Get Updates
Get notified of breaking news, exclusive insights, and must-see stories!

West Indies: ನಾಯಕನ ಜೊತೆಗೆ ಕಿತ್ತಾಡಿಕೊಂಡು ಮೈದಾನದಿಂದಲೇ ಹೊರ ನಡೆದ ಆರ್‌ಸಿಬಿ ಮಾಜಿ ವೇಗಿ

ಕ್ರಿಕೆಟ್ ಆಟದಲ್ಲಿ ಎದುರಾಲಿ ತಂಡದ ಆಟಗಾರರ ಜೊತೆ ಸ್ಲೆಡ್ಜಿಂಗ್ ಮಾಡುವುದು, ಕಿತ್ತಾಡುವುದು ಸಾಮಾನ್ಯ. ಒಂದೇ ತಂಡದ ಆಟಗಾರರು ಕಿತ್ತಾಡಿಕೊಂಡ ಘಟನೆಗಳು ಕೂಡ ಕ್ರಿಕೆಟ್ ಇತಿಹಾಸದಲ್ಲಿ ನಡೆದಿವೆ. ಆದರೆ ಆರ್ ಸಿಬಿ ಮಾಜಿ ಬೌಲರ್ ತನ್ನ ತಂಡದ ನಾಯಕನ ಜೊತೆ ಕಿತ್ತಾಡಿಕೊಂಡು ಆಟದ ಸಂದರ್ಭದಲ್ಲೇ ಮೈದಾನದಿಂದ ಹೊರ ನಡೆದ ಘಟನೆ ನಡೆದಿದೆ.

ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ನಾಯಕ ಶಾಯ್ ಹೋಪ್ ಜೊತೆ ಜಗಳವಾಡಿಕೊಂಡಿದ್ದಾರೆ. ಫೀಲ್ಡಿಂಗ್ ನಿಲ್ಲಿಸುವ ವಿಚಾರದಲ್ಲಿ ಜೋಸೆಫ್ ನಾಯಕನ ಜೊತೆ ವಾಗ್ವಾದ ಮಾಡಿದ್ದು, ತಮ್ಮ ಓವರ್ ಮುಗಿಯುತ್ತಿದ್ದಂತೆ ಸಿಟ್ಟು‌ಮಾಡಿಕೊಂಡು ಮೈದಾನದಿಂದಲೇ ಹೊರನಡೆದಿದ್ದಾರೆ.

west indies pacer alzarri joseph leaves pitch after clash with captain shai hope

ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಅಪರೂಪದ ಘಟನೆಯಾಗಿದೆ, ಅಲ್ಜಾರಿ ಜೋಸೆಫ್ ಡಗೌಟ್ ನಲ್ಲಿ ಸಹ ಆಟಗಾರ ಹೇಡನ್ ವಾಲ್ಟ್ ಜೊತೆ ಮಾತನಾಡುತ್ತಾ ಕುಳಿತುಕೊಂಡರು. ವೆಸ್ಟ್ ಇಂಡೀಸ್ 10 ಆಟಗಾರರ ಜೊತೆಯೇ ಆಟ ಮುಂದುವರೆಸಿತು.

ಬಳಿಕ ಅಲ್ಜಾರಿ ಜೋಸೆಫ್ ಮೈದಾನಕ್ಕೆ ವಾಪಸ್ ಬಂದರು. ಜಗಳವಾಡಿಕೊಂಡು ಮೈದಾನದಿಂದ ಹೊರ ಹೋಗುವ ಮುನ್ನ ಅವರು ವಿಕೆಟ್ ಪಡೆದುಕೊಂಡರು. ಅಲ್ಜಾರಿ ಜೋಸೆಫ್ ಕಿತ್ತಾಡಿಕೊಂಡು ಮೈದಾನದಿಂದ ಹೊರಹೋಗುವ ವಿಡಿಯೋ ಇದೀಗ ಭಾರಿ ವೈರಲ್ ಅಗಿದೆ.

ಕಳೆದ ಐಪಿಎಲ್‌ನಲ್ಲಿ 11.50 ಕೋಟಿ ರೂಪಾಯಿಗೆ ಆರ್ ಸಿಬಿ ತಂಡಕ್ಕೆ ಸೇರಿದ್ದರು. ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ಈ ಬಾರಿ ತಂಡದಿಂದ ಕೈಬಿಟ್ಟಿದ್ದು, ಮೆಗಾ ಹರಾಜಿನಲ್ಲಿ ಮತ್ತೊಂದು ತಂಡಕ್ಕೆ ಸೇರುವ ನಿರೀಕ್ಷೆಯಲ್ಲಿದ್ದಾರೆ.

ಭರ್ಜರಿ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬಾರ್ಬಡೋಸ್‌ನ ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ8 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತು. ಮ್ಯಾಥ್ಯೂ ಫೋರ್ಡ್ 3 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಎರಡು ವಿಕೆಟ್ ಪಡೆದರು.

ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, 43 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 267 ರನ್ ಗಳಿಸುವ ಮೂಲಕ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಬ್ರಾಂಡನ್ ಕಿಂಗ್‌ 102 ರನ್ ಗಳಿಸಿದರೆ, ಕೀಸಿ ಕಾರ್ಟಿ ಅಜೇಯ 128 ರನ್ ಗಳಿಸಿದರು. ಇವರಿಬ್ಬರ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡು ಸಂಭ್ರಮಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+