ಕಾರಿಗೆ ಅಂಟಿಸಿದ್ದ ಲಾಡೆನ್ ಸ್ಟಿಕ್ಕರ್ ನಿಂದ ಸಮಸ್ಯೆಗೆ ಸಿಲುಕಿದ ವಿದ್ಯಾರ್ಥಿ

ಕೊಲ್ಲಂ (ಕೇರಳ), ಮೇ 3: ಕೊಲ್ಲಂ ಜಿಲ್ಲೆಯ ಮುಂದಕ್ಕಲ್ ನ ಅಂತಿಮ ವರ್ಷದ ಬಿ.ಕಾಂ., ವಿದ್ಯಾರ್ಥಿಯೊಬ್ಬ ತನ್ನ ಕಾರಿಗೆ ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ನ ಸ್ಟಿಕ್ಕರ್ ಅಂಟಿಸುವ ಮೂಲಕ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಿದ್ದಾನೆ. ಇಪ್ಪತ್ತೆರಡು ವರ್ಷದ ಮಹಮ್ಮದ್ ಹನೀಫ್ ಕಾರಿನ ಮಾಲೀಕ. ಆತ ಚವರದಲ್ಲಿ ಇರುವ ಎಂ.ಎಸ್.ಎನ್. ಕಾಲೇಜಿನ ವಿದ್ಯಾರ್ಥಿ ಆತ.

ಎರವಿಪುರಂ ಪೊಲೀಸರು ಪಲ್ಲಿಮುಕ್ಕುಯಿಂದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನ ಹಿಂಭಾಗದಲ್ಲಿ ಅಂಟಿಸಿದ್ದ ಒಸಾಮಾ ಬಿನ್ ಚಿತ್ರವನ್ನು ದಾರಿಹೋಕರೊಬ್ಬರು ಗಮನಿಸಿ, ಪೊಲೀಸರಿಗೆ ಗುರುವಾರ ದೂರು ನೀಡಿದ್ದರು. ಪೊಲೀಸರು ಕಾರನ್ನು ವಶಕ್ಕೆ ಪಡೆಯುವ ವೇಳೆ ಅದರಲ್ಲಿ ಚಾಲಕ ಸೇರಿ ಮೂವರಿದ್ದರು. ಚಾಲಕನನ್ನು ಹರೀಶ್ ಎಂದು ಗುರುತಿಸಲಾಗಿದೆ.

ಹನೀಫ್ ನಿಂದ ಹರೀಶ್ ಮದುವೆ ಸಲುವಾಗಿ ಕಾರನ್ನು ಬಾಡಿಗೆಗೆ ಪಡೆದಿದ್ದರು. ಆ ನಂತರ ಹನೀಫ್ ಗೆ ಪೊಲೀಸರು ಸಮನ್ ಕಳಿಸಿದ್ದಾರೆ. ನಾನು ಈಚೆಗೆ ತಮಾಷೆಗಾಗಿ ಆ ಸ್ಟಿಕ್ಕರ್ ಹಾಕಿಸಿದೆ ಎಂದು ಆತ ಹೇಳಿದ್ದಾನೆ. ಕಾರನ್ನು ಬಾಡಿಗೆಗೆ ಪಡೆದವರು ಹಾಗೂ ಅದರ ಮಾಲೀಕನನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Osama Bin Laden

ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಕೇರಳದಲ್ಲಿ ಗುಪ್ತಚರ ಇಲಾಖೆಯಿಂದ ಎಚ್ಚರಿಕೆ ಸಂದೇಶ ಬಂದಿದೆ. ಈ ಕಾರಣಕ್ಕೆ ಪೊಲೀಸರು ಹೈ ಅಲರ್ಟ್ ನಲ್ಲಿ ಇದ್ದಾರೆ. ಇಂಥ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+