WPL 2023 Schedule : ಮುಂಬೈ, ಗುಜರಾತ್ ನಡುವೆ ಮೊದಲ ಪಂದ್ಯ

ಮಂಗಳವಾರ ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್‌ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್‌ ಉದ್ಘಾಟನಾ ಪಂದ್ಯದಲ್ಲಿ ಎದುರಾಳಿಗಳು

ಮುಂಬೈ, ಫೆಬ್ರವರಿ 14; ಭಾರತದ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮಾರ್ಚ್ 4ರಂದು ಉದ್ಘಾಟನಾ ಪಂದ್ಯ ನಿಗದಿಯಾಗಿದೆ.

ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ಉದ್ಘಾನಾ ಪಂದ್ಯ ಮಾರ್ಚ್ 4ರಂದು ನಡೆಯಲಿದೆ. ಮಾರ್ಚ್ 4 ರಿಂದ 26ರ ತನಕ ಮಹಿಳಾ ಪ್ರೀಮಿಯರ್ ಲೀಗ್‌ (ಡಬ್ಲ್ಯುಪಿಎಲ್) ನಡೆಯಲಿದೆ.

Womens Premier League 2023 Opening Match Gujarat Giants VS Mumbai Indians

ಮಂಗಳವಾರ ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್‌ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 5 ತಂಡಗಳು ಮಹಿಳಾ ಪ್ರೀಮಿಯರ್ ಲೀಗ್‌ 2023ರಲ್ಲಿ ಪಾಲ್ಗೊಳ್ಳಲಿವೆ. ಒಟ್ಟು 23 ದಿನಗಳ ಕಾಲ ಈ ಪಂದ್ಯಾವಳಿಗಳು ನಡೆಯಲಿವೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 20 ಲೀಗ್ ಪಂದ್ಯಗಳು ಮತ್ತು 2 ಪ್ಲೇ ಆಫ್ ಪಂದ್ಯಗಳಿವೆ. ಮುಂಬೈನಲ್ಲಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಮೃತಿ ಮಂದಾನರನ್ನು ಅತ್ಯಂತ ದುಬಾರಿ ಬೆಲೆ 3.40 ಕೋಟಿ ರೂ.ಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿತ್ತು.

ಯಾವ-ಯಾವ ತಂಡಗಳು; ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪಾಲ್ಗೊಳ್ಳಲಿವೆ.

womens premier league

ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯ 11 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಉಳಿದ ಪಂದ್ಯಗಳು ಉತ್ತರ ಪ್ರದೇಶದಲ್ಲಿ ನಡೆಯಲಿವೆ ಎಂದು ಬಿಸಿಸಿಐ ವೇಳಾಪಟ್ಟಿಯಲ್ಲಿ ಹೇಳಿದೆ.

ಆಟಗಾರರ ಹರಾಜು; ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿಗೆ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಸೋಮವಾರ ಮುಂಬೈನಲ್ಲಿ ನಡೆಯಿತು. ಸ್ಮೃತಿ ಮಂದಾನ ಖರೀದಿ ಮಾಡಲು ಭಾರೀ ಪೈಪೋಟಿ ನಡೆಯಿತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 3.40 ಕೋಟಿ ರೂ.ಗಳಿಗೆ ಅವರನ್ನು ಖರೀದಿ ಮಾಡಿತು. ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರ್ತಿಯಾಗಿದ್ದಾರೆ ಸ್ಮೃತಿ ಮಂದಾನ.

ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್‌ರನ್ನು ಮುಂಬೈ ಇಂಡಿಯನ್ಸ್ ತಂಡ 1.80 ಕೋಟಿ ರೂ.ಗೆ ಖರೀದಿ ಮಾಡಿತು. ಆಲ್‌ರೌಂಡರ್ ದೀಪ್ತಿ ಶರ್ಮಾ 2.60 ಕೋಟಿ ರೂ.ಗಳಿಗೆ ಯುಪಿ ವಾರಿಯರ್ಸ್ ತಂಡದ ಪಾಲಾದರು.

ಮಹಿಳಾ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿಯರು ಮಾತ್ರವಲ್ಲ ವಿದೇಶಿ ಆಟಗಾರ್ತಿಯರು ಸಹ ಪಾಲ್ಗೊಂಡಿದ್ದರು. ಆಸ್ಟ್ರೇಲಿಯಾದ ಆಫ್‌ಸ್ಪಿನ್ ಆಲ್‌ರೌಂಡರ್ ಆಶ್ಲೇ ಗಾರ್ಡ್‌ನರ್‌ ಅನ್ನು 3.20 ಕೋಟಿ ರೂ.ಗಳಿಗೆ ಗುಜರಾತ್‌ ಜೈಂಟ್ಸ್ ಖರೀದಿ ಮಾಡಿತು.

ಆಸ್ಟ್ರೇಲಿಯಾದ ವಿಕೇಟ್ ಕೀಪರ್ ಬೆತ್ ಮೂನೀ ಅವರನ್ನು ಸಹ ಗುಜರಾತ್‌ ಜೈಂಟ್ಸ್ 2 ಕೋಟಿ ರೂ.ಗಳಿಗೆ ಖರೀದಿಸಿತು. ಇಂಗ್ಲೆಡ್‌ನ ಆಲ್‌ರೌಂಡರ್ ಸೋಫಿ ಎಕ್ಲೆಸ್ಟೋನ್ 1.80 ಕೋಟಿ ರೂ.ಗಳಿಗೆ ಯುಪಿ ವಾರಿಯರ್ಸ್‌ ಪಾಲಾದರು.

ಹರಾಜು ಪ್ರಕ್ರಿಯೆಯಲ್ಲಿ 24 ಆಟಗಾರ್ತಿಯರಿಗೆ ತಲಾ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು. ಅದರಲ್ಲಿ ಭಾರತದಲ್ಲಿ 14 ಮತ್ತು ವಿದೇಶದ 10 ಆಟಗಾರ್ತಿಯರಿದ್ದರು. ಪ್ರತಿ ತಂಡಕ್ಕೆ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರ್ತಿಯರನ್ನು ಹೊಂದಲು ಅವಕಾಶವಿತ್ತು.

ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ್ತಿಯರು

* ನತಾಲಿಯಾ ಸ್ಕಿವರ್. ಆಲ್‌ ರೌಂಡರ್ ಇಂಗ್ಲೆಡ್. ಮುಂಬೈ ಇಂಡಿಯನ್ಸ್ 3.20 ಕೋಟಿ.

* ಜೆಮಿಮಾ ರಾಡ್ರಿಗಸ್. ಬ್ಯಾಟರ್ ಭಾರತ. ಡೆಲ್ಲಿ ಕ್ಯಾಪಿಟಲ್ಸ್2.20 ಕೋಟಿ.

* ಶಫಾಲಿ ವರ್ಮಾ. ಭಾರತ ಬ್ಯಾಟರ್. ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ.

* ಪೂಜಾ ವಸ್ತ್ರಕರ್. ಆಲ್‌ ರೌಂಡರ್ ಭಾರತ. ಮುಂಬೈ ಇಂಡಿಯನ್ಸ್ 1.90 ಕೋಟಿ ರೂ.

* ರಿಚಾ ಘೋಷ್. ವಿಕೇಟ್ ಕೀಪರ್ ಭಾರತ. ಆರ್‌ಸಿಬಿ 1.90 ಕೋಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+