• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಡೀ ಕಾಶ್ಮೀರವು ಮುಂದೊಂದು ದಿನ ಭಾರತದ ಪಾಲಾಗುವ ವಿಶ್ವಾಸ: ಅಮಿತ್ ದೇವ್

|
Google Oneindia Kannada News

ಶ್ರೀನಗರ, ಅಕ್ಟೋಬರ್ 28: ಮುಂದೊಂದು ದಿನ ಇಡೀ ಕಾಶ್ಮೀರವೇ ಭಾರತದ್ದಾಗುವ ವಿಶ್ವಾಸ ಇದೆ ಎಂದು ವೆಸ್ಟರ್ನ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಎಒಸಿ-ಇನ್-ಸಿ) ಏರ್ ಮಾರ್ಷಲ್ ಅಮಿತ್ ದೇವ್ ಹೇಳಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಲು ಸದ್ಯಕ್ಕೆ ಯಾವುದೇ ಯೋಜನೆ ಇಲ್ಲ. ಆದರೆ, ಮುಂದೊಂದು ದಿನ ಇಡೀ ಕಾಶ್ಮೀರವನ್ನು ಭಾರತ ಹೊಂದಲಿದೆ ಎಂದರು.

 'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್‌ ಭಯ ಬೇಡ': ಸೇನೆ 'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್‌ ಭಯ ಬೇಡ': ಸೇನೆ

ಭಾರತೀಯ ಸೇನೆಯ 'ಬುದ್ಗಾಮ್ ಭೂಸ್ಪರ್ಶ'ದ 75ನೇ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಒಕೆಯಲ್ಲಿರುವ ಜನರನ್ನು ಪಾಕಿಸ್ತಾನ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

'ತಂತ್ರಜ್ಞಾನೊಂದಿಗೆ ಹೆಜ್ಜೆ ಹಾಕಬೇಕು': ತಂತ್ರಜ್ಞಾನದ ಬದಲಾವಣೆ ಇಂದು ಜಗತ್ತಿನಲ್ಲಿ ತುಂಬಾ ವೇಗವಾಗಿದ್ದು, ನಾವು ಅದರೊಂದಿಗೆ ಹೆಜ್ಜೆ ಹಾಕಬೇಕು. ಆರ್ಥಿಕವಾಗಿ ಬೆಳೆಯಬೇಕಾದ ಯಾವುದೇ ರಾಷ್ಟ್ರವು ಬಲಿಷ್ಠ ಮಿಲಿಟರಿಯನ್ನು ಹೊಂದಿರಬೇಕಾದರೆ, ಮುಂದಿನ ವರ್ಷಗಳಲ್ಲಿ ನಾವು ರಾಷ್ಟ್ರಕ್ಕೆ ನಮ್ಮ ಬಾಧ್ಯತೆಯನ್ನು ಪೂರೈಸಬೇಕಿದೆ.

ಹೀಗಾಗಿ ನಾವು ಯಾವಾಗಲೂ ಸವಾಲಿಗೆ ಸಿದ್ಧರಿದ್ದೇವೆ. ಐಎಎಫ್ ಅತ್ಯಂತ ಸಮರ್ಥ ಶಕ್ತಿಯಾಗಿ ಮಾರ್ಪಟ್ಟಿದೆ. ಮುಂಬರುವ ವರ್ಷಗಳಲ್ಲಿ ನಾವು ಗೌರವದಿಂದ ರಾಷ್ಟ್ರದ ಸೇವೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ಬುದ್ಗಾಮ್ ಭೂಸ್ಪರ್ಶದ 75 ನೇ ವರ್ಷವನ್ನು ಆಚರಿಸುವುದು ಐತಿಹಾಸಿಕ ಸಂದರ್ಭವಾಗಿದೆ. ಸೇರ್ಪಡೆಯ ಪತ್ರಕ್ಕೆ ಸಹಿ ಹಾಕಿದ ನಂತರ, ನಾವು ನಮ್ಮ ಸೈನ್ಯವನ್ನು ತ್ವರಿತವಾಗಿ ಇಲ್ಲಿ ಇಳಿಸಿದ್ದೇವೆ. ಶ್ರೀನಗರದ ವಾಯುನೆಲೆಯನ್ನು ಉಳಿಸಿದ್ದೇವೆ. ಇದಾದ ಬಳಿಕ ನಾವು ಮತ್ತಷ್ಟು ಆಕ್ರಮಣ ಆರಂಭಿಸುವ ಮೂಲಕ ಕಬಾಲಿಸ್ ಎಂದು ಬಂದ ಪಾಕಿಸ್ತಾನಿ ಮಿಲಿಟರಿಯನ್ನು ಮತ್ತಷ್ಟು ಹಿಂದಕ್ಕೆ ತಳ್ಳಿದ್ದೇವೆ ಎಂದು ಏರ್ ಮಾರ್ಷಲ್ ಅಮಿತ್ ದೇವ್ ಹೇಳಿದ್ದಾರೆ.

1947ರ ಅಕ್ಟೋಬರ್‌ 27 ರಂದು ಭಾರತೀಯ ವಾಯುಪಡೆ ಹಾಗೂ ಸೇನೆ ನಡೆಸಿದ ಎಲ್ಲಾ ಚಟುವಟಿಕೆಗಳಿಂದ ಕಾಶ್ಮೀರದಲ್ಲಿ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವಲ್ಲಿ ಕಾರಣವಾಯಿತು.

ಮುಂದೊಂದು ದಿನ ಪಾಕ್ ಆಕ್ರಮಿತ ಕಾಶ್ಮೀರವೂ ಕಾಶ್ಮೀರದ ಈ ಭಾಗಕ್ಕೆ ಸೇರುತ್ತದೆ. ಮುಂದಿನ ವರ್ಷಗಳಲ್ಲಿ ನಾವು ಸಂಪೂರ್ಣ ಕಾಶ್ಮೀರವನ್ನು ಹೊಂದುತ್ತೇವೆ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ.

ಪಾಕಿಸ್ತಾನಿ ಬುಡಕಟ್ಟು ದಾಳಿಯ ನಂತರ ಅಂದಿನ ಮಹಾರಾಜ ಹರಿ ಸಿಂಗ್ ಅವರು ಭಾರತದೊಂದಿಗೆ ಸೇರ್ಪಡೆಯ ಪತ್ರಕ್ಕೆ ಸಹಿ ಹಾಕಿದ ಒಂದು ದಿನದ ನಂತರ, 1947ರ ಅಕ್ಟೋಬರ್ 27 ರಂದು ಭಾರತೀಯ ಸೈನಿಕರು ಕಾಶ್ಮೀರಕ್ಕೆ ಬಂದಿಳಿದಿದ್ದರು.

ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶ ಮಾಡಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ಪಾಕ್ ಆಕ್ರಮಿತ ಕಾಶ್ಮೀರದ ಮರುವಶ ಕಾಶ್ಮೀರ ಭಾಗವೂ ಸೇರಿದಂತೆ ಸಮಸ್ತ ಭಾರತೀಯರ ಬಯಕೆ ಆಗಿದೆ.

ಪಾಕಿಸ್ತಾನಿ ಬುಡಕಟ್ಟು ದಾಳಿಯ ನಂತರ ಅಂದಿನ ಮಹಾರಾಜ ಹರಿ ಸಿಂಗ್ ಅವರು ಭಾರತದೊಂದಿಗೆ ಸೇರ್ಪಡೆಯ ಪತ್ರಕ್ಕೆ ಸಹಿ ಹಾಕಿದ ಒಂದು ದಿನದ ನಂತರ, 1947ರ ಅಕ್ಟೋಬರ್‌ 27 ರಂದು ಭಾರತೀಯ ಸೈನಿಕರು ಕಾಶ್ಮೀರಕ್ಕೆ ಬಂದಿಳಿದಿದ್ದರು. ಎಐಎಫ್‌ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಆದರೆ, ತಂತ್ರಜ್ಞಾನ ಮೂಲಭೂತವಾಗಿದೆ ಎಂದು ಹೇಳಿದ್ದಾರೆ.

'ಕಾಶ್ಮೀರ ಒಂದೇ, ರಾಷ್ಟ್ರವೂ ಒಂದೇ': ಪಿಒಕೆ ವಶಪಡಿಸಿಕೊಳ್ಳಲು ಯಾವುದಾದರೂ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಾಯುಸೇನೆ ಅಧಿಕಾರಿ ಅಮಿತ್‌ ದೇವ್‌, ಸದ್ಯಕ್ಕೆ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ. ಕಾಶ್ಮೀರ ಒಂದೇ, ರಾಷ್ಟ್ರವೂ ಒಂದೇ. ಎರಡೂ ಕಡೆಯ ಜನರು ಸಾಮಾನ್ಯ ಭಾವನೆಗಳನ್ನು ಹೊಂದಿದ್ದಾರೆ. ಇಂದು ಅಥವಾ ನಾಳೆ ರಾಷ್ಟ್ರ ಒಂದಾಗುವ ಮೂಲಕ ಇತಿಹಾಸಕ್ಕೆ ಸಾಕ್ಷಿಯಾಗಲಿದೆ ಎಂದು ಭವಿಷ್ಯ ನುಡಿದರು.

ಈಚೆಗೆ ನಡೆಯುತ್ತಿರುವ ಡ್ರೋಣ್ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅದನ್ನು ಎದುರಿಸಲು ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಡ್ರೋಣ್ ದಾಳಿಗಳಿಂದ ಹೆಚ್ಚಿನ ಹಾನಿ ಮಾಡಲು ಸಾಧ್ಯವಿಲ್ಲ.

ಮುಂದಿನ ದಿನಗಳಲ್ಲಿ ಇದನ್ನು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು. ಕಾಶ್ಮೀರದ ಮಹಾರಾಜ ಹರಿ ಸಿಂಗ್​ ಭಾರತದೊಂದಿಗೆ ವಿಲೀನವಾಗುವ ದಾಖಲೆಗೆ ಸಹಿ ಹಾಕಿದ ನಂತರ ಭಾರತೀಯ ಸೇನೆ ತುಕಡಿಗಳು ಪಾಕ್ ಬುಡಕಟ್ಟು ದಾಳಿಕೋರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಮಹತ್ವದ ದಿನದ ನೆನಪಿಗಾಗಿ ಬುದ್​ಗಮ್ ದಿನವನ್ನು ದೇಶ ನೆನೆಯುತ್ತದೆ ಎಂದರು.

English summary
A top Air Force officer Marshal Amit Dev on Wednesday said there was no plan "at the moment" to capture Pakistan-occupied Kashmir (PoK), but expressed the hope that someday India will have the "whole of Kashmir".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X