ಡಬ್ಲ್ಯೂಪಿಎಲ್‌ನಲ್ಲಿ ಮಿಂಚಿದ ಆರ್‌ಸಿಬಿ ಗೌತಮಿ ನಾಯಕ್‌ಗೆ ಹಾರ್ದಿಕ್ ಪಾಂಡ್ಯ, ಸ್ಮೃತಿ ಮಂಧಾನ ವಿಶೇಷ ಸಂದೇಶ
WPL 2026 RCB Gautami Naik: ಗುಜರಾತ್ ಜೈಂಟ್ ವಿರುದ್ಧ ಡಬ್ಲ್ಯೂಪಿಎಲ್‌ನಲ್ಲಿ ಚೊಚ್ಚಲ ಅರ್ಧ ಶತಕ ಸಿಡಿಸಿದ ಆರ್‌ಸಿಬಿ ಗೌತಮಿ ನಾಯಕ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಹಾಗೆಯೇ ಟೀಮ್ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯ ಹಾಗೂ ಸ್ಮೃತಿ ಮಂಧಾನ ವಿಶೇಷ ಸಂದೇಶ ರವಾನಿಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗೌತಮಿ ನಾಯಕ್ ಅವರು ಗುಜರಾತ್ ತಂಡದ ವಿರುದ್ಧ ಚೊಚ್ಚಲ ಅರ್ಧ ಶತಕ ಸಿಡಿಸಿ ಆರ್‌ಸಿಬಿ ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಪಾತ್ರವಾಹಿಸಿದರು. ಇದೀಗ ಅವರ ಆಟಕ್ಕೆ ಮನಸೋತ ಕ್ರಿಕೆಟ್ ದಿಗ್ಗಜರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಆರ್‌ಸಿಬಿ ತಂಡದ ಸ್ಮೃತಿ ಮಂಧಾನ ಹಾಗೂ ಮುಂಬೈ ಇಂಡಿಯನ್ಸ್ ಪುರುಷರ ತಂಡದ ಹಾರ್ದಿಕ್ ಪಾಂಡ್ಯ ಅವರು ವಿಶೇಷ ಸಂದೇಶ ಕಳುಹಿಸಿದ್ದಾರೆ.

ಪ್ಲೇ ಆಫ್‌ಗೆ ಅರ್ಹತೆ ಪಡೆದ ಆರ್‌ಸಿಬಿ: ಗೌತಮಿ ನಾಯಕ್ ಅವರ ವಿಡಿಯೊ ಹಂಚಿಕೊಳ್ಳುವ ಮೂಲಕ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಗೌತಮಿ ನಾಯಕ್ ಸಿಡಿಸಿದ ಚೊಚ್ಚಲ ಅರ್ಧಶತಕವೇ ಆರ್‌ಸಿಬಿ ಗೆಲುವಿಗೆ ಪ್ರಮುಖ ಕಾರಣವಾಯಿತು. ಹೀಗೆ ಗುಜರಾತ್ ತಂಡವನ್ನು ಮಣಿಸಿ ಬೆಂಗಳೂರು ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು.
ಸೋಮವಾರ ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿತು. ಗೌತಮಿ 55 ಎಸೆತಗಳಲ್ಲಿ 73 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ಇವರು ಕಲೆಹಾಕಿದ ರನ್‌ಗಳ ನೆರವಿನಿಂದಲೇ ಆರ್‌ಸಿಬಿ ಮಹಿಳಾ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 61 ರನ್‌ಗಳ ಗೆಲುವು ಸಾಧಿಸಿತು. ಈ ಋತುವಿನಲ್ಲಿ ಇದು ಆರ್‌ಸಿಬಿಯ ಸತತ ಐದನೇ ಗೆಲುವಾಗಿದೆ. ಇನ್ನೂ ಗೆಲುವಿನ ಮೂಲಕ ಸ್ಮೃತಿ ಮಂಧಾನಾ ಪಡೆ ಪ್ಲೇ ಆಫ್ಸ್ ಪ್ರವೇಶಿಸಿತು.
ಆರ್‌ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಗೌತಮಿ ನಾಯಕ್ ಅವರಿಗೆ ಮುಂಬೈ ಇಂಡಿಯನ್ಸ್ ಪುರುಷ ತಂಡದ ಹಾರ್ದಿಕ್ ಪಾಂಡ್ಯ ವಿಶೇಷ ಸಂದೇಶ ಕಳುಹಿಸಿದ್ದಾರೆ. ನನಗೆ ಸ್ಪೂರ್ತಿ ಎಂದು ಹೇಳಿದ ಬೆನ್ನಲ್ಲೆ ಟೀಮ್ ಇಂಡಿಯಾ ಆಲ್‌ರೌಂಡರ್ ವಿಡಿಯೊ ಮೂಲಕ ಆರ್‌ಸಿಬಿ ಗೌತಮಿ ನಾಯಕ್ ಅವರಿಗೆ ವಿಶೇಷ ಸಂದೇಶ ರವಾನಿಸಿದರು.
ಹಾರ್ದಿಕ್ ಪಾಂಡ್ ಹೇಳಿದ್ದೇನು?: "ಹಾಯ್ ಗೌತಮಿ, ನಾನು ಹಾರ್ದಿಕ್.. ನಾನು ನಿಮ್ಮ ಕ್ರಿಕೆಟ್‌ಗೆ ಸ್ಪೂರ್ತಿ ಎಂದು ಈಗಷ್ಟೇ ತಿಳಿದುಕೊಂಡೆ. ಮೊದಲನೆಯದಾಗಿ, ಇಷ್ಟೊಂದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ನಿಮ್ಮ ಅರ್ಧಶತಕಕ್ಕೆ ನನ್ನ ಕಡೆಯಿಂದ ಶುಭಾಶಯಗಳು. ಆಟವನ್ನು ಪ್ರೀತಿಸಿ, ಆನಂದಿಸಿ," ಎಂದು ಶುಭ ಹಾರೈಸಿದದ್ದಾರೆ.
ಸ್ಮೃತಿ ಮಂಧಾನಾ ಹೇಳಿದ್ದೇನು?: ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಾ ಕೂಡ ಗೌತಮಿ ಆಟವನ್ನು ಪ್ರಶಂಸಿದ್ದಾರೆ. ತಂಡದ ಒತ್ತಡದ ಪರಿಸ್ಥಿತಿಯಲ್ಲಿ 55 ಎಸೆತಗಳಲ್ಲಿ 73 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಗೌತಮಿ ನಾಯ್ಕ್ ಅವರನ್ನು ಮನದಾಳದಿಂದ ಪ್ರಶಂಸಿಸಿದರು. ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 61 ರನ್‌ಗಳ ಭರ್ಜರಿ ಜಯ ಸಾಧಿಸಿತು ಎಂದು ಹೇಳಿದ್ದಾರೆ.
"ನಮ್ಮ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭವಾದ ಪರಿಸ್ಥಿತಿಯನ್ನು ಗಮನಿಸಿದರೆ, 180ರ ಸಮೀಪದತ್ತ ಸಾಗಿದ್ದೇ ಅತ್ಯುತ್ತಮ ಸಾಧನೆ. ಗೌತಮಿ ಅವರು ಅದ್ಭತವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿ ತಂಡಕ್ಕೆ ನೇರವಾದರು. ಅವರ ಬ್ಯಾಟಿಂಗ್ ಶೈಲಿ ನನಗೆ ತುಂಬಾ ಇಷ್ಟವಾಯಿತು. ದೇಶೀಯ ಕ್ರಿಕೆಟ್‌ನಿಂದ ಬಂದಿದ್ದರೂ ಸಹ ಉತ್ತಮವಾಗಿ ಆಟ ಆಡಿದರು. ತಂಡ 10 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಮಯದಲ್ಲಿ ಬ್ಯಾಟಿಂಗ್‌ಗೆ ಬಂದು, ಅವರು ಆಡಿದ ರೀತಿಯೇ ಅಸಾಧಾರಣವಾಗಿತ್ತು," ಎಂದು ಮಂಧಾನಾ ಹಾಡಿ ಹೊಗಳಿದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ: ಈ ಋತುವಿನಲ್ಲಿ ಇದುವರೆಗೆ ಆಡಿದ ಐದು ಪಂದ್ಯಗಳಲ್ಲೂ ಆರ್‌ಸಿಬಿ ಗೆಲವು ಸಾಧಿಸಿ ಹೊಸ ಇತಿಹಾಸ ಬರೆದಿದದೆ. ಸೋಮವಾರ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಲ್ಲಿ ಸಂಕಷ್ಟದಲ್ಲಿತ್ತು. ಈ ವೇಳೆ ಗೌತಮಿ ಅವರು ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅದ್ಭುತ ಇನಿಂಗ್ಸ್ ಆಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್‌ಗಳನ್ನು ಕಲೆಹಾಕಿತು. ಗೌತಮಿ ನಾಯಕ್ ಸಿಡಿಸಿದ ಚೊಚ್ಚಲ ಶತಕದಿಂದ ಇಷ್ಟೊಂದು ರನ್‌ಗಳು ಬರಲು ಕಾರಣವಾಯಿತು. ಇನ್ನೂ ಬಳಿಕ ಬ್ಯಾಟ್ ಬೀಸಿದ ಗುಜರಾತ್ ಜೈಂಟ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೀ 117 ರನ್ ಕಲೆಹಾಕುವ ಮೂಲಕ ಬೆಂಗಳೂರು ತಂಡಕ್ಕೆ ಶರಣಾಯಿತು.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ












Click it and Unblock the Notifications