ಉಗ್ರರ ದಾಳಿ: ಓರ್ವ ಸಿಆರ್‌ಪಿಎಫ್ ಯೋಧ ಸೇರಿ ಇಬ್ಬರು ಹುತಾತ್ಮ
ಶ್ರೀನಗರ, ಜುಲೈ 1: ಜಮ್ಮು ಮತ್ತು ಕಾಶ್ಮೀರದ ಸೊಪೊರ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್‌ಪಿಎಫ್ ಯೋಧ ಸೇರಿ ಇಬ್ಬರು ಹುತಾತ್ಮರಾಗಿದ್ದಾರೆ.
ಓರ್ವ ಯೋಧ ಹಾಗೂ ನಾಗರಿಕರೊಬ್ಬರು ಕೂಡ ದಾಳಿಗೆ ಬಲಿಯಾಗಿದ್ದು, ಆರಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.ಬೆಳಗ್ಗೆ 7.30ರ ಸಮಯದಲ್ಲಿ ಬರಾಮುಲ್ಲಾ ಜಿಲ್ಲೆಯಲ್ಲಿ, ಶ್ರೀನಗರದಿಂದ 50 ಕಿ.ಮೀ ದೂರದಲ್ಲಿರುವ ಸೋಪೊರ್ ಪ್ರದೇಶದದಲ್ಲಿ ದಾಳಿ ನಡೆದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಹಾಗೂ ಯೋಧರು ಭಯೋತ್ಪಾದಕರನ್ನು ಸೆರೆ ಹಿಡಿಯುವ ಪ್ರಯತ್ನ ಮುಂದುವರೆಸಿದ್ದಾರೆ.












Click it and Unblock the Notifications