• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯ್ಯಪ್ಪ ಭಕ್ತರು ಬೆಚ್ಚಿ ಬೀಳಿಸುವ ಕೇರಳದ ಗುಪ್ತಚರ ಇಲಾಖೆ ವರದಿ

|
   Sabarimala verdict: ಅಯ್ಯಪ್ಪ ಭಕ್ತರು ಬೆಚ್ಚಿ ಬೀಳಿಸುವ ಕೇರಳದ ಗುಪ್ತಚರ ಇಲಾಖೆ ವರದಿ | Oneindia Kannada

   ಮೊನ್ನೆಮೊನ್ನೆ ಮೂವರು ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು, ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿ ವಿಫಲವಾಗಿದ್ದು ಬರೀ ಟ್ರೈಲರಾ.. ಅಸಲಿ ಸಿನಿಮಾ ಸದ್ಯದಲ್ಲೇ ಎದುರಾಗಲಿದೆಯಾ?

   ಕೇರಳದ ಪಿಣರಾಯಿ ವಿಜಯನ್ ಸರಕಾರಕ್ಕೆ ಗುಪ್ತಚರ ಇಲಾಖೆ ನೀಡಿದ ವರದಿಯ ಪ್ರಕಾರ, ಡಿಸೆಂಬರ್ 30ರೊಳಗೆ ಶತಾಯಗತಾಯು ಶಬರಿಮಲೆ ದೇವಾಲಯದೊಳಗೆ ಮಹಿಳೆಯರನ್ನು ಕಳುಹಿಸಲು ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು, ನಡೆಸಲು ವಾಮವಾದಿ ಸಂಘಟೆನೆಯೊಂದು ಕಾರ್ಯತಂತ್ರ ರೂಪಿಸಿದೆ.

   ಅಯ್ಯಪ್ಪನ ದರ್ಶನ ಮಾಡದೆ ಹಿಂದಿರುಗಲ್ಲ : ಇಬ್ಬರು ಮಹಿಳೆಯರ ಸವಾಲು

   ಇತ್ತ, ಕೇರಳದಲ್ಲಿ ಶಬರಿಮಲೆ ವಿವಾದ ಭಾರೀ ಅಲೆಯನ್ನೇ ಸೃಷ್ಟಿಸುವತ್ತ ಸಾಗುತ್ತಿದ್ದು, ಪಿಣರಾಯಿ ಸರಕಾರದ ಅಸಹಕಾರದ ವಿರುದ್ದ, ಶಬರಿಮಲೆ ದೇವಾಲಯದ ನಂಬಿಕೆ, ಸಂಪ್ರದಾಯ ಉಳಿಸುವ ಸಲುವಾಗಿ ಕರೆನೀಡಲಾಗಿದ್ದ 'ಅಯ್ಯಪ್ಪ ಜ್ಯೋತಿ' ಧಾರ್ಮಿಕ ಅಭಿಯಾನಕ್ಕೆ ಊಹಿಸಲೂ ಅಸಾಧ್ಯವಾದ ಜನಬೆಂಬಲ ದೊರಕಿದೆ.

   ರಾಜ್ಯದ ಎಲ್ಲಾ ಪ್ರಮುಖ ನಗರಗಳ ರಸ್ತೆಗಳ ಇಕ್ಕೆಲಗಳಲ್ಲಿ ಮಹಿಳೆಯರು ಕೈಯಲ್ಲಿ ದೀಪವನ್ನು ಇಟ್ಟುಕೊಂಡು 'ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧಕ್ಕೆ' ಬೆಂಬಲ ಸೂಚಿಸಿದ್ದಾರೆ. ದಿನದಿಂದ ದಿನಕ್ಕೆ ಸಮಸ್ಯೆ ಜಟಿಲವಾಗಲು ಪಿಣರಾಯಿ ಸರಕಾರವೇ ಕಾರಣ ಎನ್ನುವುದು ಇವರೆಲ್ಲರ ಒಕ್ಕೂರಿಲಿನ ಅಭಿಪ್ರಾಯವಾಗಿದೆ.

   ಪಂಬಾದಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ, ಮಹಿಳೆಯರ ಪ್ರವೇಶಕ್ಕೆ ವಿರೋಧ

   ಸುಪ್ರೀಂಕೋರ್ಟ್ ತೀರ್ಪಿನ ನಂತರ, ಕೇರಳ ಸರಕಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಶಬರಿಮಲೆ ವಿವಾದ, ಮಕರ ಸಂಕ್ರಾತಿ ಜ್ಯೋತಿಯ ವೇಳೆ, ಇನ್ನೊಂದು ಮಜಲಿಗೆ ಹೋಗುವ ಎಲ್ಲಾ ಸಾಧ್ಯತೆಯಿದೆ ಎನ್ನುವ ಎಚ್ಚರವನ್ನು, ಗುಪ್ತಚರ ಇಲಾಖೆ ನೀಡಿದೆ. ಅಯ್ಯಪ್ಪ ಭಕ್ತರು ಬೆಚ್ಚಿಬೀಳಿಸುವ ಗುಪ್ತಚರ ಇಲಾಖೆ ವರದಿಯಲ್ಲಿ ಏನಿದೆ?

   ನಮ್ಮಿಂದ ತಪ್ಪಾಗಿದೆ' ಎಂದು ಕ್ಷಮೆಯಾಚಿಸಿದ್ದ ಪೊಲೀಸರು

   ನಮ್ಮಿಂದ ತಪ್ಪಾಗಿದೆ' ಎಂದು ಕ್ಷಮೆಯಾಚಿಸಿದ್ದ ಪೊಲೀಸರು

   ಡಿ 18ರಂದು ನಡೆದ ಎರಡು ವಿದ್ಯಮಾನಗಳು ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದು, ಭಕ್ತರ ಆಕ್ರೋಶದ ನಂತರ ಪೊಲೀಸರು ಕ್ಷಮೆಯಾಚಿಸಿದ ಘಟನೆ ನಡೆದಿತ್ತು. ನಾಲ್ವರು ತೃತೀಯ ಲಿಂಗಿಗಳು ಶಬರಿಮಲೆ ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದರು. ದೇಗುಲದ ಪ್ರಧಾನ ಅರ್ಚಕರ (ತಂತ್ರಿಗಳು) ಅನುಮತಿಯ ಮೇರೆಗೆ ತೃತೀಯ ಲಿಂಗಿಗಳು ಅಯ್ಯಪ್ಪನ ದರ್ಶನ ಪಡೆದಿದ್ದರು. ಈ ವೇಳೆ, ಪೊಲೀಸರು ಬೂಟು, ಲಾಟಿ ಹಾಗೂ ಬೆಲ್ಟ್ ಧರಿಸಿ ಮೇಲು ಸೇತುವೆ ಬಳಿ ತೆರಳಿದ್ದರು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು, ತದನಂತರ ಪೊಲೀಸ್ ಮುಖ್ಯಸ್ಥರು 'ನಮ್ಮಿಂದ ತಪ್ಪಾಗಿದೆ' ಎಂದು ಕ್ಷಮೆಯಾಚಿಸಿದ್ದರು.

   ಮನಿತಿ ಸಂಘಟನೆಯ ಮೂವರು ಮಹಿಳೆಯರು

   ಮನಿತಿ ಸಂಘಟನೆಯ ಮೂವರು ಮಹಿಳೆಯರು

   ಇದಾದ ನಂತರ, ಕಳೆದ ಭಾನುವಾರ (ಡಿ 23) ಮನಿತಿ ಸಂಘಟನೆಯ ಮೂವರು ಮಹಿಳೆಯರು ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದ್ದರು. ಒಟ್ಟು ಹನ್ನೊಂದು ಮಹಿಳೆಯರು ಆಗಮಿಸಿದ್ದರೂ, ಭಾರೀ ಪ್ರತಿಭಟನೆಯಿಂದಾಗಿ ಮೂವರು ಮಾತ್ರ ಪಂಪಾ ಬಳಿ ಬರಲು ಸಾಧ್ಯವಾಗಿತ್ತು. ಈ ಮೂವರು ಮಹಿಳೆಯರು ಬೆಟ್ಟ ಹತ್ತಲು ಆರಂಭಿಸುತ್ತಿದ್ದಂತೆಯೇ, ಅಯ್ಯಪ್ಪ ಭಕ್ತರ ಭಾರೀ ಪ್ರತಿರೋಧದಿಂದಾಗಿ ವಾಪಸ್ ತೆರಳಿದ್ದರು. ಜೊತೆಗೆ, ನಮ್ಮ ಸಂಘಟನೆಯವರು ದೇವಾಲಯ ಪ್ರವೇಶಿಸಿಯೇ ಸಿದ್ದ ಎಂದು ಚಾಲೆಂಜ್ ಮಾಡಿ ಮಹಿಳೆಯರು ವಾಪಸ್ ಹೋಗಿದ್ದರು.

   ಶಬರಿಮಲೆ ದೇವಾಲಯದಲ್ಲಿ ಭಾರೀ ಅಪಚಾರ: ಕ್ಷಮೆಯಾಚಿಸಿದ ಪೊಲೀಸ್

   ಖಟ್ಟರ್ ವಾಮೋವಾದಿ ಪಕ್ಷಗಳ ಬೆಂಬಲ

   ಖಟ್ಟರ್ ವಾಮೋವಾದಿ ಪಕ್ಷಗಳ ಬೆಂಬಲ

   ಮನಿತಿ ಸಂಘಟನೆಯ ಮಹಿಳಾ ಸದಸ್ಯರು ಏನು ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದರೋ, ಅದು ಖಟ್ಟರ್ ವಾಮೋವಾದಿ ಪಕ್ಷಗಳ ಬೆಂಬಲದೊಂದಿಗೆ ಸಂಘಟನೆ ನಡೆಸಿದ ಪರೀಕ್ಷಾರ್ಥ ಪ್ರಯೋಗ ಎಂದು ಗುಪ್ತಚರ ಇಲಾಖೆ ನೀಡಿದ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನುವ ಮಾಹಿತಿಯಿದೆ. ಈಗಾಗಲೇ ಮುನ್ನೂರಕ್ಕೂ ಹೆಚ್ಚಿನ ಯುವತಿಯರು/ಮಹಿಳೆಯರು ಶಬರಿಮಲೆಯತ್ತ ತೆರಳಿದ್ದಾರೆ ಎನ್ನುವ ಶಾಕಿಂಗ್ ವರದಿಯನ್ನು ಇಲಾಖೆ, ಪಿಣರಾಯಿ ಸರಕಾರಕ್ಕೆ ನೀಡಿದೆ.

   ಕಟ್ಟಾ ವಾಮೋವಾದಿ ಪಕ್ಷ ಸಿಪಿಐಎಂಎಲ್ ಬೆಂಬಲ

   ಕಟ್ಟಾ ವಾಮೋವಾದಿ ಪಕ್ಷ ಸಿಪಿಐಎಂಎಲ್ ಬೆಂಬಲ

   ಕಟ್ಟಾ ವಾಮೋವಾದಿ ಪಕ್ಷ ಸಿಪಿಐಎಂಎಲ್ ಬೆಂಬಲ, ಜೊತೆಗೆ ಪುರುಷರ ಬೆಂಗಾವಲಿನೊಂದಿಗೆ ಮುನ್ನೂರು ಮಹಿಳೆಯರು ಈಗಾಗಲೇ ಶಬರಿಮಲೆಯತ್ತ ಹೊರಟಿದ್ದು, ಡಿಸೆಂಬರ್ 30ರೊಳಗೆ ದೇವಾಲಯ ಪ್ರವೇಶಿಸಲೇ ಬೇಕು ಎನ್ನುವ ಪಣತೊಟ್ಟಿದ್ದಾರೆ ಎನ್ನುವ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಹಾಗಾಗಿ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಬಗ್ಗೆ ಪಿಣರಾಯಿ ಸರಕಾರ ಚಿಂತನೆ ನಡೆಸಿದೆ.

   ಪಿಣರಾಯಿ ವಿರುದ್ದ ಒಡೆಯಿತೇ ಹಿಂದೂಗಳ ಸಹನೆಯ ಕಟ್ಟೆ: ಅಡ್ವಾಂಟೇಜ್ ಬಿಜೆಪಿ

   ಶಬರಿಮಲೆ ಕರ್ಮ ಸಮಿತಿ ಜ್ಯೋತಿ ಬೆಳಗುವ ಕಾರ್ಯಕ್ರಮ

   ಶಬರಿಮಲೆ ಕರ್ಮ ಸಮಿತಿ ಜ್ಯೋತಿ ಬೆಳಗುವ ಕಾರ್ಯಕ್ರಮ

   ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಪಿಣರಾಯಿ ಸರಕಾರದ ನಿಲುವನ್ನು ವಿರೋಧಿಸಿ ಶಬರಿಮಲೆ ಕರ್ಮ ಸಮಿತಿ ಜ್ಯೋತಿ ಬೆಳಗುವ ಕಾರ್ಯಕ್ರಮವನ್ನು ಬುಧವಾರ (ಡಿ 26) ಹಮ್ಮಿಕೊಂಡಿತ್ತು ಮತ್ತು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯದ ಪ್ರಮುಖ ನಗರದ ರಸ್ತೆಯ ಇಕ್ಕೆಲಗಳಲ್ಲಿ ಮಹಿಳೆಯರು ಸಾಲಾಗಿ ನಿಂತು ದೀಪವನ್ನು ಹಚ್ಚಿಸಿದ್ದಾರೆ. ಜನವರಿ ಒಂದರಂದು ವನಿತಾ ಮಥಿಲ್ (ಮಹಿಳಾ ಗೋಡೆ) ಎನ್ನುವ ಕಾರ್ಯಕ್ರಮವನ್ನು ಸರಕಾರ ಆಯೋಜಿಸಿದ್ದಕ್ಕೆ ವಿರುದ್ದವಾಗಿ ಈ ಅಭಿಯಾನ ನಡೆದಿದೆ.

   English summary
   300 women may try to enter Sabarimala temple on or before December 30, 2018. IB alert to Pinarari government in Kerala. CPIML supported women's with support of male activist already left to Sabarimala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X