WPL 2026: ಆರ್‌ಸಿಬಿ ಐವರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ನಾಲ್ವರನ್ನ ಆಯ್ಕೆ ಮಾಡಿದ್ದೇಕೆ? ಯಾರು ಹಾಗೂ ಕಾರಣವೇನು?
WPL 2026 RCB Retained Players: ಈಗಾಗಲೇ ಡಬ್ಲ್ಯೂಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿದೆ. ಇನ್ನೂ 2024ರಲ್ಲಿ ಟ್ರೋಫಿ ಎತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 4ನೇ ಆವೃತ್ತಿಯ ಮೆಗಾ ಹರಾಜಿಗೂ ಮುನ್ನ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದ ಎಲ್ಲಾರನ್ನು ಕೈಬಿಟ್ಟಿದೆ. ಹಾಗಾದ್ರೆ ಯಾರೆಲ್ಲಾ ಇದ್ದಾರೆ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಗರಿಷ್ಠ ಐವರು ಐವರು ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಅವಕಾಶ ಇದ್ದು, ಉಳಿದ ಎಲ್ಲಾ ಆಟಗಾರ್ತಿಯರನ್ನು ಬಿಡುಗಡೆಗೊಳಿಸಬೇಕಾಗುತ್ತದೆ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ನಾಲ್ವಾರನ್ನು ಮಾತ್ರ ಉಳಿಸಿಕೊಂಡು ಉಳಿದ ಎಲ್ಲಾರನ್ನು ಬಿಡುಗಡೆಗೊಳಿಸಿದೆ. ಹಾಗಾದ್ರೆ ಯಾರೆಲ್ಲಾ ಉಳಿದುಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

WPLನ ಮೆಗಾ ಹರಾಜಿಗೂ ಮುಂಚಿತವಾಗಿ ಆರ್‌ಸಿಬಿಯು ನಾಲ್ವರು ಆಟಗಾರ್ತಿಯರನ್ನು ರಿಟೈನ್ ಮಾಡಿಕೊಂಡಿದೆ. ಗರಿಷ್ಠ ಐವರನ್ನು ಉಳಿಸಿಕೊಳ್ಳುವ ಅವಕಾಶ ಇದ್ದರೂ ಸಹ ನಾಲ್ವರನ್ನು ಮಾತ್ರ ಯಾಕೆ ಉಳಿಸಿಕೊಂಡಿದೆ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಅದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ನಿಯಮದ ಪ್ರಕಾರ, ಒಂದು ಫ್ರಾಂಚೈಸಿ ಗರಿಷ್ಠ ಐವರನ್ನು ಉಳಿಸಿಕೊಳ್ಳಲು ಬಯಸಿದರೆ ಅದರಲ್ಲಿ ಒಬ್ಬರು ಅನ್ಕ್ಯಾಪ್ಡ್ ಆಟಗಾರ್ತಿ ಇರಬೇಕು. ಅಂದರೆ, ರಾಷ್ಟ್ರೀಯ ತಂಡದ ಪರ ಆಡಿರದ ಆಟಗಾರ್ತಿಯನ್ನು ಒಳಗೊಂಡಂತೆ ಐವರನ್ನು ಉಳಿಸಿಕೊಳ್ಳಬಹುದಾಗಿದೆ. ಇನ್ನು ಬೆಂಗಳೂರು ತಂಡದಲ್ಲಿರುವವರು ಬಹುತೇಕರು ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರ್ತಿಯರಾಗಿದ್ದಾರೆ.
ಇನ್ನು ಅನ್ಕ್ಯಾಪ್ಡ್ ಆಗಿರುವ ಪ್ಲೇಯರ್ಸ್ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದ್ದರಿಂದ ಆರ್‌ಸಿಬಿ ನಾಲ್ವರು ಸ್ಟಾರ್ ಆಟಗಾರ್ತಿಯರನ್ನು ಮಾತ್ರ ಉಳಿಸಿಕೊಂಡಿದೆ. ಇನ್ನೂ ಆರ್ಸಿಬಿಗೆ ಓರ್ವ ಆಟಗಾರ್ತಿ ಮೇಲೆ ಆರ್ಟಿಎಂ ಕಾರ್ಡ್ ಬಳಸಲು ಸಹ ಅವಕಾಶ ಇದೆ.
ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರ್ತಿಯರು
* ಸ್ಮೃತಿ ಮಂಧಾನ
* ರಿಚಾ ಘೋಷ್
* ಎಲ್ಲಿಸ್ ಪೆರ್ರಿ
* ಶ್ರೇಯಾಂಕಾ ಪಾಟೀಲ್
ಸ್ಮೃತಿ ಮಂಧಾನ: ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಅವರನ್ನು ಫ್ರಾಂಚೈಸಿ ಮೊದಲ ಆಯ್ಕೆಯಾಗಿ ರಿಟೈನ್ ಮಾಡಿಕೊಂಡಿದೆ. ಅದರಂತೆಯೇ ಸ್ಮೃತಿ ಮಂಧಾನ ಅವರಿಗೆ 3.50 ಕೋಟಿ ರೂಪಾಯಿ ಪಾವತಿ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇವರು ಉತ್ತಮವಾಗಿ ತಂಡ ಮುನ್ನಡೆಸುವುದಲ್ಲದೆ, ಜೊತೆಗೆ ಸ್ಫೋಟಕ ಬ್ಯಾಟಿಂಗ್ ಸಹ ಮಾಡಲಿದ್ದಾರೆ.
ಎಲ್ಲಿಸ್ ಪೆರ್ರಿ: ಆರ್‌ಸಿಬಿ ತನ್ನ ದ್ವಿತೀಯ ರಿಟೆನ್ಷನ್ ಆಗಿ ಆಸ್ಟ್ರೇಲಿಯನ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ಆಯ್ಕೆ ಮಾಡಿದೆ. ಎಲ್ಲಿಸ್ ಪೆರ್ರಿಗೆ ಆರ್‌ಸಿಬಿ ಫ್ರಾಂಚೈಸಿ 2.5 ಕೋಟಿ ರೂಪಾಯಿ ಪಾವತಿ ಮಾಡಲಿದೆ. ಇವರು ಸಹ ಸ್ಫೋಟಕ ಬ್ಯಾಟಿಂಗ್, ಬೌಲಿಂಗ್ ಮಾಡಿ ಎದುರಾಳಿಗಳಿಗೆ ನಡುಕ ಹುಟ್ಟಿಸುವುದರಲ್ಲಿ ಎತ್ತಿದ ಕೈ ಅಂತಲೇ ಹೇಳಬಹುದು. ಅಷ್ಟೇ ಉತ್ತಮವಾಗಿ ಫೀಲ್ಡಿಂಗ್ ಕೂಡ ಮಾಡಲಿದ್ದಾರೆ.
ರಿಚಾ ಘೋಷ್: ಆರ್‌ಸಿಬಿ ಮೂರನೇ ರಿಟೈನ್ ಆಗಿ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಆಯ್ಕೆ ಆಗಿದ್ದಾರೆ. ಕಳೆದ ಮೂರು ಆವೃತ್ತಿಗಳಿಂದ ಆರ್‌ಸಿಬಿ ಪರ ಕಣಕ್ಕಿಳಿಯುತ್ತಿರುವ ರಿಚಾ ಘೋಷ್ಗೆ ಆರ್‌ಸಿಬಿ 1.75 ಕೋಟಿ ರೂಪಾಯಿ ಪಾವತಿ ಮಾಡಲಿದೆ. ಇವರು ಅಬ್ಬರದ ಬ್ಯಾಟಿಂಗ್ ಮಾಡುವುದಲ್ಲದೆ, ಕೀಪಿಂಗ್ ಕೂಡ ಅಷ್ಟೇ ಚೆನ್ನಾಗಿ ಮಾಡುತ್ತಾ ಬಂದಿದ್ದಾರೆ.
ಶ್ರೇಯಾಂಕಾ ಪಾಟೀಲ್: ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರನ್ನು ಕೂಡ ಆರ್‌ಸಿಬಿ ನಾಲ್ಕನೇ ಆಟಗಾರ್ತಿಯಾಗಿ ರಿಟೈನ್ ಮಾಡಿಕೊಂಡಿದೆ. ಶ್ರೇಯಾಂಕಾಗೆ 1 ಕೋಟಿ ರೂಪಾಯಿ ಪಾವತಿ ಮಾಡಲಿದೆ. ಇವರು ಆಲ್‌ರೌಂಡ್ ಆಗಿದ್ದು, ಕಳೆದ ಸೀಸನ್‌ಗಳಲ್ಲಿ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸಿದವರಾಗಿದ್ದಾರೆ.












Click it and Unblock the Notifications