ಉಗ್ರರಿಗೆ ಸಹಾಯ ಆರೋಪ; ದೇವಿಂದರ್ ಸಿಂಗ್‌ಗೆ ಜಾಮೀನು

ನವದೆಹಲಿ, ಜೂನ್ 19 : ಉಗ್ರರಿಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ಎನ್‌ಐಎ ಮತ್ತು ದೆಹಲಿ ಪೊಲೀಸರು ಈ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದಾರೆ.

Recommended Video

      ದೇಶಾದ್ಯಂತ ಕೊವಿಡ್ ಪರೀಕ್ಷೆ ಬೆಲೆಯಲ್ಲಿ ಏಕರೂಪತೆ ಇರಲಿ' ಎಂದ ಸುಪ್ರೀಂಕೋರ್ಟ್ | Covid Test | Oneindia Kannada

      ಶುಕ್ರವಾರ ದೆಹಲಿಯ ನ್ಯಾಯಾಲಯ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್‌ಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಸೂಕ್ತ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ವಿಫಲವಾದ ಕಾರಣ ಜಾಮೀನು ನೀಡಲಾಗಿದೆ.

      ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಸಹಾಯ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಉಗ್ರರ ಜೊತೆ ಕಾರಿನಲ್ಲಿ ತೆರಳುವಾಗಲೇ ಅವರನ್ನು ಪೊಲೀಸರು ಬಂಧಿಸಿದ್ದರು.

      Police Officer Davinder Singh Gets Bail

      12 ಲಕ್ಷ ಹಣ ಪಡೆದು ಉಗ್ರರಿಗೆ ಸಹಾಯ ಮಾಡಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸ್ತವ್ಯ ಹೂಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬುದು ಆರೋಪ. ದೇವಿಂದರ್ ಸಿಂಗ್ ಬಂಧನವಾಗುತ್ತಿದ್ದಂತೆ ಅವರನ್ನು ಅಮಾನತು ಮಾಡಲಾಗಿತ್ತು.

      ದೇವಿಂದರ್ ಸಿಂಗ್ ವಿಚಾರಣೆಗೆ ಎನ್‌ಐಎ ಸಹ ಕೈ ಜೋಡಿಸಿದೆ. ಶ್ರೀನಗರದಲ್ಲಿರು ಅವರ ನಿವಾಸದ ಮೇಲೆಯೂ ದಾಳಿ ನಡೆಸಲಾಗಿತ್ತು. ಉಗ್ರರನ್ನು ಶರಣಾಗತರಾಗಿ ಮಾಡಿಸಲು ಕರೆದುಕೊಂಡು ಹೋಗುತ್ತಿದ್ದೆ ಎಂದು ದೇವಿಂದರ್ ಸಿಂಗ್ ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+