ಪುಲ್ವಾಮಾದಲ್ಲಿ ಗ್ರೆನೇಡ್ ಎಸೆದ ಉಗ್ರರು: ಎಂಟು ಮಂದಿಗೆ ಗಾಯ
ಪುಲ್ವಾಮಾ, ಜೂನ್ 18: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಪೊಲೀಸ್ ಠಾಣೆಯೊಂದರ ಮೇಲೆ ಎಸೆದ ಗ್ರೆನೇಡ್ ಹೊರಭಾಗದ ಜನನಿಬಿಡ ರಸ್ತೆಯಲ್ಲಿ ಸ್ಫೋಟಗೊಂಡ ಪರಿಣಾಮ ಎಂಟು ಮಂದಿ ನಾಗರಿಕತು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ನಾಗರಿಕರ ಸ್ಥಿತಿ ಗಂಭೀರವಾಗಿದೆ.
ಹತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದ ಸುತ್ತಮುತ್ತಲೂ ಉಗ್ರರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಅರಿಹಾಲ್ ಗ್ರಾಮದಲ್ಲಿ ಸೋಮವಾರ ಉಗ್ರರು 44 ರಾಷ್ಟ್ರೀಯ ರೈಫಲ್ಸ್ ಸೇನಾ ಪಡೆಯ ವಾಹನವನ್ನು ಐಇಡಿ ಮೂಲಕ ಸ್ಫೋಟಿಸಿ ಹಾನಿ ಮಾಡಿದ್ದರು. ಘಟನೆಯಲ್ಲಿ ಇಬ್ಬರು ಸೈನಿಕರು ಮೃತಪಟ್ಟು 16 ಮಂದಿ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಪೊಲೀಸ್ ಠಾಣೆಯ ಮೇಲಿನ ಮತ್ತೊಂದು ದಾಳಿಯ ಪ್ರಯತ್ನ ನಡೆದಿದೆ.

ಶಂಕಿತ ಉಗ್ರರು ಗ್ರೆನೇಡ್ ಅನ್ನು ಪೊಲೀಸ್ ಠಾಣೆಯನ್ನು ಗುರಿಯಾಗಿರಿಸಿಕೊಂಡು ಎಸೆದಿದ್ದರು. ಆದರೆ ಅದು ರಸ್ತೆಯ ಬದಿಯಲ್ಲಿ ಬಿದ್ದು ಸ್ಫೋಟಗೊಂಡಿತು. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಶ್ರೀನಗರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.












Click it and Unblock the Notifications