ಅಸಿಯಾ ಅಂದ್ರಾಬೀ ಮನೆ ಎನ್ ಐಎಯಿಂದ ಮುಟ್ಟುಗೋಲು
ದುಕ್ತರನ್ -ಇ-ಮಿಲ್ಲತ್ ನ ಮುಖ್ಯಸ್ಥೆ ಅಸಿಯಾ ಅಂದ್ರಾಬೀ ಮನೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಮುಟ್ಟುಗೋಲು ಹಾಕಿಕೊಂಡಿದೆ. ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಇತರ ಪ್ರತ್ಯೇಕತಾವಾದಿಗಳ ಜತೆಗೆ ಅಸಿಯಾ ಅಂದ್ರಾಬೀ ವಿಚಾರಣೆ ನಡೆಸಲಾಗಿದೆ.
ಸದ್ಯಕ್ಕೆ ಅಸಿಯಾ ಅಂದ್ರಾಬೀ, ಶಬೀರ್ ಷಾ ಮತ್ತು ಇತರ ಪ್ರತ್ಯೇಕತವಾದಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಶ್ರೀನಗರ್ ನಲ್ಲಿ ಇರುವ ಅಸಿಯಾ ಅಂದ್ರಾಬೀ ಮನೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ. ಕಾನೂನು ಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಎನ್ ಐಎಯಿಂದ ಶಬೀರ್ ಷಾ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಒಂದು ಸಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೆ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಅಧಿಕಾರಿಗಳ ಅನುಮತಿಯೊಂದಿಗೆ ವರ್ಗಾವಣೆ ಮಾಡಬಹುದು. ಕಳೆದ ಆರು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಯಿಂದ ನೂರಾ ಇಪ್ಪತ್ತೈದು ಉಗ್ರರನ್ನು ಕೊಲ್ಲಲಾಗಿದೆ. ಕೇಂದ್ರ ಸರಕಾರದಿಂದ ಉಗ್ರ ನಿಗ್ರಹಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.












Click it and Unblock the Notifications