World Cup 2023 : ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ಭಾರತದ ಪಂದ್ಯಗಳ ವಿವರ ಇಲ್ಲಿದೆ

ಐಸಿಸಿ ವಿಶ್ವಕಪ್ ಪಂದ್ಯಾವಳಿ ಸಮೀಪಿಸುತ್ತಿರುವಾಗ, ಭಾಗವಹಿಸುವ ಎಲ್ಲಾ 10 ತಂಡಗಳಿಗೆ ಅಧಿಕೃತ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪಂದ್ಯಗಳು ಗುವಾಹಟಿ, ಹೈದರಾಬಾದ್ ಮತ್ತು ತಿರುವನಂತಪುರಂನಲ್ಲಿ ನಡೆಯಲಿವೆ.

ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 3 ರವರೆಗೆ ಅಭ್ಯಾಸ ಪಂದ್ಯಗಳು ನಡೆಯಲಿದೆ. ಅಭಿಮಾನಿಗಳು ಆಗಸ್ಟ್ 25 ರಿಂದ ಅಭ್ಯಾಸ ಪಂದ್ಯಗಳಿಗೆ ಟಿಕೆಟ್ ಖರೀದಿಸಬಹುದು. ಆತಿಥೇಯ ಭಾರತ ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 3 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ.

 World Cup 2023 Warmup Schedule Released: IND vs ENG on Sept 30, Full Fixtures Inside!

ಹಿಂದಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಳಂತೆ, ಅಭ್ಯಾಸ ಪಂದ್ಯಗಳು ಪ್ರತಿ ತಂಡಕ್ಕೆ 50 ಓವರ್‌ಗಳಾಗಿರುತ್ತದೆ, ಆದರೆ ಈ ಪಂದ್ಯಗಳಲ್ಲಿ ತಂಡಗಳು ತಮ್ಮ 15 ಆಟಗಾರರ ತಂಡದ ಎಲ್ಲಾ ಸದಸ್ಯರನ್ನು ಕಣಕ್ಕಿಳಿಸಲು ಅನುಮತಿಸುವುದರಿಂದ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಸ್ಥಾನಮಾನವನ್ನು ಹೊಂದಿರುವುದಿಲ್ಲ.

ಎಲ್ಲಾ ತಂಡಗಳಿಗೆ 2 ಅಭ್ಯಾಸ ಪಂದ್ಯಗಳು

ಅಭ್ಯಾಸದ ಅವಧಿಯಲ್ಲಿ ಭಾಗವಹಿಸುವ 10 ತಂಡಗಳಲ್ಲಿ ಪ್ರತಿಯೊಂದೂ 2 ಅಭ್ಯಾಸ ಪಂದ್ಯಗಳನ್ನು ಆಡುತ್ತದೆ. ಆತಿಥೇಯ ಭಾರತ ಸೆಪ್ಟೆಂಬರ್ 30 ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಎದುರಿಸಲಿದೆ. ಎರಡನೇ ಪಂದ್ಯವು ಅಕ್ಟೋಬರ್ 3 ರಂದು ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆಯಲಿದೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5 ರಂದು ಪ್ರಾರಂಭವಾಗುತ್ತದೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಹಮದಾಬಾದ್‌ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸುತ್ತದೆ. ನವೆಂಬರ್ 19ರಂದು ಫೈನಲ್ ಪಂದ್ಯ ಕೂಡ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಭ್ಯಾಸ ಪಂದ್ಯಗಳ ವೇಳಾಪಟ್ಟಿ

ಶುಕ್ರವಾರ 29, ಸೆಪ್ಟೆಂಬರ್

ಬಾಂಗ್ಲಾದೇಶ Vs ಶ್ರೀಲಂಕಾ, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ.
ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ, ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ.
ನ್ಯೂಜಿಲೆಂಡ್ Vs ಪಾಕಿಸ್ತಾನ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್.

ಸೆಪ್ಟೆಂಬರ್ 30, ಶನಿವಾರ

ಭಾರತ Vs ಇಂಗ್ಲೆಂಡ್, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ.
ಆಸ್ಟ್ರೇಲಿಯಾ Vs ನೆದರ್ಲ್ಯಾಂಡ್ಸ್, ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ.

ಅಕ್ಟೋಬರ್ 2, ಸೋಮವಾರ

ಇಂಗ್ಲೆಂಡ್ Vs ಬಾಂಗ್ಲಾದೇಶ, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ
ನ್ಯೂಜಿಲೆಂಡ್ Vs ದಕ್ಷಿಣ ಆಫ್ರಿಕಾ, ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ

ಅಕ್ಟೋಬರ್ 3 ಮಂಗಳವಾರ

ಅಫ್ಘಾನಿಸ್ತಾನ Vs ಶ್ರೀಲಂಕಾ, ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ, ಗುವಾಹಟಿ.
ಭಾರತ Vs ನೆದರ್ಲ್ಯಾಂಡ್ಸ್, ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರಂ.
ಪಾಕಿಸ್ತಾನ Vs ಆಸ್ಟ್ರೇಲಿಯಾ, ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+