Rohit Sharma: ಇದೇ ಲಾಸ್ಟ್ ಬ್ರೋ..! ಮುಂಬೈ ಇಂಡಿಯನ್ಸ್ ತೊರೆಯುವ ದೊಡ್ಡ ಸೂಚನೆ ಕೊಟ್ಟ ರೋಹಿತ್ ಶರ್ಮಾ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ. ಐದು ಬಾರಿ ಚಾಂಪಿಯನ್ ಈ ಬಾರಿ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ.
ರೋಹಿತ್ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಮಾಡಿದ್ದು, ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ರೋಹಿತ್ ಶರ್ಮಾ ಅವರು ತಂಡದಲ್ಲಿನ ವಾತಾವರಣದಿಂದ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮುಂಬೈ ಇಂಡಿಯನ್ಸ್ ಬಗ್ಗೆ ಹಲವು ಊಹಾಪೋಹಗಳಿರುವ ಬೆನ್ನಲ್ಲೇ ರೋಹಿತ್ ಶರ್ಮಾ ಅವರ ವಿಡಿಯೋ ವೈರಲ್ ಆಗಿದ್ದು, ಸಖತ್ ಚರ್ಚೆ ಹುಟ್ಟುಹಾಕಿದೆ. ಅಲ್ಲದೆ ಮುಂಬೈ ಇಂಡಿಯನ್ಸ್ ಪರವಾಗಿ ಇದೇ ಅವರ ಕೊನೆಯ ಐಪಿಎಲ್ ಎನ್ನುವುದು ಬಹುತೇಕ ಖಚಿತವಾಗಿದೆ.
ಬೇಸರ ಹೇಳಿಕೊಂಡ್ರಾ ರೋಹಿತ್ ಶರ್ಮಾ?
ರೋಹಿತ್ ಶರ್ಮಾ ಕೆಕೆಆರ್‌ನ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಮಾತನಾಡುವುದು ವಿಡಿಯೋವನ್ನು ಕೆಕೆಆರ್ ಅಧಿಕೃತ ಎಕ್ಸ್ ಖಾತೆಯಿಂದ ಅಪ್‌ಲೋಡ್ ಮಾಡಿತ್ತು. ಸಾಕಷ್ಟು ಹಿನ್ನಲೆ ಶಬ್ದವಿದ್ದರೂ, ರೋಹಿತ್ ಮತ್ತು ನಾಯರ್ ನಡುವೆ ನಿಖರವಾಗಿ ಏನು ಮಾತನಾಡಿದರು ಎಂಬುದನ್ನು ಕಂಡುಹಿಡಿಯಲು ಅಭಿಮಾನಿಗಳು ಯಶಸ್ವಿಯಾಗಿದ್ದಾರೆ.
ವೀಡಿಯೊದಲ್ಲಿ, ರೋಹಿತ್ ಮತ್ತು ನಾಯರ್ 'ವಿಷಯಗಳು ಬದಲಾಗುತ್ತಿವೆ' ಎಂದು ಮಾತನಾಡುವುದನ್ನು ಕೇಳಬಹುದು. ವೀಡಿಯೊದ ಕೊನೆಯಲ್ಲಿ, ರೋಹಿತ್ ಶರ್ಮಾ ಇದು ನನ್ನ ಕೊನೆಯದು ಎಂದು ಹೇಳಿದರು.
ಸಂಭಾಷಣೆಯ ಸಂದರ್ಭ ತಿಳಿದಿಲ್ಲವಾದರೂ, ಮುಂಬೈ ಇಂಡಿಯನ್ಸ್‌ನಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ, ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಕ ಮಾಡುವ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
"ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ...ಅವರ ಮೇಲೆ.. .ಏನೇ, ಆದರೆ ಇದು ನನ್ನ ಮನೆಯ ಸಹೋದರ, ನಾನು ನಿರ್ಮಿಸಿದ ದೇವಾಲಯ, ಬ್ರೋ ಏನೇ ಆದರೂ ಇದು ನನ್ನ ಕೊನೆಯದು" ಎಂದು ಹೇಳುವುದನ್ನು ಕೇಳಬಹುದು.
ಮುಂಬೈ ಬಿಡುವುದು ಖಚಿತ
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರವಾಗಿ ಆಡುತ್ತಿರುವುದು ಇದೇ ಕೊನೆಯ ಆವೃತ್ತಿ ಎನ್ನಲಾಗಿದೆ. ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದ್ದು, ಮುಂಬೈ ಇಂಡಿಯನ್ಸ್ ತೊರೆದು ಬೇರೆ ತಂಡ ಸೇರುತ್ತಾರ ಅಥವಾ ಐಪಿಎಲ್‌ನಿಂದಲೇ ನಿವೃತ್ತಿ ಹೊಂದುತ್ತಾರ ಎನ್ನುವ ಪ್ರಶ್ನೆ ಎದುರಾಗಿದೆ.












Click it and Unblock the Notifications