RCB Fans: ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ಮೇಲೆ ಮದುವೆ: ಪೋಸ್ಟರ್ ಭಾರೀ ವೈರಲ್‌

IPL 2025 RCB: ವಿಶ್ವದ ಅತ್ಯಂತ ದೊಡ್ಡ ಲೀಗ್‌ಗಳಲ್ಲಿ ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಕೂಡ ಒಂದಾಗಿದೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮಾತ್ರ. ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಪಿ ಗೆದ್ದಿಲ್ಲ. ಆದರೆ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ, ಬದಲಾಗಿ ಹಚ್ಚಾಗುತ್ತಲಿದೆ.

ಎಷ್ಟೇ ಬಾರಿ ಸೋತರೂ ಆರ್‌ಸಿಬಿ ತಂಡವನ್ನು ಬಿಟ್ಟುಕೊಡುವ ಮಾತೇ ಇಲ್ಲ ಅಂತಿದ್ದಾರೆ ಅಭಿಮಾನಿಗಳು. ಈ ನಡುವೆಯೇ ಕೆಲ ಅಭಿಮಾನಿಗಳ ಪೊಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. 2025ರ ಸೀಸನ್ ಮುಕ್ತಾಯದ ಹಂತದಲ್ಲಿರುವಾಗಲೇ ಇಬ್ಬರು ಆರ್‌ಸಿಬಿ ಅಭಿಮಾನಿಗಳು ಹಿಡಿದುಕೊಂಡ ಪೊಸ್ಟರ್ ಮಾತ್ರ ಸಖತ್ ಸೌಂಡ್‌ ಮಾಡುತ್ತಿದೆ.

Will Not Marry Until RCB Wins ipl Trophy Poster viral

ಐಪಿಎಲ್‌ 2025ರ ಆವೃತ್ತಿಯ ಆರಂಭದಿಂದಲೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬ್ಯಾಟಿಂಗ್‌, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ ಪ್ರವೇಶ ಮಾಡಿದೆ. ಈ ಮೂಲಕ ಪಕ್ಕಾ ಟ್ರೋಫಿ ಗೆಲ್ಲುವ ಭರಸವೆಯನ್ನೂ ಮೂಡಿಸಿದೆ. ಆರ್‌ಸಿಬಿ ಒಂದು ಮ್ಯಾಚ್‌ ಗೆದ್ದರೆ ಸಾಕು ಅಭಿಮಾನಿಗಳು ಟ್ರೋಫಿ ಗೆದ್ದಿದೆ ಎನ್ನುವ ಲೆವೆಲ್‌ಗೆ ಸೆಲೆಬ್ರೆಷನ್‌ ಮಾಡ್ತಾರೆ.. ಒಂದು ವೇಳೆ ಫೈನಲ್‌ ಗೆದ್ದು ಟ್ರೋಫಿ ಎತ್ತಿದ್ದರೆ ಇನ್ಯಾವ ಮಟ್ಟಿಗೆ ಸಂಭ್ರಮಾಚರಣೆ ಮಾಡುತ್ತಾರೆಯೋ ಎಂದು ಊಹಿಸಲೂ ಆಗದು.

ಈ ಸಲ ಕಪ್‌ ನಮ್ದೆ ಎಂದು ಹೇಳುವುದಲ್ಲದೆ, ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ಆರ್‌ಸಿಬಿ ಅಭಿಮಾನಿಗಳು ಪ್ರದರ್ಶಿಸಿ ಗಮನ ಸೆಳೆಯುತ್ತಲೇ ಇದ್ದಾರೆ. ಇದೀಗ ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆಲ್ಲುವವರೆಗೂ ನಾವು ಮದುವೆನೇ ಆಗುವುದಿಲ್ಲ ಎಂದು ಬರೆದಿರುವ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಇದು ಆರ್‌ಸಿಬಿ vs ಎಸ್‌ಆರ್‌ಎಚ್‌ ಪಂದ್ಯದ ವೇಳೆ ನಡೆದಿರುವ ಘಟನೆಯಾಗಿದ್ದು, ಈಗಲೂ ಸಖತ್ ಸೌಂಡ್‌ ಮಾಡುತ್ತಿದೆ.

ಆರ್‌ಸಿಬಿ ಇದುವರೆಗೂ ಟ್ರೋಫಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ, ಅಭಿಮಾನಿಗಳು ಮಾತ್ರ ಈ ಬಾರಿ ಕಪ್‌ ನಮ್ದೆ ಎನ್ನುವ ಘೋಷವಾಕ್ಯವನ್ನು ಕೂಗುತ್ತಲೇ ಬಂದಿದ್ದಾರೆ. ಇದು ಈ ಬಾರಿ ನಿಜವಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಯಾಕೆಂದ್ರೆ ಈ ಸೀಸನ್ ಆರಂಭದಿಂದಲೂ ಬಲಿಷ್ಠ ತಂಡಗಳನ್ನು ಬಗ್ಗು ಬಡಿದು ಪ್ಲೇ ಆಫ್‌ವರೆಗೂ ಬಂದು ನಿಂತಿದೆ.

Take a Poll

ಇನ್ನು "ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆಲ್ಲುವವರೆಗೂ ನಾವು ಮದುವೆನೇ ಆಗುವುದಿಲ್ಲ," ಎಂದು ಅಭಿಮಾನಿಗಳಿಬ್ಬರು ಪ್ರದರ್ಶನ ಮಾಡಿದ ಪೋಸ್ಟರ್‌ಗಳಿಗೆ ತುಂಬಾ ಜನರು ಹಲವು ರೀತಿಯಲ್ಕಿ ಕಾಮೆಂಟ್‌ ಮಾಡಿದ್ದಾರೆ. "ನಿಜವಾದ ಅಭಿಮಾನಿಗಳೆಂದರೆ ನೀವೇ ಕಣ್ರಯ್ಯ," ಎಂದು ಕೆಲವರು ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು "ಪಕ್ಕಾ ಈ ಬಾರಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್‌ ಗದ್ದೇ ಗೆಲ್ಲುತ್ತದೆ ಮದುವೆ ಆಗ್ಬಿಡಿ ನಿಮಗೆ ಒಳ್ಳೆಯದಾಗಲಿ," ಎಂದು ಶುಭಹಾರಸಿದ್ದಾರೆ.

ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲೇನಲ್ಲ. ಮೊದಲಿನಿಂದಲೂ ಆರ್‌ಸಿಬಿಯ ಅಭಿಮಾನಿಗಳು ವಿಶೇಷ ಪೋಸ್ಟರ್ಗಳನ್ನು ಪ್ರದರ್ಶನ ಮಾಡಿ ಅಭಿಮಾನ ಮೆರೆದಿರುವ ಘಟನೆ ಹಲವು ನಡೆದಿವೆ. ಇಲ್ಲೇ ಗೊತ್ತಾಗುತ್ತದೆ ಆರ್‌ಸಿಬಿ ತಂಡಕ್ಕಿರುವ ತಾಕತ್ತು ಏನಂತಾ ಹಾಗೂ ನಾವು ಅಪ್ಪಟ್ಟ ಆರ್‌ಸಿಬಿ ಅಭಿಮಾನಿಗಳೇ ಅಂತಲೂ ಸಾರಿ ಸಾರಿ ಹೇಳುತ್ತಲೇ ಇದ್ದಾರೆ. ಒಟ್ಟಿನಲ್ಲಿ ಹೇಳೋದಾದ್ರೆ ಇಡೀ ಐಪಿಎಲ್‌ ತಂಡಗಳಿಗಿರುವ ಅಭಿಮಾನಿಗಳು ಆರ್‌ಸಿಬಿ ತಂಡವೊಂದಕ್ಕೆ ಇದ್ದಾರೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+