ಜಮ್ಮುವಿನಿಂದ ಅಮರನಾಥ ಯಾತ್ರೆ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ
ಶ್ರೀನಗರ, ಜುಲೈ 10: ಹವಾಮಾನ ವೈಪರೀತ್ಯದಿಂದಾಗಿ ಜಮ್ಮುವಿನಿಂದ ಗುಹೆ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ ಎರಡು ದಿನಗಳ ನಂತರ ಕೇಂದ್ರವು ಭಾನುವಾರ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಿದೆ. ಇತ್ತೀಚಿನ ಆದೇಶದ ಪ್ರಕಾರ, ಜಮ್ಮುವಿನಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಗುಹೆಯ ದೇಗುಲದ ಮೂಲ ಶಿಬಿರಗಳಿಗೆ ಯಾವುದೇ ಹೊಸ ಬ್ಯಾಚ್ ಯಾತ್ರೆ ಕೈಗೊಳ್ಳಲು ಅನುಮತಿ ಇಲ್ಲ ಎಂದು ತಿಳಿಸಿದೆ.
ಪ್ರತಿಕೂಲ ಹವಾಮಾನದಿಂದಾಗಿ ಜಮ್ಮುವಿನಿಂದ ಕಾಶ್ಮೀರದ ಅವಳಿ ಬೇಸ್ ಕ್ಯಾಂಪ್‌ಗಳಿಗೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಹೊಸ ಬ್ಯಾಚ್‌ಗೆ ಅಮರನಾಥದತ್ತ ತೆರಳಲು ಅವಕಾಶ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಜೂನ್ 30 ರಂದು, ವಾರ್ಷಿಕ 43 ದಿನಗಳ ತೀರ್ಥಯಾತ್ರೆಯು ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿರುವ ನುನ್ವಾನ್-ಪಹಲ್ಗಾಮ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನಲ್ಲಿರುವ ಬಾಲ್ಟಾಲ್ ಅವಳಿ ಬೇಸ್ ಕ್ಯಾಂಪ್‌ಗಳಿಂದ ಪ್ರಾರಂಭವಾಯಿತು. ಇಲ್ಲಿಯವರೆಗೆ, ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥ ಗುಹೆಯಲ್ಲಿ ಶಿವಲಿಂಗದ ದರ್ಶನ ಪಡೆದಿದ್ದಾರೆ. ನೈಸರ್ಗಿಕವಾಗಿ ವರ್ಷಕ್ಕೊಮ್ಮೆ ಹಿಮದ ಶಿವಲಿಂಗ ಗೋಚರಿಸುತ್ತದೆ.

ಮುಂದುವರೆದ ಪರಿಹಾರ ಕಾರ್ಯ
ಅಮರನಾಥ ಗುಹೆ ದೇಗುಲದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಭಾನುವಾರ ಪುನರಾರಂಭಿಸಲಾಗಿದ್ದು, ಶುಕ್ರವಾರ ಸಂಜೆ ಮೇಘಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ 40 ಜನರಿಗಾಗಿ ಹುಡುಕಾಟ ನಡೆಸಕಲಾಗುತ್ತಿದೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಬಿಎಸ್‌ಎಫ್, ಸಿಆರ್‌ಪಿಎಫ್, ಸೇನೆ, ಪೊಲೀಸ್ ಮತ್ತು ಐಟಿಬಿಪಿ ತಂಡಗಳು ಭಾನುವಾರ ಬೆಳಿಗ್ಗೆ ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಿದವು ಎಂದು ಗಂದರ್ಬಾಲ್ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಅಫ್ರೋಜಾ ಶಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರವಾಹದ ಅವಶೇಷಗಳಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಅಮರನಾಥ ಯಾತ್ರೆಯ ವೇಳೆ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ ಬೀಡ್‌ನ ಅರವತ್ಮೂರು ಜನರನ್ನು ರಕ್ಷಣೆ ಮಾಡಲಾಗಿದೆ. ಜಮ್ಮು, ಶ್ರೀನಗರ ಮತ್ತು ಇತರ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
39 ಯಾತ್ರಾರ್ಥಿಗಳು ಧಮಂಗಾವ್ ಗ್ರಾಮ ಮತ್ತು 24 ಯಾತ್ರಾರ್ಥಿಗಳು ಬೀಡ್ ಜಿಲ್ಲೆಯ ಪರ್ಲಿಯಿಂದ ಜಮ್ಮು ಮತ್ತು ಕಾಶ್ಮೀರದ ಅಮರನಾಥಕ್ಕೆ ಹೋಗಿದ್ದರು, ಯಾತ್ರಾರ್ಥಿಗಳು ಅಮರನಾಥ ದೇವಾಲಯದ ದೇಗುಲದ ಬಳಿ ಸಿಲುಕಿಕೊಂಡಿದ್ದಾರೆ. ಅವರನ್ನು ಈಗ ರಕ್ಷಿಸಲಾಗಿದೆ ಶ್ರೀನಗರ, ಬಾಲ್ಟಾಲ್ ಮತ್ತು ದೆಹಲಿಗೆ ಕರೆದೊಯ್ಯಲಾಗಿದೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications