ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ

|
Google Oneindia Kannada News

ಮೆಲ್ಬರ್ನ್, ಸೆಪ್ಟೆಂಬರ್ 30: ಆಸ್ಟ್ರೇಲಿಯಾದಲ್ಲಿ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಬುಧವಾರ ಒಂದೇ ದಿನದಲ್ಲಿ 1438 ಪ್ರಕರಣಗಳು ಪತ್ತೆಯಾಗಿವೆ. ಹಿಂದಿನ ದಿನಕ್ಕಿಂತ ಹೊಸದಾಗಿ 500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲೂ ಲಾಕ್‌ಡೌನ್ ಜಾರಿ

ಇದೀಗ ಆಸ್ಟ್ರೇಲಿಯಾ ಜನತೆಗೆ ಮತ್ತೆ ಕೊರೊನಾ ಸೋಂಕಿನ ಕುರಿತು ತಂಕ ಶುರುವಾಗಿದೆ. ಕೊರೊನಾ ದೈನಂದಿನ ಪ್ರರಕಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಲಸಿಕೆ ವಿತರಣೆಗೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Coronavirus Case Numbers Surge In Australias Victoria State

ಆಸ್ಟ್ರೇಲಿಯಾದ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿರುವ ವಿಕ್ಟೋರಿಯಾದಲ್ಲಿ ಮಂಗಳವಾರ 950 ಪ್ರಕರಣಗಳು ಪತ್ತೆಯಾಗಿದ್ದವು.

ಸೋಂಕಿನಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 105,131ಕ್ಕೆ ಏರಿಕೆಯಾಗಿದ್ದು, ಆ ಪೈಕಿ 1290 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ.

ವಿಕ್ಟೋರಿಯಾದಲ್ಲಿ ಇದುವರೆಗೆ ಶೇ.49ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ವಿಕ್ಟೋರಿಯಾ ರಾಜ್ಯದಲ್ಲಿ ತಿಂಗಳ ಅಂತ್ಯದ ವೇಳೆಗೆ ಲಾಕ್‌ಡೌನ್ ನಿಯಮಗಳನ್ನು ಸಡಿಕಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದ ಕಾರಣ ಜುಲೈ ತಿಂಗಳಲ್ಲಿ ಮೆಲ್ಬರ್ನ್‌ನಲ್ಲಿ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಆಗ 31 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ವರದಿಯಾಗುತ್ತಿದ್ದವು, ಅದಕ್ಕೆ ಹೋಲಿಸಿದರೆ ಈಗ ಬಹುತೇಕ ಕಡಿಮೆಯಾಗಿದೆ.

ಆಗಸ್ಟ್ ತಿಂಗಳಿನಲ್ಲಿ ಸಿಡ್ನಿ ಹಾಗೂ ಮೆಲ್ಬಾರ್ನ್‌ನಲ್ಲಿ ಡೆಲ್ಟಾ ರೂಪಾಂತರಿ ದಾಳಿ ನಡೆಸಿತ್ತು. ಮೆಲ್ಬಾರ್ನ್‌ನಲ್ಲಿ 242 ದಿನಗಳಿಂದ ಲಾಕ್‌ಡೌನ್ ಅನುಭವಿಸಿದ್ದ ಜನತೆಗೆ ಇದಿಗ ಮತ್ತಷ್ಟು ಆತಂಕ ಎದುರಾಗಿದೆ.

English summary
Victoria state in Australia has reported 1,438 new coronavirus cases almost 500 more than the previous high set a day just earlier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X