಪಗಳ ಕುರಿತಾದ ತನ್ನ ತನಿಖೆ ಮುಗಿಸಿದೆ. ಇದರಲ್ಲಿ ಅದಾನಿ ಗ್ರೂಪ್ 275 ಮಿಲಿಯನ್ ಪಾವತಿಗೆ ಒಪ್ಪಿದೆ ಎಂದು ವರದಿಗಳು ಮಾಹಿತಿ ನೀಡಿವೆ.
ಯುಎಸ್ ನ್ಯಾಯ ಇಲಾಖೆಯು ಈ ವಜಾಗೊಳಿಸುವಿಕೆಯೊಂದಿಗೆ, ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಅಮೆರಿಕಾದಲ್ಲಿನ ಹಲವಾರು ನಿಯಂತ್ರಕ ಮತ್ತು ಕಾನೂನು ಪ್ರಕ್ರಿಯೆಗಳು ಕೆಲವೇ ದಿನಗಳಲ್ಲಿ ಇತ್ಯರ್ಥಗೊಂಡಿವೆ. ಇದು ಗ್ರೂಪ್‌ಗೆ ಯುಎಸ್ ಮಾರುಕಟ್ಟೆಯಲ್ಲಿನ ವ್ಯಾಪಾರ ಚಟುವಟಿಕೆ ಸುಗಮವಾಗಲು, ಅದಾನಿ ಗ್ರೂಪ್ ಮುಂದಡಿ ಇಡಲು ಇದು ಪೂರಕವಾಗಿದೆ. 2024ರ ಅಂತ್ಯದಲ್ಲಿ ಅದಾನಿ ಅವರ ವಿರುದ್ಧ ಪ್ರಕರಣಗಳು ನಡೆದಿದ್ದವು. ಭಾರತದಲ್ಲಿನ ಸೌರ ವಿದ್ಯುತ್ ಗುತ್ತಿಗೆಗಳಿಗೆ ಸಂಬಂಧಿಸಿದ 65 ಮಿಲಿಯನ್ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಬಂಡವಾಳ ಸಂಗ್ರಹಿಸುವಾಗ ಅಮೆರಿಕಾದ ಹೂಡಿಕೆದಾರರು ಮತ್ತು ಸಾಲದಾತರಿಂದ ಈ ಯೋಜನೆಯ ಬಗ್ಗೆ ಮಾಹಿತಿ ಮರೆಮಾಚಲಾಗಿದೆ ಎಂದು ವಾದಿಸಲಾಗಿತ್ತು.
ಆರೋಪ ಸಾಬೀತುಪಡಿಸುವಲ್ಲಿ ವಿಫಲ
ಪ್ರಾಸಿಕ್ಯೂಟರ್‌ಗಳು ಆರೋಪಗಳನ್ನು ಸಮರ್ಥಿಸಲು ಸಾಕಷ್ಟು ಸಾಕ್ಷ್ಯಗಳನ್ನು ಅಥವಾ ಯುಎಸ್ ನ್ಯಾಯವ್ಯಾಪ್ತಿಯ ಸ್ಪಷ್ಟ ಸಂಪರ್ಕಗಳನ್ನು ಸ್ಥಾಪಿಸಲು ವಿಫಲರಾಗಿದ್ದಾರೆ. ಯುಎಸ್ ಅಧಿಕಾರಿಗಳು ಅಮೆರಿಕಾಯೇತರ ಪ್ರದೇಶಗಳಲ್ಲಿ ನಡೆದ ಘಟನೆಗಳಿಗೆ ಅಮೆರಿಕಾದ ಸೆಕ್ಯುರಿಟೀಸ್ ಕಾನೂನುಗಳನ್ನು ಅತಿಯಾಗಿ ಅನ್ವಯಿಸುತ್ತಿದ್ದಾರೆ ಎಂದು ಕಾನೂನು ತಜ್ಞರು ಪ್ರಶ್ನೆ ಎತ್ತಿದ್ದರು.
2026 ಏಪ್ರಿಲ್ 7ರಂದು ವರದಿ ಸಲ್ಲಿಸಿದ್ದರಲ್ಲಿ ಅದಾನಿಯ ಕಾನೂನು ತಂಡವು ಎಸ್‌ಇಸಿ ಕಾರ್ಯವಿಧಾನಗಳನ್ನು ಬಲವಾಗಿ ಪ್ರಶ್ನಿಸಿತ್ತು. ಈ ಪ್ರಕರಣವು ಯುಎಸ್ ಸೆಕ್ಯುರಿಟೀಸ್ ಕಾನೂನುಗಳ "ಅನುಮತಿಸಲಾಗದ ಅತಿದೇಶ್ವೀಯ ಅನ್ವಯ" ಎಂದು ವಾದಿಸಲಾಗಿತ್ತು. ಭಾರತೀಯ ಪ್ರತಿವಾದಿಗಳು ಮತ್ತು ಯುಎಸ್ ಸ್ಟಾಕ್ ವಿನಿಮಯ ಕೇಂದ್ರಗಳಲ್ಲಿ ವಹಿವಾಟು ನಡೆಸದ ಸೆಕ್ಯುರಿಟಿಗಳನ್ನು ಒಳಗೊಂಡಿದೆ ಎಂದು ಸಮರ್ಥಿಸಿಕೊಂಡರು.
ಅದಾನಿ ಮೇಲಿನ ತಪ್ಪು ಹೇಳಿಕೆಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದ್ದಾರೆ. ಗೌತಮ್ ಅದಾನಿ ಅಥವಾ ಸಾಗರ್ ಅದಾನಿಯವರ ಮೇಲಿನ ಆರೋಪ ಸಾಬೀತಾಗಿಲ್ಲ. ಯಾವುದೇ ಹೂಡಿಕೆದಾರರಿಗೆ ನಷ್ಟ ಸಂಭವಿಸಿಲ್ಲ. ಅದಾನಿ ಅವರು ಎಲ್ಲಾ ಬಾಂಡ್ ಕಟ್ಟುಪಾಡುಗಳನ್ನು ಗೌರವಿಸಲಾಗಿದೆ ಎಂದು ರಕ್ಷಣಾ ತಂಡ ಸ್ಪಷ್ಟಪಡಿಸಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ವಿನೀತ್ ಜೈನ್ ವಿರುದ್ಧ ಸೆಕ್ಯುರಿಟೀಸ್ ಮತ್ತು ವೈರ್ ವಂಚನೆ ಕಾನೂನುಗಳ ಅಡಿಯಲ್ಲಿ ಮಾತ್ರ ಆರೋಪಗಳನ್ನು ದಾಖಲಿಸಲಾಗಿತ್ತು. ವಿಶಾಲವಾದ ಪ್ರಕರಣದಲ್ಲಿ ದಾಖಲಾದ ಹೆಚ್ಚು ಗಂಭೀರವಾದ ವಿದೇಶಿ ಭ್ರಷ್ಟಾಚಾರ ಆಚರಣೆಗಳ ಕಾಯಿದೆ (FCPA) ಲಂಚ ಆರೋಪಗಳು ಅಥವಾ ಅಡಚಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅವರನ್ನು ಹೆಸರಿಸಲಾಗಿಲ್ಲ. ಇದೆಲ್ಲ ಪರಿಶೀಲಿಸಿದ ನ್ಯಾಯ ಇಲಾಖೆ ಅದಾನಿ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಶಾಶ್ವತವಾಗಿ ಕೈ ಬಿಟ್ಟಿದೆ.













Click it and Unblock the Notifications