Get Updates
Get notified of breaking news, exclusive insights, and must-see stories!

Ruturaj Gaikwad: ಸಿಎಸ್‌ಕೆ ತಂಡಕ್ಕೆ ನಾಯಕನಾಗಿ ಯಶಸ್ವಿಯಾಗ್ತಾರಾ ರುತುರಾಜ್ ಗಾಯಕ್ವಾಡ್?

ಐಪಿಎಲ್ 2024ರ ಆರಂಭಕ್ಕೆ ಮುನ್ನವೇ ಸಿಎಸ್‌ಕೆ ತಂಡದ ಅಭಿಮಾನಿಗಳಿಗೆ ಶಾಕ್ ಸಿಕ್ಕಿದೆ. ತಂಡದ ಯಶಸ್ವಿ ನಾಯಕ ಎಂ.ಎಸ್. ಧೋನಿ ಸಿಎಸ್‌ಕೆ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ರುತುರಾಜ್ ಗಾಯಕ್ವಾಡ್ ಐಪಿಎಲ್ 2024 ರಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

42 ವರ್ಷದ ಧೋನಿ ಅವರು 2008 ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. 2022 ರ ಋತುವಿನ ಆರಂಭದಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವ ನೀಡಲಾಗಿತ್ತು. ಆದರೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ್ದರಿಂದ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡಿದ್ದರು.

Who is Ruturaj Gaikwad he replaces MS Dhoni As CSK Captain Ahead Of IPL 2024

ಈ ಬಾರಿ ಅಳೆದು ತೂಗಿ ಯುವ ಬ್ಯಾಟರ್ ಮೇಲೆ ವಿಶ್ವಾಸ ತೋರಿಸಿರುವ ಸಿಎಸ್‌ಕೆ ಫ್ರಾಂಚೈಸಿ, ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವದ ಹೊಣೆ ನೀಡಿದೆ. ಸಲಹೆ, ಮಾರ್ಗದರ್ಶನ ನೀಡಲು ಧೋನಿ ವಿಕೆಟ್ ಹಿಂದೆ ನಿಲ್ಲುತ್ತಾರೆ. ಒತ್ತಡ ನಿಭಾಯಿಸುವ ಕಲೆಯನ್ನು ರುತುರಾಜ್ ಕಲಿಯಬೇಕಿದೆ.

ರುತುರಾಜ್ ಗಾಯಕ್ವಾಡ್ ಯಾರು?

ಮಹಾರಾಷ್ಟ್ರ ರಾಜ್ಯದ ಪರವಾಗಿ ಆಡುವ ರುತುರಾಜ್ ಗಾಯಕ್ವಾಡ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಮುನ್ನಲೆಗೆ ಬಂದವರು. 2016-17ರ ಹಜಾರೆ ಟ್ರೋಫಿಯಲ್ಲಿ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಅವರು ಬ್ಯಾಟಿಂಗ್‌ನಲ್ಲಿ ಸ್ಥಿರವಾದ ಪ್ರದರ್ಶನ ನೀಡುವ ಮೂಲಕ ಭಾರತ ಎ ತಂಡಕ್ಕೂ ಆಯ್ಕೆಯಾದರು. 2019ರ ಐಪಿಎಲ್‌ ಹರಾಜಿನಲ್ಲಿ ಅವರು ಸಿಎಸ್‌ಕೆ ತಂಡಕ್ಕೆ ಸೇರ್ಪಡೆಯಾದರು. 2021ರ ಐಪಿಎಲ್ ಆವೃತ್ತಿಯಲ್ಲಿ 635 ರನ್ ಗಳಿಸುವ ಮೂಲಕ ಸಿಎಸ್‌ಕೆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಕೊಡುಗೆ ನೀಡಿದರು. ಆ ವರ್ಷ ಅವರು ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಅವರು ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದರು. 2022ರ ಐಪಿಎಲ್‌ನಲ್ಲಿ ₹6 ಕೋಟಿ ನೀಡಿ ರುತುರಾಜ್ ಅವರನ್ನು ಸಿಎಸ್‌ಕೆ ತಂಡದಲ್ಲಿ ಉಳಿಸಿಕೊಂಡಿತು.

ರುತುರಾಜ್ ಗಾಯಕ್ವಾಡ್ ಆರಂಭಿಕ ಬ್ಯಾಟರ್ ಆಗಿದ್ದು, ಸ್ಫೋಟಕ್ ಬ್ಯಾಟಿಂಗ್‌ಗೆ ಹೆಸರಾಗಿದ್ದಾರೆ. ಗಾಯಕ್ವಾಡ್ ಐಪಿಎಲ್‌ನಲ್ಲಿ 52 ಪಂದ್ಯಗಳಿಂದ 39.06 ಸರಾಸರಿ ಮತ್ತು 135.52 ಸ್ಟ್ರೈಕ್ ರೇಟ್‌ನಲ್ಲಿ 1797 ರನ್ ಗಳಿಸಿದ್ದಾರೆ.

27 ವರ್ಷದ ಯುವ ಬ್ಯಾಟರ್ ಮೇಲೆ ಭರವಸೆ ಇಟ್ಟಿರುವ ಸಿಎಸ್‌ಕೆ ನಾಯಕತ್ವದ ಹೊಣೆ ನೀಡಿದೆ. ದೀರ್ಘಕಾಲದವರೆಗೆ ತಂಡದ ನಾಯಕತ್ವ ವಹಿಸಿಕೊಳ್ಳುವ ಆಟಗಾರನಂತೆ ನೋಡಲಾಗಿದೆ. ಅದೇ ಕಾರಣಕ್ಕೆ ಅನುಭವಿ ಜಡೇಜಾರನ್ನು ಮೀರಿ ರುತುರಾಜ್ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಈ ಬಾರಿ ಗಾಯಕ್ವಾಡ್ ತಮ್ಮ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಂಡರೆ, ದೀರ್ಘಕಾಲದವರೆಗೆ ಅವರೇ ನಾಯಕರಾಗುವುದು ಖಚಿತವಾಗಲಿದೆ. ಒಂದು ವೇಳೆ 2022ರ ಐಪಿಎಲ್‌ನಂತೆ ಆದರೆ, ಸಿಎಸ್‌ಕೆ ತಂಡಕ್ಕೆ ಧೋನಿ ನಂತರ ಯಾರು ಎನ್ನುವುದೇ ದೊಡ್ಡ ತಲೆನೋವಾಗಲಿದೆ.

ಇದೇ ಕೊನೆಯ ಐಪಿಎಲ್?

42 ವರ್ಷದ ಎಂಎಸ್ ಧೋನಿ ಅವರಿಗೆ ಇದೇ ಕೊನೆ ಐಪಿಎಲ್ ಆಗುವ ಸಾಧ್ಯತೆ ಇದೆ. ಕಳೆದ ವರ್ಷದ ಐಪಿಎಲ್ ಬಳಿಕ ನಿವೃತ್ತಿಯಾಗುತ್ತಾರೆ ಎನ್ನಲಾಗಿತ್ತಾದರೂ, ಅಭಿಮಾನಿಗಳಿಗಾಗಿ ಮತ್ತೊಂದು ಆವೃತ್ತಿ ಆಡುತ್ತೇನೆ ಎಂದಿದ್ದರು. ಮೊಣಕಾಲು ನೋವಿಗೆ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದ ಅವರು, ಈಗ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.

ಧೋನಿ 212 ಐಪಿಎಲ್ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ, 128 ಗೆದ್ದಿದ್ದಾರೆ ಮತ್ತು 82 ಪಂದ್ಯಗಳಲ್ಲಿ ಸೋತಿದ್ದಾರೆ. ಧೋನಿ ಆಗಸ್ಟ್ 15, 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಅವರ ನಾಯಕತ್ವದಲ್ಲಿ ಭಾರತ 2007 ರ ವಿಶ್ವ ಟ್ವೆಂಟಿ 20 ಪ್ರಶಸ್ತಿ, 2011 ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+