ಮುಂದುವರೆದ ಪಾಕ್ ಪುಂಡಾಟ, ವಾಯುಗಡಿ ದಾಟಲು ಯತ್ನ
ಶ್ರೀನಗರ, ಮಾರ್ಚ್ 14: ಭಾರತ ವಾಯುಸೇನೆಯು ಪಾಕ್ ಗಡಿಯೊಳಗೆ ನುಗ್ಗಿ ದಾಳಿ ನಡೆಸಿ ಎಚ್ಚರಿಕೆ ನೀಡಿದಾಗ್ಯೂ ಪಾಕಿಸ್ತಾನ ತನ್ನ ಪುಂಡಾಟವನ್ನು ನಿಲ್ಲಿಸಿಲ್ಲ.
ಪಾಕಿಸ್ತಾನವು ನಿನ್ನೆ ಭಾರತದ ವಾಯುಗಡಿಯನ್ನು ತನ್ನ ಯುದ್ಧ ವಿಮಾನಗಳ ಮೂಲಕ ಮೀರಲು ಯತ್ನಿಸಿತ್ತು. ಆದರೆ ಭಾರತೀಯ ವಾಯುಸೇನೆಯ ಎಚ್ಚರಿಕೆಯಿಂದಾಗಿ ಅದು ಸಾಧ್ಯವಾಗಿಲ್ಲ.
ಪೂಂಚ್ ಸಮೀಪ ಪಾಕಿಸ್ತಾನದ ಯುದ್ಧ ವಿಮಾನಗಳು ಹಾರಾಡುತ್ತಿರುವುದನ್ನು ಭಾರತೀಯ ವಾಯುಸೇನೆ ಪತ್ತೆ ಮಾಡಿದೆ. ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ವಾಯುಗಡಿಗೆ ಬಹಳ ಹತ್ತಿರವಾಗಿ ಹಾರಾಟ ನಡೆಸಿದ್ದವು.

ಪಾಕ್‌ನ ಯುದ್ಧ ವಿಮಾನಗಳನ್ನು ಗುರುತಿಸಿದ ಭಾರತವು ಸಹ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿಕೊಂಡಿತ್ತು. ಆದರೆ ಆ ನಂತರ ಪಾಕ್ ಯುದ್ಧ ವಿಮಾನಗಳು ಹಿಂತಿರುಗಿದವು. ಪಾಕಿಸ್ತಾನವು ವೈಮಾನಿಕ ದಾಳಿಗೆ ಯತ್ನಿಸಿತ್ತು ಎಂಬ ಅನುಮಾನ ಇದೆ.












Click it and Unblock the Notifications