RCB IPL 2026: ತವರಿನಲ್ಲಿ ಡೆಲ್ಲಿ ವಿರುದ್ಧ ಆರ್‌ಸಿಬಿ ಸೋಲಿಗೆ ಕಾರಣಗಳು
RCB IPL 2026: ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಾಯ ಸೋಲು ಕಂಡಿತು. ಹಾಗಾದ್ರೆ, ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ ಕೇವಲ 175 ರನ್‌ಗಳನ್ನಷ್ಟೇ ಕಲೆಹಾಕಿತು. ಈ ಮೂಲಕ ಡಿಸಿಗೆ 176 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತು.

ಬ್ಯಾಟಿಂಗ್‌ನಲ್ಲಿ ಎಡವಿದ ಆರ್‌ಸಿಬಿ
ಆರ್‌ಸಿಬಿ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ಪಡೆದಿತ್ತು. ಫಿಲ್ ಸಾಲ್ಟ್ ಕೇವಲ 38 ಎಸೆತಗಳಲ್ಲಿ 63 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಇವರ ಜೊತೆ ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ ಅವರು ನಿರೀಕ್ಷೆಯನ್ನು ಹುಸಿ ಮಾಡಿದರು. ಅವರು ಕೇವಲ 19 ರನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ತೆರಳಿದರು. ಉಳಿದಂತೆ ದೇವದತ್ ಪಡಿಕ್ಕಲ್ 18 ಹಾಗೂ ಟಿಮ್ ಡೇವಿಡ್ 26 ರನ್‌ಗಳನ್ನಷ್ಟೇ ಕಲೆಹಾಕಿದರು. ಇದರ ಪರಿಣಾಮ ಆರ್‌ಸಿಬಿ 180ರ ಗಡಿಯನ್ನೂ ಕೂಡ ದಾಟಲಿಲ್ಲ.
ಆರ್‌ಸಿಬಿ ರನ್ ವೇಗಕ್ಕೆ ಡೆಲ್ಲಿ ಕಡಿವಾಣ
ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಮತ್ತೊಂದೆಡೆ ಸ್ಪೀಡ್ ಬೌಲರ್ ಲುಂಗಿ ಎನ್ಗಿಡಿ ಅವರು ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಈ ಮೂರು ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಚಿನ್ನಸ್ವಾಮಿ ಮೈದಾನದ ಸಣ್ಣ ಬೌಂಡರಿಗಳು ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ 175 ರನ್‌ಗಳ ಗುರಿ ಎದುರಾಳಿ ತಂಡಕ್ಕೆ ದೊಡ್ಡ ಸವಾಲೇ ಆಗಿರಲಿಲ್ಲ. ಆದ್ದರಿಂದ ಇಲ್ಲಿ ಏನಿಲ್ಲ ಅಂದರೂ 200+ ರನ್ ಗಳಿಸಿದ್ದರೆ ಆರ್‌ಸಿಬಿಗೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ, ಆರ್‌ಸಿಬಿ ಕಲೆಹಾಕಿದ ಸಾಧಾರಣ ಮೊತ್ತ ದೊಡ್ಡ ಗುರಿಯೇ ಆಗಿರಲಿಲ್ಲ ಡೆಲ್ಲಿ ತಂಡಕ್ಕೆ.
ಭುವಿ ಬಿಟ್ಟರೆ ಉಳಿದ ಬೌಲರ್‌ಗಳ ಪ್ರದರ್ಶನ ವಿಫಲ
ಆರ್‌ಸಿಬಿ ನೀಡಿದ 176 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿಗೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಆರಂಭದಲ್ಲೇ ಮೂರು ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿದ್ದರು. ಆದರೆ ಉಳಿದ ಬೌಲರ್‌ಗಳು ಡೆಲ್ಲಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು. ಇದು ಕೂಡ ಆರ್‌ಸಿಬಿ ಸೋಲಿಗೆ ಒಂದು ಪ್ರಮುಖ ಕಾರಣವಾಯಿತು.
ತಂಡಕ್ಕೆ ಆಸರೆಯಾದ ಸ್ಟಬ್ಸ್
ಡೆಲ್ಲಿ ಪರ ಆರಂಭಿಕರಾಗಿ ಕಣ್ಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಆಡಿ ಉತ್ತಮ ಆರಂಭ ನೀಡಿದರು. ಅವರು 57 ರನ್‌ಗಳನ್ನು ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆದರೆ, ಟ್ರಿಸ್ಟನ್ ಸ್ಟಬ್ಸ್ ಕೊನೆಯವರೆಗೂ ನಿಂತು ಜವಾಬ್ದಾರಿಯುವ ಆಟ ಆಡಿ ಜಯದ ಹಾದಿ ಸುಲಭ ಮಾಡಿದರರು. ಇವರು ಅಜೇಯ 60 ರನ್ ಸಿಡಿಸಿದರು. ಆದರೂ ಕೊನೆಯಲ್ಲಿ ಮತ್ತೆ ಪಂದ್ಯ ಆರ್‌ಸಿಬಿ ಕಡೆ ತಿರುಗಿತ್ತು. ಈ ವೇಳೆ ಮಿಲ್ಲರ್ ಎರಡು ಭರ್ಜರಿ ಸಿಕ್ಸರ್‌ಗಳು, ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಆರ್‌ಸಿಬಿ ಪಾಲಿಗೆ ಕಿಲ್ಲರ್ ಆದರು.
ಅಕ್ಷರ್ ಪಟೇಲ್ ಗಾಯಗೊಂಡು ಹೊರನಡೆದಾಗ ಪಂದ್ಯ ಆರ್‌ಸಿಬಿ ಕಡೆಗೆ ತಿರುಗಿತ್ತು. ಆದರೆ, ಕೊನೆಯ ಓವರ್‌ನಲ್ಲಿ 15 ರನ್ ಬೇಕಿದ್ದ ಸಮಯದಲ್ಲಿ ಶೆಫರ್ಡ್ ಎಸೆದ ಓವರ್‌ನಲ್ಲೇ ಡೇವಿಡ್ ಮಿಲ್ಲರ್ ಸಿಕ್ಸರ್, ಬೌಂಡರಿ ಸಿಡಿಸಿ ಆರ್‌ಸಿಬಿ ಗೆಲುವನ್ನು ಕಸಿದುಕೊಂಡರು. ಒಟ್ಟಿನಲ್ಲಿ ಹೇಳುವುದಾದರೆ, ಬ್ಯಾಟಿಂಗ್‌ನಲ್ಲಿ ಅಂತಿಮ ಓವರ್‌ಗಳ ನಿರಾಸೆ ಮತ್ತು ಬೌಲಿಂಗ್‌ನಲ್ಲಿ ಸರಿಯಾದ ಸಮಯದಲ್ಲಿ ವಿಕೆಟ್ ಪಡೆಯಲು ವಿಫಲವಾಗಿದ್ದು ಆರ್‌ಸಿಬಿ ಸೋಲಿಗೆ ಪ್ರಮುಖ ಹಾದಿಯಾಯಿತು.












Click it and Unblock the Notifications