World Cup 2023: ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಕುರಿತು ಪಿಸಿಬಿಗೆ ಖಾತರಿ ಕೇಳಿದ ಐಸಿಸಿ
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳಿಗೆ ಹೈಬ್ರಿಡ್ ಮಾದರಿಯನ್ನು ಜಾರಿಗೆ ತರಲು ಒತ್ತಾಯಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಗ್ಯಾರಂಟಿ ಪಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಮತ್ತು ಸಿಇಒ ಲಾಹೋರ್‌ಗೆ ಬಂದಿಳಿದಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡ ಭಾಗವಹಿಸುವ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಕೆಲವು ಭರವಸೆಗಳನ್ನು ಪಡೆಯಲು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತು ಸಿಇಒ ಜೆಫ್ ಅಲ್ಲಾರ್ಡಿಸ್ ಲಾಹೋರ್‌ಗೆ ಬಂದಿದ್ದಾರೆ ಎಂದು ಪಿಟಿಐ ತಿಳಿಸಿದೆ.

ಇದಕ್ಕೂ ಮುನ್ನ ಏಷ್ಯಾಕಪ್ ಟೂರ್ನಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳದಿದ್ದರೆ, ಭಾರತದಲ್ಲಿ ನಡೆಯುವ ವಿಶ್ವಕಪ್‌ಗೆ ಪಾಕಿಸ್ತಾನ ತಂಡವು ಪ್ರಯಾಣಿಸುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಸ್ಪಷ್ಟಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಕ್ರಿಕೆಟ್ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿರುವ ನಜಮ್ ಸೇಥಿ ಅವರು ಏಕದಿನ ವಿಶ್ವಕಪ್‌ಗೆ ಹೈಬ್ರಿಡ್ ಮಾದರಿಯನ್ನು ಮುಂದಿಡುವ ಬಗ್ಗೆ ಐಸಿಸಿ ಮತ್ತು ವಿಶ್ವಕಪ್ ಆತಿಥೇಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುನ್ನೆಚ್ಚರಿಕೆ ಭಾಗವಾಗಿ ದೃಢಪಡಿಸಿಕೊಳ್ಳುತ್ತಿದೆ.
"ಐಸಿಸಿ ಏಕದಿನ ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಏಷ್ಯಾ ಕಪ್‌ಗೆ ಹೈಬ್ರಿಡ್ ಮಾದರಿಯನ್ನು ನಜಮ್ ಸೇಥಿ ಸೂಚಿಸಿದ್ದರೂ, ಒಮ್ಮೆ ಏಷ್ಯಾಕಪ್‌ನಂತಹ ಪ್ರಾದೇಶಿಕ ಟೂರ್ನಿಗೆ ಈ ಮಾದರಿ ಒಪ್ಪಿಕೊಂಡರೆ, ಪಾಕಿಸ್ತಾನಕ್ಕೆ ಬಂದಾಗ ವಿಶ್ವಕಪ್‌ಗೂ ತಟಸ್ಥ ಸ್ಥಳದಲ್ಲಿ ಆಡಿಸುವುದನ್ನು ಜಾರಿಗೆ ತರಲು ಐಸಿಸಿಯನ್ನು ಪಿಸಿಬಿ ಕೇಳಬಹುದು," ಎಂಬ ಆತಂಕ ಉಳಿದಿದೆ.

ಪಾಕಿಸ್ತಾನ ಸರ್ಕಾರವು ಅನುಮತಿ ನೀಡದಿದ್ದರೆ ಅಥವಾ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಭದ್ರತಾ ಆತಂಕ ಹೊಂದಿದ್ದರೆ, ಪಾಕಿಸ್ತಾನ ತಂಡದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಐಸಿಸಿಗೆ ಪಿಸಿಬಿ ಕೇಳಬಹುದು ಎಂದು ನಜಮ್ ಸೇಥಿ ಈಗಾಗಲೇ ಸೂಚಿಸಿದ್ದಾರೆ.
"ಐಸಿಸಿ ಅಥವಾ ಬಿಸಿಸಿಐ ಇಂತಹ ಪರಿಸ್ಥಿತಿ ಉದ್ಭವಿಸುವುದನ್ನು ಬಯಸುವುದಿಲ್ಲ. ಏಕೆಂದರೆ ಭಾರತದಲ್ಲಿನ ಪಂದ್ಯಗಳಲ್ಲಿ ಪಾಕಿಸ್ತಾನದ ನಿರಾತಂಕವಾಗಿ ಭಾಗವಹಿಸುವಿಕೆಯು ಭಾರತ-ಪಾಕಿಸ್ತಾನ ಪಂದ್ಯಗಳ ಯಶಸ್ಸನ್ನು ಮತ್ತು ಪಂದ್ಯಾವಳಿಯ ಯಶಸ್ಸನ್ನು ಖಾತರಿಪಡಿಸುತ್ತದೆ," ಎಂದು ಐಸಿಸಿ ಮುಖ್ಯಸ್ಥರು ತಿಳಿಸಿದ್ದಾರೆ.
ಏಷ್ಯಾಕಪ್‌ಗಾಗಿ ತಟಸ್ಥ ಸ್ಥಳದಲ್ಲಿ ಆಡಿಸುವ ಬಗೆ (ಹೈಬ್ರಿಡ್ ಮಾದರಿ)ಯನ್ನು ಒಪ್ಪಿಕೊಳ್ಳಲು ಮತ್ತು ಪಾಕಿಸ್ತಾನದಲ್ಲಿ ಮೂರು ಅಥವಾ ನಾಲ್ಕು ಪಂದ್ಯಗಳನ್ನು ಮತ್ತು ಯುಎಇ ಅಥವಾ ಶ್ರೀಲಂಕಾದಲ್ಲಿ ಉಳಿದ ಪಂದ್ಯಗಳನ್ನು ಆಡಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಒಪ್ಪದಿರುವುದು ಪ್ರಾಥಮಿಕ ಕಾರಣವಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಏಷ್ಯಾ ಕಪ್‌ನ ಆತಿಥೇಯರಾಗಿದ್ದು, ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಒಂದು ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ, ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಏಷ್ಯಾಕಪ್‌ನ ಪಂದ್ಯಗಳನ್ನು ಪಾಕಿಸ್ತಾನ ಆಯೋಜಿಸದಿದ್ದರೆ ಅದು ಮುಂಬರುವ ಏಕದಿನ ವಿಶ್ವಕಪ್‌ನ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಸುಳಿವು ನೀಡಿದ್ದಾರೆ.
ಐಸಿಸಿ ಅಧಿಕಾರಿಗಳು ಪಿಸಿಬಿ ಮತ್ತು ಬಿಸಿಸಿಐ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೆ ಸಂಬಂಧಿಸಿದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಪಿಸಿಬಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications