ಉಗ್ರರ ದಾಳಿ: ಮೂವರು ಪೊಲೀಸರು ಹುತಾತ್ಮ, 11 ಮಂದಿಗೆ ಗಾಯ
ಶ್ರೀನಗರ, ಡಿಸೆಂಬರ್ 13: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಭಯೋತ್ಪಾದಕರು ದಾಳಿ ನಡೆಸಿದ್ದು ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೊರವಲಯದಲ್ಲಿರುವ ಜೆವಾನ್‌ನಲ್ಲಿ ಪೊಲೀಸ್ ಶಿಬಿರದ ಬಳಿ ಭಯೋತ್ಪಾದಕರು ದಾಳಿ ಮಾಡಿದ್ದಾರೆ. ಪೊಲೀಸ್ ಬಸ್‌ನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ.
ಉಗ್ರರ ದಾಳಿ ವೇಳೆ ಬಸ್ ಬುಲೆಟ್ ಪ್ರೂಫ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಜೊತೆಗೆ ಜೆಕೆ ಶಸ್ತ್ರಸಜ್ಜಿತ ಪೊಲೀಸರು ಬಂದೂಕುಗಳನ್ನು ಹೊಂದಿರುವುದಿಲ್ಲ. ಆದರೆ ಗುರಾಣಿಗಳು ಮತ್ತು ಲಾಠಿಗಳನ್ನು ಒಯ್ಯುತ್ತಾರೆ. ಶಸ್ತ್ರಸಜ್ಜಿತ ಪೋಲೀಸರು ಸಾಮಾನ್ಯವಾಗಿ ಕರ್ತವ್ಯ ಮುಗಿಸಿ ಹಿಂದಿರುಗುವಾಗ ಪೊಲೀಸರೊಂದಿಗೆ ಬರುತ್ತಾರೆ. ಈ ವೇಳೆ ಉಗ್ರರು ದಾಳಿ ಮಾಡಿದ್ದಾರೆ.
ಇದಕ್ಕೂ ಮುನ್ನ ದಾಳಿಯಲ್ಲಿ 14 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. "ಗಾಯಗೊಂಡ ಎಲ್ಲಾ ಸಿಬ್ಬಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ವಿವರಗಳನ್ನು ಪಡೆಯಲಾಗುತ್ತಿದೆ" ಎಂದು ಕಾಶ್ಮೀರ್ ಝೋನ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

#Terrorists fired upon a police vehicle near Zewan in Pantha Chowk area of #Srinagar. 14 personnel #injured in the attack. All the injured personnel evacuated to hospital. Area cordoned off. Further details shall follow. @JmuKmrPolice
— Kashmir Zone Police (@KashmirPolice) December 13, 2021











Click it and Unblock the Notifications