ನೌಗಾಮ್ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಕದನವಿರಾಮ ಉಲ್ಲಂಘನೆ
ಜಮ್ಮು ಮತ್ತು ಕಾಶ್ಮೀರ, ಜೂನ್ 17: ಒಂದೆಡೆ ಗಡಿ ವಿಚಾರವಾಗಿ ಭಾರತ ಮತ್ತು ಚೀನಾದ ನಡುವೆ ಸಂಘರ್ಷ ನಡೆಯುತ್ತಿದೆ. ಇದೇ ಹೊತ್ತಿಗೆ ಪಾಕಿಸ್ತಾನ ಜಮ್ಮು ಕಾಶ್ಮೀರದ ನೌಗಾಮ್‌ನಲ್ಲಿ ಕದನವಿರಾಮ ಉಲ್ಲಂಘಿಸಿದೆ.
Recommended Video
ಭಾರತದ ಗಮನ ಚೀನಾದ ಸೈನಿಕರ ಮೇಲಿದೆ ಎಂದು ತಿಳಿದ ಪಾಕಿಸ್ತಾನಿಗಳು ಭಾರತದ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದಾರೆ.ಭಾರತದ ಸೈನಿಕರ ಮೇಲೆ ಮಾರ್ಟರ್ ಶೆಲ್‌ಗಳ ದಾಳಿ ನಡೆಸಿದೆ. ಜೂನ್ 16ರಂದು ಸಂಜೆ ಸಮಯದಲ್ಲಿ ಅಪ್ರಚೋದಿತ ಕದನವಿರಾಮ ಉಲ್ಲಂಘನೆ ಮಾಡಿತ್ತು.
ಮಾರ್ಟರ್ ಶೆಲ್‌ಗಳು ಹಾಗೂ ಆಯುಧಗಳ ಮೂಲಕ ದಾಳಿ ನಡೆಸಿತ್ತು. ಭಾರತವು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಪಾಕಿಸ್ತಾನದ ಸೈನಿಕರ ಮೇಲೆ ಪ್ರತಿದಾಳಿ ನಡೆಸಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 100 ಭಯೋತ್ಪಾದಕರನ್ನು ಹತ್ಯೆಗೈದಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ 2 ಸಾವಿರಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘಿಸಿದೆ.
2019ರಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ 3168 ಬಾರಿ ದಾಖಲೆಯ ಕದನ ವಿರಾಮವನ್ನು ಉಲ್ಲಂಘಿಸಿದೆ.
ಕೊವಿಡ್ 19 ಸಾಂಕ್ರಾಮಿಕ ರೋಗದ ನಡುವೆಯೂ ಭಯೋತ್ಪಾದಕರನ್ನು ಭಾರತದ ಗಡಿ ನುಸುಳಲು ಪಾಕ್ ಯತ್ನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಹೆಚ್ಚಿನ ಸಂಖ್ಯೆಯ ಕದನ ವಿರಾಮ ಉಲ್ಲಂಘನೆ ಮತ್ತು ಒಳನುಸುಳುವಿಕೆ ಪ್ರಯತ್ನಗಳ ಪರಿಣಾಮವಾಗಿ ಈ ವರ್ಷ ಇಲ್ಲಿಯವರೆಗೆ ಸುಮಾರು 100 ಭಯೋತ್ಪಾದಕರನ್ನು ಸದೆಬಡಿಯಲಾಗಿದೆ.












Click it and Unblock the Notifications