''ಮನೆಯೊಳಗೆ ನುಗ್ಗಿ ಹೊಡೆಯುವ ತಂತ್ರ ಚೀನಾದಿಂದ ಹೈಜಾಕ್''
ಶ್ರೀನಗರ, ಜೂನ್ 16: ಭಾರತ-ಚೀನಾ ಸೇನೆ ನಡುವಿನ ಮುಖಾಮುಖಿಯಲ್ಲಿ ಭಾರತೀಯ ಸೇನಾಧಿಕಾರಿ, ಇಬ್ಬರು ಸೈನಿಕರು ಸೇರಿ ಮೂರು ಮಂದಿ ಹುತಾತ್ಮರಾಗಿರುವ ವರದಿ ಬಂದಿದೆ. ಈ ಘಟನೆ ಬಗ್ಗೆ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.
Recommended Video
''ಮನೆಯೊಳಗೆ ನುಗ್ಗಿ ಹೊಡೆಯುವ ಮಿಲಿಟರಿ ತಂತ್ರವನ್ನು ಚೀನಾದವರು ಹೈಜಾಕ್ ಮಾಡಿರುವ ಹಾಗೆ ಕಾಣಿಸುತ್ತಿದೆ. ಆದರೆ, ಯಾವುದೇ ಪ್ರತಿರೋಧ, ಪ್ರತಿ ದಾಳಿ ಬಗ್ಗೆ ಯಾಕೆ ಮಾಡುತ್ತಿಲ್ಲ ಎಂಬುದನ್ನು ತಿಳಿಯಲು ದೇಶ ಕಾತುರದಿಂದ ಕಾದಿದೆ. ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅದಕ್ಕೆ ಪ್ರತೀಕಾರ ಬೇಡವೇ" ಎಂದು ಮುಫ್ತಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
Seems like China has hijacked the aggressive ‘ghar main ghuske marengay’ militaristic approach. Nation deserves to know why there is no talk of retaliation to avenge the death of three Indian army personnel!
— Mehbooba Mufti (@MehboobaMufti) June 16, 2020
ಜೂನ್ 6 ನಡೆದ ಉಭಯ ದೇಶಗಳ ಉನ್ನತ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಿ ಶಾಂತಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬರಲಾಗಿತ್ತು.

ಪೂರ್ವ ಲಡಾಖ್ ಗಡಿಯಿಂದ ಉಭಯ ದೇಶಗಳ ಸೇನಾ ಪಡೆಗಳೂ ಹಿಂದಕ್ಕೆ ಸರಿಯುತ್ತಿದ್ದು, ಪೆಟ್ರೋಲಿಂಗ್ ಪಾಯಿಂಟ್(ಗಸ್ತು ಪ್ರದೇಶ) 14, 15 ಹಾಗೂ 17 ಸ್ಥಳಗಳಿಂದ ಸುಮಾರು 2 ರಿಂದ 2.5 ಕಿ.ಮೀ ಹಿಂದಕ್ಕೆ ಸರಿಯಲು ಸೂಚಿಸಲಾಗಿತ್ತು.
ಆದರೆ, ಲಡಾಕ್ ನ ಗಾಲ್ವಾನ್ ಕಣಿವೆ ಪ್ರದೇಶದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದೆ. ಉಭಯ ಸೇನೆ ನಡುವೆ ಕಲ್ಲು ತೂರಾಟ, ಲೋಹದ ವಸ್ತುಗಳನ್ನು ಎಸೆದಾಟ ನಡೆದಿದ್ದು, ಇದರಿಂದ ಗಾಯಗೊಂಡು ಎರಡು ಕಡೆ ಯೋಧರು ಮೃತಪಟ್ಟಿದ್ದಾರೆ.
1975ರಲ್ಲಿ ಅರುಣಾಚಲಪ್ರದೇಶದ ನಾಲ್ವರು ಭಾರತೀಯ ಸೈನಿಕರನ್ನು ಚೀನಾ ಸೇನೆಯು ಹತ್ಯೆ ಮಾಡಿತ್ತು. ಇದಾದ ಬಳಿಕ ಸೈನಿಕರು ಮೃತಪಟ್ಟ ಘಟನೆ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications