• search
  • Live TV
ಶ್ರೀನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

|

ಶ್ರೀನಗರ, ಜೂನ್ 07: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಪುಲ್ವಾಮಾದ ಲಾಸ್ಸಿಪೊರ ಎಂಬಲ್ಲಿ ತಡರಾತ್ರಿಯಂದಲೂ ನಡೆದ ಎನ್ ಕೌಂಟರ್ ದಾಳಿಯಲ್ಲಿನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲೇಖಕ ರವಿ ಬೆಳಗೆರೆ ಹೊಸ ಪುಸ್ತಕ 'ಫ್ರಮ್ ಪುಲ್ವಾಮಾ'; ಪಾಕ್ ಗೆ ಭಾರತ ನೀಡಿದ ಸಾಕ್ಷ್ಯದ ಇಂಚಿಂಚೂ ವಿವರ

ಲಾಸ್ಸಿಪೊರದಲ್ಲಿ ಮತ್ತಷ್ಟು ಉಗ್ರರು ಅವಿತಿರುವ ಶಂಕೆ ಇದ್ದು, ಕಾರ್ಯಾಚರಣೆಯನ್ನು ಇಂದೂ ಮುಂದುವರಿಸಲಾಗುವುದು ಎಂದು ಸೇನೆಯ ಮೂಲಗಳು ತಿಳಿಸಿವೆ.

ನಾಲ್ವರು ಉಗ್ರರೂ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂಬುದು ತಿಳಿದುಬಂದಿದೆ. ನಾಲ್ವರನ್ನು ಇಬ್ಬರು ವಿಶೇಷ ಪೊಲೀಸ್ ಆಫೀಸರ್ ಆಗಿದ್ದವರು, ನಂತರ ಉಗ್ರ ಸಂಘಟನೆಯನ್ನು ಸೇರಿದ್ದರು ಎಂದು ಜೀ ನ್ಯೂಸ್ ವರದಿ ಮಾಡಿದೆ.

ಮೃತ ಉಗ್ರರನ್ನು ಆಶಿಖ್ ಅಹ್ಮದ್, ಇಮ್ರಾನ್ ಅಹ್ಮದ್, ಶಬಿರ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಎದು ಗುರುತಿಸಲಾಗಿದೆ.

ಉಗ್ರರ ಜತೆ ನಂಟು ಆರೋಪ: ಎಲ್ಲ 9 ಮುಸ್ಲಿಂ ಸಚಿವರ ರಾಜೀನಾಮೆ

ಮೇ 30 ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೋಪೋರ್ ಎಂಬಲ್ಲಿ ಭಾರತೀಯ ಸೇನೆ ನಡೆಸಿದ ಎನ್ ಕೌಂಟರ್ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸದೆಬಡಿಯಲಾಗಿತ್ತು.

ಮೇ 22 ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪೊರ ಎಂಬಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.

ಅದಕ್ಕೂ ಮುನ್ನ ಮೇ 21 ರಂದು ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆಯ ಯೋಧರು ಯಶಸ್ವಿಯಾಗಿದ್ದರು.

English summary
Lassipora(Pulwama) encounter: 4 terrorists have been killed by security forces, 3 AK series rifles recovered. Search operation underway
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X