ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಬಂಧನ ಬಿಡುಗಡೆಯಾದ ಒಮರ್‌ಗೆ ಲಾಕ್‌ಡೌನ್ ಸ್ವಾಗತ

|
Google Oneindia Kannada News

ಶ್ರೀನಗರ, ಮಾರ್ಚ್ 24: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಮುಂದಾಗಿದ್ದ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಮಾಜಿ ಸಿಎಂ ಒಮರ್ ಅಬ್ದುಲ್ಲಾರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಸುಮಾರು 8 ತಿಂಗಳ ಬಳಿಕ ಮಾರ್ಚ್ 24ರಂದು ಬಿಡುಗಡೆಗೊಂಡ ಒಮರ್ ಅವರಿಗೆ ಲಾಕ್‌ಡೌನ್ ಸ್ವಾಗತ ಸಿಕ್ಕಿದೆ. ದೇಶದೆಲ್ಲೆಡೆ ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಮಾಡಲಾಗಿದೆ.

ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿಯಲ್ಲಿ ಫೆಬ್ರವರಿ 05ರಂದು ಬಂಧನಕ್ಕೊಳಗಾಗಿದ್ದ ಒಮರ್ ರನ್ನು ಬಿಡುಗಡೆ ಮಾಡಲಾಗಿದೆ. ಪಿಎಸ್‌ಎ ಕಾಯ್ದೆ ಪ್ರಕಾರ, ಇದರ ಅಡಿ ಬಂಧಿಸಲಾದ ವ್ಯಕ್ತಿಗಳನ್ನು ಯಾವುದೇ ವಿಚಾರಣೆ ಇಲ್ಲದೆ, ಕನಿಷ್ಠ ಆರು ತಿಂಗಳಿನಿಂದ ಗರಿಷ್ಠ ಎರಡು ವರ್ಷದವರೆಗೂ ಬಂಧಿಸಿಡಲು ಅವಕಾಶವಿದೆ. ಮಾರ್ಚ್ 10ರಂದು 50ನೇ ವಸಂತಕ್ಕೆ ಕಾಲಿರಿಸಿದ ಒಮರ್ ಸುಮಾರು 232 ದಿನಗಳನ್ನು ಹೊರ ಪ್ರಪಂಚದ ಸಂಪರ್ಕವಿಲ್ಲದೆ ಕಳೆದಿದ್ದಾರೆ.

ಕಾಶ್ಮೀರ ಮಾಜಿ ಸಿಎಂಗಳನ್ನು ಬಿಡುಗಡೆ ಮಾಡಿ: ದೇವೇಗೌಡ ಆಗ್ರಹಕಾಶ್ಮೀರ ಮಾಜಿ ಸಿಎಂಗಳನ್ನು ಬಿಡುಗಡೆ ಮಾಡಿ: ದೇವೇಗೌಡ ಆಗ್ರಹ

Omar Abdullah released as nation stays at home

ಯಾವಾಗಲೂ ಕ್ಲೀನ್ ಶೇವ್ ಮಾಡಿಕೊಂಡು ಜಂಟಲ್‌ಮನ್‌ ನಂತೆ ಇರುತ್ತಿದ್ದ ಒಮರ್ ಅಬ್ದುಲ್ಲಾ ಗಡ್ಡ ಬಿಟ್ಟು ಗುರುತೇ ಸಿಗದಂತೆ ಕಾಣುತ್ತಿದ್ದ ಚಿತ್ರವೊಂದು ಜನವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಒಮರ್ ಅಬ್ದುಲ್ಲಾ ಗೃಹ ಬಂಧನದಿಂದ ಬಿಡುಗಡೆ ಆಗುವವರೆಗೂ ಗಡ್ಡ ತೆಗೆಯದಿರಲು ಒಮರ್ ನಿರ್ಧರಿಸಿದ್ದರು ಎಂಬ ಸುದ್ದಿಯಿದೆ.

English summary
Former Jammu and Kashmir chief minister Omar Abdullah was released on Tuesday after nearly eight months of detention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X