• search
 • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಲ್ವಾಮಾದ ಮಸೀದಿಯಲ್ಲಿ ಅಡಗಿದ್ದ ಮೂವರು ಉಗ್ರರ ಹತ್ಯೆ

|

ಶ್ರೀನಗರ, ಜೂನ್ 19: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಭಾರತೀಯ ಯೋಧರ ಸಾವಿಗೆ ಕಂಬನಿ ಮಿಡಿದ ಅಮೆರಿಕ | Donald Trump | Narendra Modi | Oneindia Kannada

   ಪುಲ್ವಾಮದ ಪ್ಯಾಂಪೋರ್ ನ ಮೀಜ್ ಎಂಬಲ್ಲಿರುವ ಮಸೀದಿಯೊಂದರಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿದ್ದು, ಭಾರತೀಯ ಸೇನಾಪಡೆ ಕಾರ್ಯಾಚರಣೆ ಮುಂದುವರೆಸಿವೆ ಎಂದು ವರದಿಗಳಿಂದ ತಿಳಿದುಬಂದಿದೆ.

   ಭಾರತ-ಚೀನಾ ಮುಖಾಮುಖಿ: ಸೇನಾಧಿಕಾರಿ, ಮೂವರು ಸೈನಿಕರು ಹುತಾತ್ಮ

   ಜೂನ್ 18 ರಂದು ಇಬ್ಬರು ಉಗ್ರರನ್ನು ಹತ್ಯೆಮಾಡಲಾಗಿತ್ತು, ಇದೀಗ ಮತ್ತಿಬ್ಬರು ಉಗ್ರರನ್ನು ಹತ್ಯೆಗೈದಿರುವ ಕುರಿತು ಮಾಹಿತಿ ಬಂದಿದೆ.ಮಸೀದಿಯಲ್ಲಿ ಇನ್ನೂ ಮೂವರು ಉಗ್ರರು ಅಡಗಿ ಕುಳಿತಿದ್ದಾರೆಂದು ಹೇಳಲಾಗುತ್ತಿದೆ.

   ಪ್ರಸ್ತುತ ಮಸೀದಿ ಸುತ್ತಲೂ ಸೇನಾಪಡೆ ಸುತ್ತುವರೆದಿದ್ದು, ಸ್ಥಳದಲ್ಲಿ ಭಾರೀ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 24 ಗಂಟೆಯಲ್ಲಿ 8 ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ.

   ಭಾರತೀಯ ಸೇನೆಯು ಉಗ್ರರನ್ನು ಮಸೀದಿಯಿಂದ ಹೊರ ಬರುವಂತೆ ಮಾಡಲು ಟಿಯರ್ ಗ್ಯಾಸ್ ಬಳಕೆ ಮಾಡಿತ್ತು. ಮಸೀದಿಯಾಗಿರುವುದರಿಂದ ಐಇಡಿ ಅಥವಾ ಫೈರಿಂಗ್ ಆಗಲಿ ಮಾಡಲು ಸಾಧ್ಯವಿಲ್ಲ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಮಸೀದಿಯಲ್ಲಿ ಅಡಗಿದ್ದ ಒಟ್ಟು ಮೂವರು ಉಗ್ರರನ್ನು ಹತ್ಯೆ ಮಾಡಿದಂತಾಗಿದೆ.

   English summary
   Three militants were killed on Friday in an encounter with security forces in Pulwama district of Jammu and Kashmir
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X