• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆ, ಓರ್ವ ಉಗ್ರ ಶರಣಾಗತಿ

|

ಶ್ರೀನಗರ, ಆಗಸ್ಟ್ 28: ಜಮ್ಮು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಉಗ್ರ ಶರಣಾಗತಿಯಾಗಿದ್ದಾರೆ.

ಎರಡು ಎಕೆ ರೈಫಲ್, ಮೂರು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಉಗ್ರ ಸಂಘಟನೆಯಾದ ಅಲ್ ಬದರ್‌ನ ಜಿಲ್ಲಾ ಕಮಾಂಡರ್ ಶಕೂರ್ ಪರ್ರೆ ಹಾಗೂ ಇತ್ತೀಚೆಗಷ್ಟೇ ಖಾನ್ ಮೊಹ್ ಪ್ರದೇಶದ ಬಿಜೆಪಿಯ ಪಂಚಾಯಿತಿ ಸದಸ್ಯರೊಬ್ಬರನ್ನು ಅಪಹರಿಸಿ ನಂತರ ಹತ್ಯೆ ಮಾಡಿದ್ದ ಸುಹೈಲ್ ಭಟ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

ಪುಲ್ವಾಮಾ ದಾಳಿಗೆ ಜೈಷ್ ಉಗ್ರ ಸಂಘಟನೆ ವ್ಯಯಿಸಿದ್ದ ಹಣವೆಷ್ಟು?

ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸಲು ಹಾಗೂ CRPF ಸಿಬ್ಬಂದಿಗಳು ಈ ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪ್ರದೇಶವನ್ನು ಸುತ್ತುವರೆದ ಭದ್ರತಾಪಡೆ ಯೋಧರು ಹುಡುಕು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ಸುರಿಮಳೆಗೈದಿದ್ದಾರೆ.

ಇದಕ್ಕೆ ಭದ್ರತಾ ಪಡೆಯ ಯೋಧರು ಕೂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಈ ದಾಳಿಯಲ್ಲಿ ಒಟ್ಟು ನಾಲ್ವರು ಉಗ್ರರು ಹತ್ಯೆಯಾಗಿದ್ದಾರೆ. ಇದೇ ವೇಳೆ ಓರ್ವ ಉಗ್ರನನ್ನು ಜೀವಂತ ಸೆರೆಹಿಡಿಯಲಾಗಿದೆ.

ಈ ಉಗ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಯಾವೊಬ್ಬ ಯೋಧನು ಕೂಡ ಹುತಾತ್ಮನಾದ ವರದಿಯಾಗಿಲ್ಲ.

English summary
Four militants were killed on Friday in an encounter with security forces, while another surrendered in Shopian district of Jammu and Kashmir, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X