T20 World Cup: ಯುವರಾಜ್ ಸಿಂಗ್ ಪ್ರಚಾರ ರಾಯಭಾರಿ
ಟಿ20 ಕ್ರಿಕೆಟ್‌ಗೆ 2007ರಲ್ಲೇ ಹೊಸ ಭಾಷ್ಯ ಬರೆದ ಪ್ಲೇಯರ್. ಬರೀ ಸಿಕ್ಸರ್ ಗಳ ಮೂಲಕವೇ ಡೀಲ್ ಮಾಡುತ್ತಿದ್ದ ಬ್ಯಾಟರ್.. ಅವಶ್ಯಕ ಇದ್ದಾಗ ವಿಕೆಟ್ ತೆಗೆದು ಅಬ್ಬರಿಸುತ್ತಿದ್ದ ಬೌಲರ್.. ಟೀಮ್ ಇಂಡಿಯಾಕ್ಕೆ ಆಪತ್‌ಭಾಂದವ ಸ್ಥಾನವನ್ನು ತುಂಬಿದ್ದ ಆಲ್‌ರೌಂಡರ್ ಯುವರಾಜ್ ಸಿಂಗ್ ಹೆಗಲಿಗೆ ಐಸಿಸಿ ಹೊಸ ಜವಾಬ್ದಾರಿಯನ್ನು ನೀಡಿದೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಈ ಬಾರಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮಹತ್ವದ ಟೂರ್ನಿಗೆ ಎಲ್ಲ ತಂಡಗಳು ತಮ್ಮ ತಂಡವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಿಸಲಿವೆ. ಭಾರತ ಸಹ ತನ್ನ ತಂಡವನ್ನು ಶೀಘ್ರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನೆಯಲ್ಲಿ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ಲಭಿಸುತ್ತದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಐಸಿಸಿ ನೀಡಿರುವ ಸುದ್ದಿ ನಿಜಕ್ಕೂ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಫುಲ್ ಖುಷಿ ತಂದಿದೆ.

ಯುವಿ ಮುಡಿಗೆ ಐಸಿಸಿ ಗರಿ
ಐಸಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಯುವರಾಜ್ ಸಿಂಗ್ ಅವರನ್ನು ಟಿ 20 ವಿಶ್ವಕಪ್ 2024 ರ ಭಾಗವಾಗಿ ಘೋಷಿಸಿದೆ. ಈ ಮಾಹಿತಿಯನ್ನು ಸ್ವತಃ ಐಸಿಸಿ ನೀಡಿದೆ. ಯುವರಾಜ್ ಸಿಂಗ್ ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಟಿ20 ವಿಶ್ವಕಪ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿರುವ ಸ್ಟಾರ್. ಟಿ20 ಕ್ರಿಕೆಟ್‌ನ ಚತುರ ಪ್ಲೇಯರ್‌ಗೆ ಐಸಿಸಿ ತಕ್ಕ ಗೌರವವನ್ನು ನೀಡಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಯುವಿ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.
Who will make it to India’s squad for the ICC Men’s #T20WorldCup 2024? 🤔
— ICC (@ICC) April 26, 2024
Event Ambassador Yuvraj Singh has some exciting prospects on his list 👀https://t.co/zMjeIig7qF
ಸಿಕ್ಸರ್ ಕಿಂಗ್
ಅಂದಹಾಗೆ ಯುವರಾಜ್ ಸಿಂಗ್ ಅವರ ಆಟವೇ ಅಂತಹದ್ದು, ಇವರ ಹೆಸರು ನೆನಪಿಗೆ ಬರುತ್ತಲೇ ಇಂಗ್ಲೆಂಡ್ ವಿರುದ್ಧ ನಡೆದ ಆ ಒಂದು ಪಂದ್ಯ ನೆನಪು ಆಗದೇ ಇರದು. 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಸ್ಟುವರ್ಟ್ ಬ್ರಾಡ್ ಅವರನ್ನು ಯುವಿ ಮನಸೋಇಚ್ಛೆ ದಂಡಿಸಿದ್ದರು. ಅಲ್ಲದೆ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಬಾರಿಸಿ ನೂತನ ದಾಖಲೆ ಬರೆದಿದ್ದರು. ಯುವರಾಜ್ ಸಿಂಗ್ ಅವರ ಅತ್ಯುತ್ತಮ ಫಾರ್ಮ್‌ನಿಂದಾಗಿ ಟೀಂ ಇಂಡಿಯಾ 2007 ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.

ಟೀಮ್ ಇಂಡಿಯಾ ಯಶಸ್ಸಿನಲ್ಲಿ ಯುವರಾಜ್ ಸಿಂಗ್ ಪಾತ್ರ ದೊಡ್ಡದು. 2011ರಲ್ಲಿ ಯುವರಾಜ್ ಸಿಂಗ್ ಟೂರ್ನಿಯಲ್ಲಿ ಮಹತ್ತರ ಪಾತ್ರವನ್ನು ನಿಭಾಯಿಸಿದ್ದಾರೆ. ಅಲ್ಲದೆ ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿದ್ದಲ್ಲಿ ಯುವಿ ಪಾತ್ರವೂ ದೊಡ್ಡದು. ಅಲ್ಲದೆ ಈ ಸ್ಟಾರ್ ಆಟಗಾರನ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿದೆ.
ಯುವಿ ಹೇಳಿದ್ದೇನು?
ಈ ಬಗ್ಗೆ ಯುವಿ ತಮ್ಮ ಸಂಸತವನ್ನು ಹಂಚಿಕೊಂಡಿದ್ದಾರೆ. ಟಿ20 ವಿಶ್ವಕಪ್ ನನ್ನ ಕ್ರಿಕೆಟ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪಂದ್ಯಗಳಲ್ಲಿ ಒಂದಾಗಿದೆ. ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವುದು ಸಹ ಅದರ ಒಂದು ಭಾಗ. ಈ ಬಾರಿಯೂ ನಾನು ಇದರ ಭಾಗವಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಪಂದ್ಯಾವಳಿಯನ್ನು ಇದುವರೆಗಿನ ಅತಿದೊಡ್ಡ ಟಿ20 ವಿಶ್ವಕಪ್ ಎಂದು ಪರಿಗಣಿಸಲಾಗಿದೆ. ಇನ್ನು ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ವಾತಾವರಣ ಅದ್ಭುತವಾಗಿದೆ. ಅಮೆರಿಕದಲ್ಲಿ ಕ್ರಿಕೆಟ್ ಕೂಡ ಹೆಚ್ಚು ಜನಪ್ರಿಯವಾಗುತ್ತಿದೆ.ಈ ಪಂದ್ಯಾವಳಿಯ ಮೂಲಕ ಅಲ್ಲಿನ ಕ್ರಿಕೆಟ್ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ನನಗೆ ಹೆಮ್ಮೆಯ ಸಂಗತಿ ಆಗಿದೆ ಎಂದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಐರ್ಲೆಂಡ್, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ತಂಡಗಳನ್ನು ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications