4,4,4,4,4..6,6,6.. ಭಾರತಕ್ಕೆ ಏಷ್ಯಾಕಪ್ ಟ್ರೋಫಿ ಗೆದ್ದುಕೊಟ್ಟ RCB ಕ್ವೀನ್.. ಸ್ಮೃತಿ, ಶಫಾಲಿ, ಚರಣಿ, ದೀಪ್ತಿ ಮಿಂಚಿಂಗ್

Women's T20 Asia Cup 2026: ದುಬೈನಲ್ಲಿ ಭಾನುವಾರ (ಸೆಪ್ಟೆಂಬರ್ 13) ನಡೆದ ಮಹಿಳಾ ಏಷ್ಯಕಪ್ 2026ರ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾವು ಶ್ರೀಲಂಕಾ ವಿರುದ್ಧ 72 ರನ್ ಗಳ ಭರ್ಜರಿ ಜಯ ದಾಖಲಿಸಿ ಚಾಂಪಿಯಾನ್ ಪಟ್ಟ ಅಲಂಕರಿಸಿತು. ಈ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು ಸೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ಹಾಗೂ ಶ್ರೀ ಚರಣಿ, ದೀಪ್ತಿ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಭಾರತವು ಉಪನಾಯಕಿ ಸೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 183 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಬಳಿಕ ಬ್ಯಾಟ್‌ ಬೀಸಿದ ಶ್ರೀಲಂಕಾ ಬರೀ 111 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಹೀನಾಯ ಸೋಲನುಭವಿಸಿದ್ದು, ಭಾರತ ಟ್ರೋಫಿ ಎತ್ತಿಹಿಡಿಯಿತು.

Women s T20 Asia Cup 2026 India Beat Sri Lanka by 72 Runs Win Title in Dubai cricket Stadium

ಸ್ಮೃತಿ, ಶಫಾಲಿ ವರ್ಮಾ ಸ್ಫೋಟಕ ಬ್ಯಾಟಿಂಗ್

ಇಂಡಿಯಾದ ಓಪನರ್‌ಗಳಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 127 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡ 20 ಓವರ್‌ಗಳಲ್ಲಿ 183/5 ರನ್ ಕಲೆಹಾಕಲು ನೆರವಾದರು. ಶಫಾಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಅಂತಿಮವಾಗಿ 39 ಎಸೆತಗಳಲ್ಲಿ 68 ರನ್ ಗಳಿಸಿದರು. ಇದರಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿವೆ. ಮತ್ತೊಂದೆಡೆ ಮಂಧಾನ 35 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳ ಸಹಿತ 59 ರನ್‌ಗಳನ್ನು ಸಿಡಿಸಿದರು. ಉಳಿದಂತೆ ನಾಯಕಿ ಹರ್ಮನ್‌ಪ್ರೀತ್‌ ಕೌರ್ 14(14), ರಿಚಾ ಘೋಷ್ 17(13), ಜಿ ಕನಲಿನಿ ಅಜೇಯ 15 ರನ್‌ಗಳ ಕೊಡುಗೆ ನೀಡಿದರು.

ಶ್ರೀಲಂಕಾ ಪರ ಯಾರು ಎಷ್ಟು ರನ್ ಸಿಡಿಸಿದರು?

ಬಳಿಕ ಬ್ಯಾಟ್‌ ಬೀಸಿದ ಶ್ರಿಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 36(32), ವಿಶ್ಮಿ ಗುಣರತ್ನೆ 20(22), ನೀಲಾಕ್ಷಿ ಡಿ ಸಿಲ್ವಾ 22(16) ರನ್‌ ಗಳಿಸಿದ್ದು ಬಿಟ್ಟರೆ ಉಳಿದವರು ಒಂದಕಿ ದಾಟಲು ಸಾಧ್ಯವಾಗದೆ ಪರದಾಡಿದರು. ಅಷ್ಟರ ಮಟ್ಟಿಗೆ ಟೀಮ್ ಇಂಡಿಯಾ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.

ಶ್ರೀ ಚರಣಿ, ದೀಪ್ತಿ ಮಾರಕ ಬೌಲಿಂಗ್ ದಾಳಿ

ಶ್ರೀ ಚರಣಿ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರೆ, ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರು. ಉಳಿದಂತೆ ಕ್ರಾಂತಿ ಗೌಡ್, ಶಫಾಲಿ ವರ್ಮಾ ಹಾಗೂ ಪ್ರೇಮಾ ರಾವತ್ ತಲಾ ಒಂದು ವಿಕೆಟ್‌ ಕಿತ್ತರು. ಹೀಗೆ ಟೀಮ್ ಇಂಡಿಯಾವು ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲೂ ಅತ್ಯತ್ತಮ ಪ್ರದರ್ಶನ ನೀಡಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದೇ ವೇಳೆ ಮೈದಾನದಲ್ಲಿ ಹಳೆಯ ಘಟನೆ ಮರುಳಿಸಿದ್ದು, ಇದರಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಭಾರಿ ಮುಖಭಂಗವಾಗಿದೆ.

ಮೊಹ್ಸಿನ್ ನಖ್ವಿಗೆ ಮತ್ತೊಮ್ಮೆ ಭಾರಿ ಮುಖಭಂಗ

2024ರ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿರುವ ಇಂಡಿಯಾ, ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ ಭಾರತ ತಂಡವು ಪಾಕಿಸ್ತಾಣ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ವಿನ್ನರ್ಸ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು.

ಭಾರತ ಹಾಗೂ ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಸಿಸಿಐ ತೆಗೆದುಕೊಂಡ ನಿಲುವಿನ ಕಾರಣದಿಂದಾಗಿ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ವಿನ್ನರ್ಸ್ ಟ್ರೋಫಿ ನಿರಾಕರಿಸಿದ ಘಟನೆ ನಡೆದಿರುವುದು ಇದು ಎರಡನೇ ಬಾರಿ. ಸೆಪ್ಟೆಂಬರ್ 2025ರಲ್ಲಿ ನಡೆದ ಪುರುಷರ ಏಷ್ಯಾಕಪ್ ಫೈನಲ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಆದರೆ ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಪ್ರಶಸ್ತಿ ಪಡೆಯಲು ಟೀಮ್ ಇಂಡಿಯಾ ಆಟಗಾರರು ನಿರಾಕರಿಸಿದ್ದರು. ಇದೀಗ 2026ರಲ್ಲೂ ಕೂಡ ಮಹಿಳಾ ತಂಡವು ಕೂಡ ಅದನ್ನೇ ಮುಂದುವರೆಸಿದ್ದು, ಇದರಿಂದ ನಖ್ವಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ ಆದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+