WPL 2025 Schedule: ಈ ನಾಲ್ಕು ಸ್ಥಳಗಳಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಆಯೋಜನೆ

ಮಹಿಳಾ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಕಳೆದ ಬಾರಿ ಎರಡು ನಗರಗಳಲ್ಲಿ ನಡೆದಿದ್ದ ಪಂದ್ಯಾವಳಿ ಈ ಬಾರಿ ನಾಲ್ಕು ನಗರಗಳಲ್ಲಿ ಆಯೋಜನೆ ಮಾಡಲಾಗಿದೆ. 22 ಪಂದ್ಯಗಳಿಗೆ ನಾಲ್ಕು ನಗರಗಳು ಆತಿಥ್ಯ ವಹಿಸಲಿವೆ. ಪಂದ್ಯಾವಳಿ ಫೆಬ್ರವರಿ 14 ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 15ರಂದು ನಡೆಯಲಿದೆ.

ಬಿಸಿಸಿಐ ಗುರುವಾರ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಡೋದರಾ, ಬೆಂಗಳೂರು, ಲಕ್ನೋ ಮತ್ತು ಮುಂಬೈನಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ದೆಹಲಿ ಮತ್ತು ಬೆಂಗಳೂರಿನಲ್ಲಿ ಪಂದ್ಯಾವಳಿ ನಡೆದಿತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಶಸ್ತಿ ಗೆದ್ದುಕೊಂಡಿತ್ತು.

Wpl 2025 schedule bcci announces 4 city tournament final in mumbai

ಆರ್ ಸಿಬಿ - ಯುಪಿ ವಾರಿಯರ್ಸ್ ಮುಖಾಮುಖಿ

ಫೆಬ್ರವರಿ 14 ರಂದು ನಡೆಯುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗಲಿವೆ. ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿವೆ. ಮೊದಲ ಹಂತದಲ್ಲಿ ಪಂದ್ಯಗಳು ವಡೋದರಾದಲ್ಲಿ ನಡೆಯಲಿದ್ದು, ಬಳಿಕ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ನಾಲ್ಕು ಪಂದ್ಯಗಳು ಲಕ್ನೋದಲ್ಲಿ ನಡೆಯಲಿದ್ದು, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.

ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ದಿನಾಂಕ ತಂಡಗಳು ಸಮಯ ಸ್ಥಳ
ಫೆಬ್ರವರಿ 14 ಆರ್ ಸಿಬಿ Vs ಯುಪಿ ವಾರಿಯರ್ಸ್ ಸಂಜೆ 7.30 ವಡೋದರಾ
ಫೆಬ್ರವರಿ 15 ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7.30 ವಡೋದರಾ
ಫೆಬ್ರವರಿ 16 ಗುಜರಾತ್ ಜೈಂಟ್ಸ್ Vs ಯುಪಿ ವಾರಿಯರ್ಸ್ ಸಂಜೆ 7.30 ವಡೋದರಾ
ಫೆಬ್ರವರಿ 17 ಡೆಲ್ಲಿ ಕ್ಯಾಪಿಟಲ್ಸ್ Vs ಆರ್ ಸಿಬಿ ಸಂಜೆ 7.30 ವಡೋದರಾ
ಫೆಬ್ರವರಿ 18 ಗುಜರಾತ್ ಜೈಂಟ್ಸ್ Vs ಮುಂಬೈ ಇಂಡಿಯನ್ಸ್ ಸಂಜೆ 7.30 ವಡೋದರಾ
ಫೆಬ್ರವರಿ 19 ಯುಪಿ ವಾರಿಯರ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7.30 ವಡೋದರಾ
ಫೆಬ್ರವರಿ 21 ಆರ್ ಸಿಬಿ Vs ಮುಂಬೈ ಇಂಡಿಯನ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 22 ಡೆಲ್ಲಿ ಕ್ಯಾಪಿಟಲ್ಸ್ Vs ಯುಪಿ ವಾರಿಯರ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 24 ಆರ್ ಸಿಬಿ Vs ಯುಪಿ ವಾರಿಯರ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 25 ಡೆಲ್ಲಿ ಕ್ಯಾಪಿಟಲ್ಸ್ Vs ಗುಜರಾತ್ ಜೈಂಟ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 26 ಮುಂಬೈ ಇಂಡಿಯನ್ಸ್ Vs ಯುಪಿ ವಾರಿಯರ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 27 ಆರ್ ಸಿಬಿ Vs ಗುಜರಾತ್ ಜೈಂಟ್ಸ್ ಸಂಜೆ 7.30 ಬೆಂಗಳೂರು
ಫೆಬ್ರವರಿ 28 ಡೆಲ್ಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್ ಸಂಜೆ 7.30 ಬೆಂಗಳೂರು
ಮಾರ್ಚ್ 1 ಆರ್ ಸಿಬಿ Vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7.30 ಬೆಂಗಳೂರು
ಮಾರ್ಚ್ 3 ಯುಪಿ ವಾರಿಯರ್ಸ್ Vs ಗುಜರಾತ್ ಜೈಂಟ್ಸ್ ಸಂಜೆ 7.30 ಲಕ್ನೋ
ಮಾರ್ಚ್ 6 ಯುಪಿ ವಾರಿಯರ್ಸ್ Vs ಮುಂಬೈ ಇಂಡಿಯನ್ಸ್ ಸಂಜೆ 7.30 ಲಕ್ನೋ
ಮಾರ್ಚ್ 7 ಗುಜರಾತ್ ಜೈಂಟ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ ಸಂಜೆ 7.30 ಲಕ್ನೋ
ಮಾರ್ಚ್ 8 ಯುಪಿ ವಾರಿಯರ್ಸ್ Vs ಆರ್ ಸಿಬಿ ಸಂಜೆ 7.30 ಲಕ್ನೋ
ಮಾರ್ಚ್ 10 ಮುಂಬೈ ಇಂಡಿಯನ್ಸ್ Vs ಗುಜರಾತ್ ಜೈಂಟ್ಸ್ ಸಂಜೆ 7.30 ಲಕ್ನೋ
ಮಾರ್ಚ್ 11 ಮುಂಬೈ ಇಂಡಿಯನ್ಸ್ Vs ಆರ್ ಸಿಬಿ ಸಂಜೆ 7.30 ಲಕ್ನೋ
ಮಾರ್ಚ್ 13 ಎಲಿಮಿನೇಟರ್ ಸಂಜೆ 7.30 ಮುಂಬೈ
ಮಾರ್ಚ್ 15 ‍ಫೈನಲ್ ಸಂಜೆ 7.30 ಮುಂಬೈ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+