WPL 2024: ಅಬ್ಬಾ ಎಂತಾ ಫೀಲ್ಡಿಂಗ್‌! ಎಬಿ ಡಿವಿಲಿಯರ್ಸ್ ನೆನಪಿಸಿದ ಆರ್‌ಸಿಬಿ ಹುಡುಗಿ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಜಾರ್ಜಿಯಾ ವೇರ್‌ಹ್ಯಾಮ್ ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದರು. ಬೌಂಡರಿ ಲೈನ್‌ನಲ್ಲಿ ನಿಂತಿದ್ದ ವೇರ್‌ಹ್ಯಾಮ್ ಅವರು ಅದ್ಭುತ ಫೀಲ್ಡಿಂಗ್ ಮೂಲಕ ಎಬಿ ಡಿವಿಲಿಯರ್ಸ್ ಅವರನ್ನು ನೆನಪಿಸಿದರು. ಅವರ ಅದ್ಭುತ ಫೀಲ್ಡಿಂಗ್‌ನಿಂದ ಸಿಕ್ಸರ್ ತಡೆದರು.

ಫೆಬ್ರವರಿ 29, ಗುರುವಾರದಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 11ನೇ ಓವರ್‌ನಲ್ಲಿ ನಡಿನ್ ಡಿ ಕ್ಲರ್ಕ್ ಅವರ ಫುಲ್ ಲೆಂಗ್ತ್ ಎಸೆತವನ್ನು ಲೆಗ್ ಸೈಡ್ ನಲ್ಲಿ ಶಫಾಲಿ ವರ್ಮಾ ಬಲವಾಗಿ ಹೊಡೆದರು. ಚೆಂಡು ಸಿಕ್ಸರ್‌ಗೆ ಹೋಗುತ್ತಿದೆ ಎಂದು ತೋರುತ್ತಿರುವಾಗ, ಜಿಂಕೆಯಂತೆ ಓಡಿಬಂದ ವೇರ್‌ಹ್ಯಾಮ್ ಅದ್ಭುತ ಜಿಗಿತದೊಂದಿಗೆ ಚೆಂಡನ್ನು ಮತ್ತೆ ಬೌಂಡರಿ ಗೆರೆಯೊಳಗೆ ತಳ್ಳಿದರು.

WPL 2024: RCBs Georgia Wareham stuns with sensational performance Remebers ABD

ವೇರ್‌ಹ್ಯಾಮ್ ಅವರ ಫೀಲ್ಡಿಂಗ್ ನೋಡಿ ಕ್ರಿಕೆಟ್ ಜಗತ್ತು ದಂಗಾಗಿದೆ. ಮಹಿಳಾ ಕ್ರಿಕೆಟ್‌ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಇಂತಹ ಪ್ರಯತ್ನಗಳು ಸಹಕಾರಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಆರ್ ಸಿಬಿ ಟ್ವೀಟ್ ಮಾಡಿದ್ದು, ಈ ಹಾಡನ್ನು ಈ ಮೊದಲೇ ಯಾರೋ ಬರೆದಿದ್ದರು ಎಂದು ಎಬಿ ಡಿವಿಲಿಯರ್ಸ್ ಅಂದು ಮಾಡಿದ್ದ ಫೀಲ್ಡಿಂಗ್ ಚಿತ್ರವನ್ನು ಹಂಚಿಕೊಂಡಿದೆ.

ಪಂದ್ಯ ಸೋತ ಆರ್ ಸಿಬಿ

ವೇರ್‌ಹ್ಯಾಮ್ ಅವರ ಅದ್ಭುತ ಫೀಲ್ಡಿಂಗ್ ಹೊರತುಪಡಿಸಿದರೆ ಉಳಿದ ಆಟಗಾರರಿಂದ ಉತ್ತಮ ಫೀಲ್ಡಿಂಗ್ ಪ್ರದರ್ಶನ ಬರಲಿಲ್ಲ. ಮಹಿಳಾ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಆರ್ ಸಿಬಿ ಮೊದಲ ಸೋಲು ಕಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಗುರುವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ 25 ರನ್‌ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್‌ಗಳನ್ನು ಕಲೆಹಾಕಿತು. ಶೆಫಾಲಿ ವರ್ಮಾ ಅವರ ಕ್ಯಾಚ್ ಬಿಟ್ಟ ಆರ್ ಸಿಬಿ ದೊಡ್ಡ ತಪ್ಪು ಮಾಡಿತು, ಬಳಿಕ ಅವರು 31 ಎಸೆತಗಳಲ್ಲಿ 50 ರನ್ ಗಳಿಸಿ ಆರ್ ಸಿಬಿ ತಂಡಕ್ಕೆ ತಲೆನೋವಾದರು. ಅಲೀಸ್ ಕ್ಯಾಪ್ಸಿ 46 ರನ್, ಮಾರಿಝನ್ ಕಪ್ 32, ಜೆಸ್ ಜೊನಾಸೆನ್ 36 ರನ್ ಗಳಿಸಿ ಮಿಂಚಿದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮಂಧಾನ 43 ಎಸೆತಗಳಲ್ಲಿ 74 ರನ್ ಗಳಿಸಿ ಮಿಂಚಿದರು. ಆದರೆ ಉಳಿದ ಬ್ಯಾಟರ್ ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+