ಜಮ್ಮು ಕಾಶ್ಮೀರ: 'ಉಗ್ರರ ಮೇಲೆ ಸಹಾನುಭೂತಿ' ಹೊಂದಿರುವ 700 ಕ್ಕೂ ಅಧಿಕ ಮಂದಿ ವಶಕ್ಕೆ

ನವದೆಹಲಿ, ಅಕ್ಟೋಬರ್‌ 10: ಕಾಶ್ಮೀರಿ ಪಂಡಿತರು, ಸಿಖ್‌ ಹಾಗೂ ಮುಸ್ಲಿಂ ಸಮುದಾಯದ ಜನರು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನದಲ್ಲಿ ಒಟ್ಟು ಏಳು ಮಂದಿ ನಾಗರಿಕರನ್ನು ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿ ಭಾರತೀಯ ಭದ್ರತಾ ಪಡೆಯು ಈವರೆಗೆ ಉಗ್ರರ ಮೇಲೆ ಸಹಾನುಭೂತಿ ಹೊಂದಿರುವ ಸುಮಾರು 700 ಮಂದಿಯನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.

ಬ್ಯಾನ್‌ ಮಾಡಲಾದ ಜಮಾತ್‌-ಇ-ಇಸ್ಲಾಮಿ ಜೊತೆಗೆ ಸಂಪರ್ಕವನ್ನು ಹೊಂದಿರುವ ಅಥವಾ ಅದರ ಭೂಗತ ಕಾರ್ಯಕರ್ತರು ಎಂಬ ಶಂಕೆಯ ಮೇಲೆ ಈ ಸುಮಾರು 700 ಮಂದಿಯನ್ನು ವಶಕ್ಕೆ ಪಡೆಯಾಲಾಗಿದೆ. ಈ ಪೈಕಿ ಕೆಲವರು ಶ್ರೀನಗರಕ್ಕೆ ಸೇರಿದವರು ಆಗಿದ್ದು, ಇನ್ನೂ ಕೆಲವರು ಬುದ್ಗಾಮ್‌ಗೆ ಸೇರಿದವರು ಆಗಿದ್ದಾರೆ ಹಾಗೂ ದಕ್ಷಿಣ ಕಾಶ್ಮೀರದ ಇತರೆ ಪ್ರದೇಶಕ್ಕೆ ಸೇರಿದವರು ಆಗಿದ್ದಾರೆ ಎಂದು ವರದಿಯು ಹೇಳಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಹಿರಿಯ ಪೊಲೀಸ್‌ ಅಧಿಕಾರಿ, "ಕಣಿವೆ ಪ್ರದೇಶದಲ್ಲಿ ಈ ಭಯೋತ್ಪಾದನ ಕೃತ್ಯಗಳು ಸರಪಳಿಯನ್ನು ಮುರಿಯುವ ನಿಟ್ಟಿನಲ್ಲಿ ಇಷ್ಟೊಂದು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ," ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿಯೇ, "ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ತಮ್ಮ ಸರ್ಕಾರವನ್ನು ರಚಿಸಿಕೊಂಡಿರುವುದು ಇಲ್ಲಿನ ಉಗ್ರ ಸಂಘಟನೆಗಳಿಗೆ ಪ್ರೇರಣೆ ಆಗಿರಬಹುದು," ಎಂದಿದ್ದಾರೆ.

Over 700 Terrorist Sympathisers Detained In J&K After Civilian Killings

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಆತಂಕದ ವಾತಾವರಣಕ್ಕೆ ಈ ಕಾಶ್ಮೀರ ಕಣಿವೆಯಲ್ಲಿ ನಡೆದ ಘಟನೆಗಳು ಇನ್ನಷ್ಟು ಆತಂಕವನ್ನು ಹಬ್ಬಿಸಿದೆ. ಈ ವಿಚಾರದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ತೀವ್ರವಾಗಿ ಖಂಡನೆ ಮಾಡುತ್ತಿದ್ದಾರೆ. ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿರುವ ಹತ್ತಾರು ಕಾಶ್ಮೀರಿ ಪಂಡಿತರ ಕುಟುಂಭಗಳು ಈಗಾಗಲೇ ಕಣಿವೆಯಿಂದ ಸ್ಥಳಾಂತರಗೊಳ್ಳುತ್ತಿದೆ ಎಂದು ಮಾಧ್ಯಮಗಳ ವರದಿಗಳು ವಿವರಿಸಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಶಾಲಾ ಶಿಕ್ಷಕರನ್ನು ಹತ್ಯೆ ಮಾಡಲಾಗಿದೆ. ಸಿಖ್‌ ಸಮುದಾಯಕ್ಕೆ ಸೇರಿದ ಸುಪುಂದರ್‌ ಕೌರ್‌ ಹಾಗೂ ಹಿಂದೂ ಧರ್ಮಕ್ಕೆ ಸೇರಿದ ದೀಪಕ್‌ ಚಂದ್‌ರನ್ನು ಗುರುವಾರ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. "ಪಿಸ್ತೂಲು ಹಿಡಿದಿದ್ದ ವ್ಯಕ್ತಿಯು ಐಡಿ ಕಾರ್ಡ್ ತೋರಿಸುವಂತೆ ತಿಳಿಸಿದ್ದು ಬಳಿಕ ಇಬ್ಬರಿಗೂ ಗುಂಡು ಹಾರಿದಿ ಹತ್ಯೆ ಮಾಡಿದ್ದಾನೆ," ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿದೆ.

ಮಂಗಳವಾರ ಸ್ಥಳೀಯ ವ್ಯಾಪಾರಿ ಹಾಗೂಶ್ರೀನಗರದ ಇಕ್ಬಾಲ್‌ ಪಾರ್ಕ್‌‌ನಲ್ಲಿರುವ ಔಷಾದಾಲಯದ ಮಖಾನ್‌ ಲಾಕ್‌ ಬಿಂದ್ರೋ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಆತನಿಗೆ ಗುಂಡು ಹಾರಿಸಿದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ. ಕಾಶ್ಮೀರಿ ಪಂಡಿತನಾದ ಮಖಾನ್‌ ಲಾಕ್‌ ಬಿಂದ್ರೋ 1990 ರಲ್ಲಿ ಭಯೋತ್ಪಾದನೆ ಕಾಶ್ಮೀರದಲ್ಲಿ ಮಿತಿ ಮೀರಿದ ಸಂದರ್ಭದಲ್ಲೂ ವಾಸವಾಗಿದ್ದರು.

ಇನ್ನು ಮಂಗಳವಾರವೇ ಇನ್ನಿಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಪೈಕಿ ಓರ್ವ ಮೊಹಮ್ಮದ್‌ ಶಫಿ ಬಂಡೀರಪುರದಲ್ಲಿ ಟ್ಯಾಕ್ಸಿ ಚಾಲಕನಾಗಿದ್ದಾನೆ. ಇನ್ನೋರ್ವ ಶ್ರೀನಗರದಲ್ಲಿ ಬೀದಿ ಬದಿಯಲ್ಲಿ ಆಹಾರದ ವ್ಯಾಪಾರ ಮಾಡುವ ಬಿಹಾರದ ವಿರೇಂದರ್‌ ಪಾಸ್ವಾನ್‌ ಮೃತ ವ್ಯಕ್ತಿ. ಈ ಹತ್ಯೆಯನ್ನು ಲಷ್ಕರ್‌ ಇ ತೊಯ್ಬಾ ಭಯೋತ್ಪಾದಕ ಗುಂಪು ನಡೆಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಜನವರಿಯಿಂದ ಕೊಲ್ಲಲ್ಪಟ್ಟ 28 ನಾಗರಿಕರಲ್ಲಿ ಏಳು ಮಂದಿ ಮುಸ್ಲಿಮೇತರರು ಎಂದು ಕೂಡಾ ಪೊಲೀಸರು ತಿಳಿಸಿದ್ದಾರೆ.

ತಮ್ಮ ಮೇಲೆ ನಡೆಯಬಹುದಾದ ದಾಳಿ ಭಯದಿಂದ ಕೆಲವು ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯುತ್ತಿದ್ದಾರೆ. ಕಾಶ್ಮೀರಿ ಪಂಡಿತರಲ್ಲದೆ ಕೆಲ ಕುಟುಂಬಗಳು ಸಹ ತೊರೆಯುತ್ತಿದ್ದಾರೆ. 1990ರ ದಾಳಿ ಮರು ಕಳಿಸುತ್ತಿದೆ ಎಂದು ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಅಧ್ಯಕ್ಷ ಸಂಜಯ್ ಟಿಕು ಹೇಳಿದ್ದಾರೆ. ಜೂನ್ ನಲ್ಲಿ ಉಪ ರಾಜ್ಯಪಾಲರ ಭೇಟಿಗೆ ಮನವಿ ಸಲ್ಲಿಸಿದ್ದೆವು. ಆದರೆ, ಈವರೆಗೂ ಭೇಟಿಗೆ ಅವಕಾಶ ದೊರೆತಿಲ್ಲ. ಸಾಮಾಜಿಕ ಮಾಧ್ಯಮಗಳಿಂದ ಇಂತಹ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+