ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ನಿಪಾ ವೈರಸ್ ಸೋಂಕಿನೊಂದಿಗೆ 11 ಮಂದಿಯ ಸಂಪರ್ಕ!

|
Google Oneindia Kannada News

ತಿರುವನಂತಪುರಂ, ಸೆಪ್ಟೆಂಬರ್ 6: ಕೇರಳದಲ್ಲಿ ನಿಪಾ ವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ 12 ವರ್ಷದ ಬಾಲಕನ ಜೊತೆಗೆ 11 ಮಂದಿ ಸಂಪರ್ಕದಲ್ಲಿದ್ದು, ಈ ಎಲ್ಲ ಸಂಪರ್ಕಿತರ ಆರೋಗ್ಯ ಸ್ಥಿತಿ ಸ್ಥಿರತವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.

ಬಾಲಕನೊಂದಿಗೆ ಸಂಪರ್ಕದಲ್ಲಿದ್ದ 11 ಮಂದಿ ಪೈಕಿ 8 ಮಂದಿಯ ಆರೋಗ್ಯ ಪರೀಕ್ಷೆ ವರದಿಯು ಸೋಮವಾರ ರಾತ್ರಿ ವೇಳೆಗೆ ಬರಲಿದ್ದು, ಉಳಿದ ಮೂವರ ಮಾದರಿಯನ್ನು ಕೋಯಿಕ್ಕಾಡ್ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಲಾಗಿದೆ ಎಂದರು.

ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ ಕೇರಳದಲ್ಲಿ ಮತ್ತೆ ನಿಪಾ ವೈರಸ್‌ನಿಂದ ಸಾವು; ಎಚ್ಚರಿಕೆ ಗಂಟೆ

ನಿಪಾ ವೈರಸ್ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 251 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ 125 ಮಂದಿ ಆರೋಗ್ಯ ಕಾರ್ಯಕರ್ತರು ಮತ್ತು ಸಿಬ್ಬಂದಿ ಸೇರಿದ್ದಾರೆ. 54 ಮಂದಿ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಅದರಲ್ಲಿ 30 ಮಂದಿ ವೈದ್ಯಕೀಯ ಸಿಬ್ಬಂದಿಯೇ ಆಗಿದ್ದಾರೆ. 38 ಮಂದಿ ನಿಪಾ ವೈರಸ್ ಸೋಂಕಿತರನ್ನು ಐಸೋಲೇಷನ್ ವಾರ್ಡ್ ಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

11 People contact with Nipah Virus Victim in Kerala; State Team List out 251 people

ನಿಪಾ ಸೋಂಕಿನಿಂದ ಮೃತಪಟ್ಟ ಬಾಲಕನ ಮನೆ ಪರಿಶೀಲನೆ:

ಕೇರಳದ ಕೋಯಿಕ್ಕಾಡ್ ಪ್ರದೇಶದಲ್ಲಿ 12 ವರ್ಷದ ಬಾಲಕ ನಿಪಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನ ತಾಯಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಪಶು ಸಂಗೋಪನಾ ತಂಡವು ಮೃತ ಬಾಲಕನ ಮನೆಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಬಾವಲಿಗಳ ಹಾವಳಿಯಿಂದ ನಿಪಾ ವೈರಸ್:

"ಎರಡು ರಂಬುಟಾನ್ ಮರಗಳಿರುವುದರಿಂದ ಬಾವಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಈ ಪ್ರದೇಶದಲ್ಲಿ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಸುತ್ತಮುತ್ತಲಿನ ಕೆರೆಗಳು ಕೂಡ ಬಾವಲಿಗಳ ಆವಾಸ ಸ್ಥಾನವಾಗಿತ್ತು ಎಂದು ಗೊತ್ತಾಗಿದೆ. ಅವರ ಮನೆಯಲ್ಲಿ ಎರಡು ಮೇಕೆಗಳಿದ್ದು, ಅವುಗಳ ಮಾದರಿಯನ್ನೂ ಸಹ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಭೋಪಾಲ್ ಮೂಲದ ಎನ್ಐವಿ ತಂಡವು ಬುಧವಾರ ರಾಜ್ಯಕ್ಕೆ ಆಗಮಿಸಲಿದ್ದು ಮಾದರಿಯನ್ನು ಸಂಗ್ರಹಿಸಲಿದೆ. ನಿಫಾ ವೈರಸ್ ಸೋಂಕಿತ ಬಾಲಕು ಮತ್ತೆ ಯಾರೊಂದಿಗೆ ಸಂಪರ್ಕದಲ್ಲಿದ್ದನು ಎಂಬುದನ್ನು ಪತ್ತೆ ಮಾಡುವುದರ ಜೊತೆಗೆೆ ಮಂಗಳವಾರದಿಂದ ಮನೆ ಮನೆಗೆ ತೆರಳಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನಿಪಾ ವೈರಸ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಮಾರ್ಗಸೂಚಿ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮಧ್ಯೆ ನಿಪಾ ವೈರಸ್ ಮತ್ತೊಂದು ರೀತಿ ಆತಂಕವನ್ನು ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ರೋಗದ ನಿಯಂತ್ರಣ ಮತ್ತು ಪತ್ತೆಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳ ಜೊತೆಗೆ ಶಿಷ್ಟಾಚಾರವನ್ನು ಬಿಡುಗಡೆಗಳಿಸಿದೆ. ಕೇರಳ ಸರ್ಕಾರದ ಶಿಷ್ಟಾಚಾರದಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ.

* ನಿಪಾ ವೈರಸ್ ಸೋಂಕಿತ ವ್ಯಕ್ತಿಗಳನ್ನು ಪ್ರತಿನಿತ್ಯ RT-PCR ಪರೀಕ್ಷೆಗೊಳಪಡಿಸುವುದು. ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೆ ಅಥವಾ ಐದು ದಿನಗಳಲ್ಲಿ ಎರಡು ಬಾರಿ ಮೂರು ಮಾದರಿಯಲ್ಲಿ ನಡೆಸಿದ RT-PCR ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ವೈದ್ಯರು ಮತ್ತು ವೈದ್ಯಕೀಯ ಮಂಡಳಿಯ ವಿವೇಚನೆ ಮೇರೆಗೆ ಅಂಥವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ.

* ನಿಫಾ ರೋಗಿಗೆ ನಡೆಸಿದ ಮೊದಲ RT-PCR ವರದಿಯೇ ನೆಗೆಟಿವ್ ಎಂದು ಬಂದರೆ ಮೂರು ದಿನಗಳವರೆಗೂ ಆ ರೋಗಿ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಲಾಗುತ್ತದೆ. ಅದಾಗ್ಯೂ, ಯಾವುದೇ ರೀತಿ ರೋಗದ ಲಕ್ಷಣಗಳು ಕಂಡು ಬಾರದಿದ್ದರೆ, ಅಂಥವರನ್ನು 21 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿರಿಸಿ ಆರೋಗ್ಯ ಪರಿಶೋಧನೆ ಮಾಡಲಾಗುತ್ತದೆ.

* ಒಂದು ವೇಳೆ ವ್ಯಕ್ತಿಯ RT-PCR ವರದಿ ನೆಗೆಟಿವ್ ಎಂದು ಬಂದಿದ್ದು, ಆತನಲ್ಲಿ ಯಾವುದೇ ರೋಗದ ಲಕ್ಷಣಗಳು ಗೋಚರಿಸದಿದ್ದರೆ ಅಂಥವರ ಮೇಲೆ 3 ದಿನಗಳವರೆಗೂ ನಿಗಾ ವಹಿಸಲಾಗುತ್ತದೆ. ಅದಾಗ್ಯೂ ಯಾವುದೇ ಲಕ್ಷಣಗಳು ಗೋಚರಿಸದಿದ್ದರೆ ವ್ಯಕ್ತಿಯನ್ನು ಡಿಸ್ಚಾರ್ಜ್ ಮಾಡಲಾಗುವುದು.

* ರೋಗಲಕ್ಷಣಗಳು ಮತ್ತು ನೆಗೆಟಿವ್ ಫಲಿತಾಂಶಗಳನ್ನು ಹೊಂದಿರುವ ಇತರ ರೋಗಿಗಳಿದ್ದಾರೆಯೇ ಎಂದು ಕಂಡುಹಿಡಿಯಲು ವಿವರವಾದ ಪರೀಕ್ಷೆ ನಡೆಸಲು ಶಿಷ್ಟಾಚಾರದಲ್ಲಿ ಶಿಫಾರಸು ಮಾಡಲಾಗಿದೆ.

ಆಯಾ ಮಟ್ಟದಲ್ಲಿ ಚಿಕಿತ್ಸೆಗೆ ತಂಡ ರಚನೆ:

ನಿಪಾ ವೈರಸ್ ನಿರ್ವಹಣಾ ಯೋಜನೆಯನ್ನು ರಾಜ್ಯ, ಜಿಲ್ಲಾ ಮತ್ತು ಆಸ್ಪತ್ರೆ ಮಟ್ಟದಲ್ಲಿ ಸಂಯೋಜಿಸಲಾಗುವುದು. ರಾಜ್ಯ ಸಮಿತಿಯು ಮುಖ್ಯಮಂತ್ರಿ, ಆರೋಗ್ಯ ಸಚಿವ, ಮುಖ್ಯ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ, ವಿಪತ್ತು ನಿರ್ವಹಣೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ನಿರ್ದೇಶಕರು ಮತ್ತು ಆರೋಗ್ಯ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಒಳಗೊಂಡಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಆರೋಗ್ಯ ಕಾರ್ಯಕರ್ತರು, ಕ್ಷೇತ್ರ ಕಾರ್ಯಕರ್ತರು, ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ಇತರ ಸಿಬ್ಬಂದಿ ಮತ್ತು ಇತರರಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಹೇಗೆ ಹರಡುವುದು ನಿಪಾ ವೈರಸ್ ರೋಗ?:

ಸಾಮಾನ್ಯವಾಗಿ ಈ ನಿಪಾ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಂತೆಯೇ ಪ್ರಾಣಿ ಇಲ್ಲವೇ ಪಕ್ಷಿಗಳಿಂದಲೂ ಇದು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಪಾಹ್ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಳ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ.

English summary
11 People contact with Nipah Virus Victim in Kerala; State Team List out 251 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X