ದುರಂತ ಸಾವಿಗೀಡಾದ ಕನ್ನಡತಿಗೆ ಸಿಡ್ನಿಯಲ್ಲಿ ಸ್ಮರಣೆ

ಸಿಡ್ನಿ, ನ.23: ಸಿಡ್ನಿಯಲ್ಲಿ ಹತ್ಯೆಗೀಡಾಗಿದ್ದ ಬಂಟ್ವಾಳ ಮೂಲದ ಟೆಕ್ಕಿ ಪ್ರಭಾ ಅರುಣ ಕುಮಾರ್ ಅವರಿಗೆ ಆಸ್ಟ್ರೇಲಿಯಾ ಸರ್ಕಾರ ಗೌರವ ಸಲ್ಲಿಸಿದೆ. 2015ರ ಮಾರ್ಚ್ 7ರಂದು ಪ್ರಭಾ ಅವರು ದುಷ್ಕರ್ಮಿಗಳ ಚೂರಿ ಇರಿತಕ್ಕೆ ಸಿಕ್ಕು ಸಾವನ್ನಪ್ಪಿದ್ದರು. ಪ್ರಭಾ ಸ್ಮರಣಾರ್ಥ ಅವರು ಸಾವಿಗೂ ಮುನ್ನ ಕೊನೆ ಹೆಜ್ಜೆಗಳನ್ನಿಟ್ಟ ಹಾದಿಯನ್ನು 'Prabha's Walk' ಎಂದು ನಾಮಕಾರಣ ಮಾಡಿ ಗೌರವ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಪ್ರಭಾ ಅವರ ಹತ್ಯೆಯ ನಿಜವಾದ ಕಾರಣ ನಿಗೂಢವಾಗೇ ಉಳಿದು ಕೊಂಡಿದೆ. ಸಿಡ್ನಿಯಲ್ಲಿ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾ ಅರುಣ್ ಅವರು ತಮ್ಮ ಅಪಾರ್ಟ್‌ಮೆಂಟ್ ಸಮೀಪದಲ್ಲಿರುವ ಪರಮಟ್ಟಾ ಪಾರ್ಕ್ ಬಳಿ ಮಾರ್ಚ್ 7 ರಂದು ಹೋಗುವಾಗ ದುಷ್ಕರ್ಮಿಯೊಬ್ಬನ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದರು.[ಸಿಡ್ನಿ ಪ್ರಭಾ ಹತ್ಯೆ ನಿಗೂಢತೆ ಇನ್ನೂ ಬಯಲಾಗಿಲ್ಲ!]

Memorial unveiled in Sydney for Indian woman stabbed to death in March

ಹತ್ಯೆಗೆ ಮುನ್ನ ಪ್ರಭಾ ಅವರು ಸಬ್ ವೇ ಹಾಗೂ ಪಾರ್ಕ್ ನೊಳಗೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಅದರೆ, ಪ್ರಭಾ ಅವರ ಹಂತಕನ ಬಗ್ಗೆ ಈವರೆಗೆ ಸುಳಿವು ಸಿಕ್ಕಿರಲಿಲ್ಲ.[ಪ್ರಭಾ ಹಂತಕರನ್ನು ಗಲ್ಲಿಗೇರಿಸಲಿ: ಶೋಕ ತಪ್ತ ತಂದೆ]

41 ವರ್ಷ ವಯಸ್ಸಿನ ಪ್ರಭಾ ಅವರ ಹೆಸರಿನಲ್ಲಿ ಬೆಂಚೊಂದನ್ನು ಸಹ ಅನಾವರಣಗೊಳಿಸಲಾಗಿದ್ದು, ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಅದರ ಮೇಲೆ ಪುಷ್ಪಗುಚ್ಛಗಳನ್ನಿರಿಸಲಾಗಿತ್ತು. ನ.23ರಂದು ಪ್ರಭಾ ಅವರ ಹುಟ್ಟುಹಬ್ಬದ ದಿನವಾಗಿದ್ದು, ಆಪ್ತರು, ಬಂಧು ಮಿತ್ರರು ಪಾರ್ಕ್ ನಲ್ಲಿ ಸೇರಿ ಪ್ರಭಾ ಅವರನ್ನು ಸ್ಮರಿಸಿದರು.

ಪ್ರಭಾ ಸ್ಮರಣಾರ್ಥ ಆಸ್ಟ್ರೇಲಿಯಾ ಸರ್ಕಾರ ತೋರಿರುವ ಗೌರವಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಭಾ ಅವರ ಸೋದರ ಶಂಕರ್ ಶೆಟ್ಟಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+