Yuzvendra Chahal: ಯುಜ್ವೇಂದ್ರ ಚಹಾಲ್ ವಿಚ್ಛೇದನ: ಪತ್ನಿಗೆ 4.5 ಕೋಟಿ ರೂಪಾಯಿ ಜೀವನಾಂಶ ನೀಡಲು ಒಪ್ಪಿಗೆ
Yuzvendra Chahal Divorce: ಒಂದೆಡೆ ಮಾರ್ಚ್ 22ರಿಂದ 18ನೇ ಆವೃತ್ತಿಯ ಐಪಿಎಲ್ ಆರಂಭವಾಗಲಿದೆ. ಈ ನಡುವೆಯೇ ಕೆಲವೊಂದು ಕ್ರಿಕೆಟ್ ತಾರೆಯರ ವಿಚ್ಛೇದನ ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಭಾರತೀಯ ಕ್ರಿಕೆಟ್ ತಾರೆ ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಅವರ ವಿಚ್ಛೇದನದ ವಿಚಾರವೊಂದು ಮತ್ತೆ ಮುನ್ನಲೆಗೆ ಬಂದಿದ್ದು, ಚಹಲ್ ಜೀವನಾಂಶವಾಗಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲ ತಿಂಗಳುಗಳಿಂದಲೂ ಭಾರತೀಯ ಕ್ರಿಕೆಟ್ ತಾರೆ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಅವರ ನಡುವಿನ ದಾಂಪತ್ಯ ಅಷ್ಟಕಷ್ಟೇ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಲೇ ಇವೆ. ಈ ನಡುವೆಯೇ ಆರ್ಜೆ ಮಹ್ವಾಶ್ ಜೊತೆ ಚಹಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಇನ್ನೂ ಧನಶ್ರೀ ಅವರಿಗೆ ಚಹಾಲ್ 4.5 ಕೋಟಿ ರೂಪಾಯಿ ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಸುಮಾರು ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಮತ್ತು ವಿಚ್ಛೇದನ ಪರಿಹಾರವಾಗಿ ವರ್ಮಾಗೆ ಚಹಲ್ ಅವರು ₹4.75 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನಕ್ಕೆ ಸಿದ್ಧತೆ ನಡೆಸುತ್ತಿದ್ದು, ಬಾಂದ್ರಾ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಚಾಹಲ್ ಧನಶ್ರೀಗೆ 4.75 ಕೋಟಿ ರೂಪಾಯಿ ಪರಿಹಾರ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೀಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಭಾರತೀಯ ಕ್ರಿಕೆಟ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರಿಗೆ ಬಾಂದ್ರಾದ ಕೌಟುಂಬಿಕ ನ್ಯಾಯಾಲಯ ಇಂದು (ಮಾರ್ಚ್ 20) ವಿಚ್ಛೇದನದ ತೀರ್ಪು ನೀಡಿದೆ. ಚಾಹಲ್ ಅವರ ವಕೀಲ ನಿತಿನ್ ಕುಮಾರ್ ಗುಪ್ತಾ ಅವರು ನ್ಯಾಯಾಲಯದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿ, ವಿಚ್ಛೆದನದ ಬಗ್ಗೆ ದೃಢಪಡಿಸಿದರು.
"ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ನ್ಯಾಯಾಲಯವು ಎರಡೂ ಕಡೆಯವರ ಅರ್ಜಿಯನ್ನು ಸ್ವೀಕರಿಸಿದೆ. ಬಳಿಕ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರಿಗೆ ವಿಚ್ಛೇದನದ ತೀರ್ಪು ನೀಡಿದೆ," ಎಂದು ತಿಳಿಸಿದರು.
ಯಜುವೇಂದ್ರ ಚಾಹಲ್, ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಚೇಳೆ ಚಹಾಲ್ ವಿಚ್ಛೇದನ ಖಚಿತವಾದಂತಾಗಿದೆ. ಈ ನಡುವೆಯೇ ಯುಜುವೇಂದ್ರ ಚಾಹಲ್, ಧನಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಪರಿಹಾರ ಹಣ ಪಾವತಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆರ್‌ಸಿಬಿ ಮಾಜಿ ಕ್ರಿಕೆಟ್ ಆಟಗಾರ ಚಹಾಲ್ ಅವರು ಐಪಿಎಲ್ 2025ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಲಿದ್ದಾರೆ.
ಇನ್ನು ಯಜುವೇಂದ್ರ ಚಾಹಲ್ ವಿಚ್ಛೇದನದ ಪರಿಹಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಕೇವಲ 818 ದಿನಗಳ ಮದುವೆಗೆ ಪ್ರತಿ ದಿನಕ್ಕೆ 50 ಸಾವಿರ ಎನ್ನುವಂತೆ ಧನಶ್ರೀ ವರ್ಮಗೆ ಯಜುವೇಂದ್ರ ಚಾಹಲ್ ಪಾವತಿ ಮಾಡಿದಂತಾಗಿದೆ ಎಂದು ಬರೆದಿರುವ ಪೋಸ್ಟರ್ ಭಾರೀ ವೈರಲ್ ಆಗುತ್ತಿದೆ.












Click it and Unblock the Notifications