Get Updates
Get notified of breaking news, exclusive insights, and must-see stories!

ವಯನಾಡಿನಲ್ಲಿ ರಾಹುಲ್ vs ರಾಹುಲ್ vs ರಾಹುಲ್ ಗಾಂಧಿ

ವಯನಾಡು, ಏಪ್ರಿಲ್ 07: ಕರ್ನಾಟಕದ ಮಂಡ್ಯದಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಗೊತ್ತಿರಬಹುದು. ಈಗ ರೀತಿ ಪ್ರಸಂಗ ಈಗ ದೇವರನಾಡು ಕೇರಳದ ಕುತೂಹಲಕಾರಿ ಕಣ ವಯನಾಡಿನಲ್ಲಿ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಇನ್ನಿಬ್ಬರು ರಾಹುಲ್ ಹೆಸರಿನವರು ಸ್ಪರ್ಧಿಸುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕರ್ನಾಟಕದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಇನ್ನು ಮೂವರು ಸುಮಲತಾ ಸ್ಪರ್ಧಿಸಿದ್ದಾರೆ.

ಉತ್ತರಪ್ರದೇಶದ ಅಮೇಥಿ ಅಲ್ಲದೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ನಾಮಪತ್ರ ಸಲ್ಲಿಸಿದ ಕೆಲ ಗಂಟೆಗಳಲ್ಲೇ ರಾಹುಲ್ ಹೆಸರಿನ ಇನ್ನಿಬ್ಬರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದರೆ ಅವರ ಎದುರು ಸ್ಪರ್ಧಿಸಲು ಈ ಮೊದಲೇ ಇವರಿಬ್ಬರು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.

Congress President Rahul Gandhi to take on three namesakes in Wayanad polls

ಕೇರಳ ವಿಶ್ವವಿದ್ಯಾಲಯದಲ್ಲಿ ಜಾನಪದ ಸಂಗೀತ ವಿಷಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಎರುಮೆಲಿ ನಿವಾಸಿ, 33 ವರ್ಷ ವಯಸ್ಸಿನ ರಾಹುಲ್ ಗಾಂಧಿ ಕೆ.ಇ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿಶೇಷ ವೆಂದರೆ ರಾಹುಲ್ ಗಾಂಧಿ ಕೆ. ಇ ಅವರ ಕಿರಿಯ ಸೋದರನ ಹೆಸರು ರಾಜೀವ್ ಗಾಂಧಿ ಕೆ.ಇ.

ಮತ್ತೊಬ್ಬ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಅಖಿಲ ಭಾರತ ಮಕ್ಕಳ್ ಘಟಕದ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಇವರ ಜೊತೆಗೆ 40 ವರ್ಷ ವಯಸ್ಸಿನ ಸಂಸ್ಕೃತ ಟೀಚರ್ ಕೆ.ಎಂ. ಶಿವಪ್ರಸಾದ್​ ಗಾಂಧಿ ಎಂಬುವವರು ಪಕ್ಷೇತರ ಅಭ್ಯರ್ಥಿಯೂ ಇದ್ದಾರೆ. ಇವರೆಲ್ಲರ ವಿರುದ್ಧ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್​ನಾಯರ್​ ಸ್ಪರ್ಧಿಸುತ್ತಿದ್ದಾರೆ. ಅಂತಿಮವಾಗಿ ವಯನಾಡು ಲೋಕಸಭೆ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+