ನಿಕೋಲಸ್ ಆಟಕ್ಕೆ ಗೇಲ್ ದಾಖಲೆ ಪೀಸ್ ಪೀಸ್
ಟಿ20 ವಿಶ್ವಕಪ್ 2024ರ ಲೀಗ್ ಹಂತದ ಪಂದ್ಯಗಳು ಮುಗಿದಿವೆ. ಈಗ ಸೂಪರ್ 8 ಹಂತದ ಪಂದ್ಯಗಳು ನಡೆಯುತ್ತಿವೆ. ಈ ವಿಶ್ವಕಪ್‌ನಲ್ಲಿ ಹಲವು ದಾಖಲೆಗಳು ದಾಖಲಾಗುತ್ತಿವೆ. ಇತ್ತೀಚಿಗೆ ಆರ್‌ಸಿಬಿ ತಂಡದ ಲಾಕಿ ಫಾರ್ಗ್ಯೂಸನ್ ತನ್ನ ಕೋಟಾದ ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ರನ್ ನೀಡದೆ, ಮೂರು ವಿಕೆಟ್ ಪಡೆದು ದಾಖಲೆಯ ಪುಸ್ತಕ ಸೇರಿದ್ದು ನಿಮಗೆ ತಿಳಿದಿರುತ್ತದೆ. ಆದರೆ, ಇಲ್ಲೊಬ್ಬ ಬ್ಯಾಟರ್ ತಮ್ಮ ಧಮಾಕೆದಾರ ಬ್ಯಾಟಿಂಗ್‌ನಿಂದ ಸದ್ದು ಮಾಡಿದ್ದಾರೆ.
ಟಿ20 ವಿಶ್ವಕಪ್‌ನ ಲೀಗ್ ಹಂತದ ಕೊನೆಯ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವೆ ಕಾದಾಟ ನಡೆಯಿತು. ವೆಸ್ಟ್ ಇಂಡೀಸ್ ತಂಡದ ಭರವಸೆಯ ಬ್ಯಾಟರ್ ನಿಕೋಲಸ್ ಪೂರನ್ ತಮ್ಮ ಖದರ್ ಬ್ಯಾಟಿಂಗ್‌ನಿಂದ ಹೆಸರುವಾಸಿ. ನಿಕೋಲಸ್ ಪೂರನ್ ಬಿರುಸಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ತಮ್ಮದೇ ದೇಶದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು.

ಗೇಲ್ ದಾಖಲೆ ಊಡೀಸ್
ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಹೊಂದಿರುವ ಆಟಗಾರ ಕ್ರಿಸ್ ಗೇಲ್, ಹೊಡಿ ಬಡಿ ಆಟಕ್ಕೆ ಹೆಸರು ವಾಸಿ. ಟಿ20 ಕ್ರಿಕೆಟ್‌ನಲ್ಲಿ ಇವರ ಹೆಸರಿನಲ್ಲಿ ವೆಸ್ಟ್ ಇಂಡೀಸ್ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ನಿಕೋಲಸ್ ಅಳಿಸಿ ಹಾಕಿದ್ದಾರೆ. ಕ್ರಿಸ್ ಗೇಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 124 ಸಿಕ್ಸರ್ ಬಾರಿಸಿದ ದಾಖಲೆಯನ್ನು ಹೊಂದಿದ್ದರು.
ನಿಕೋಲಸ್ ಪೂರನ್ ಅವರು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಲೆಕ್ಕಾಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ನಿಕೋಲಸ್ ಪೂರನ್ ಈಗ ಟಿ 20 ಅಂತರಾಷ್ಟ್ರೀಯ ಪಂದ್ಯದಲ್ಲಿ 128 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂದರೆ ಅವರು ಕ್ರಿಸ್ ಗೇಲ್‌ಗಿಂತ ನಾಲ್ಕು ಸಿಕ್ಸರ್‌ಗಳನ್ನು ಹೆಚ್ಚು ಬಾರಿಸಿ ಅಗ್ರಸ್ಥಾನ ತಲುಪಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ, ಪುರನ್ ಅವರ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ದಾಖಲಾಗಿವೆ.

ಅತಿ ಹೆಚ್ಚು ರನ್ ದಾಖಲೆ
ಇದೇ ಪಂದ್ಯದಲ್ಲಿನ ವೆಸ್ಟ್ ಇಂಡೀಸ್ ಪರ ಪುರನ್ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 20 ರನ್ ಗಳಿಸಿದ್ದರು. ಈ ಮೂಲಕ ಟಿ20 ಮಾದರಿಯಲ್ಲಿ 2000ರ ಗಡಿ ದಾಟಿದ ಮೊದಲ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಸ್ ಗೇಲ್ ಈ ಸ್ವರೂಪದಲ್ಲಿ 1899 ರನ್ ಗಳಿಸಿದ್ದರು. ಈಗ ಈ ಪಟ್ಟಿಯಲ್ಲೂ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ನಿಕೋಲಸ್ ಪೂರನ್ ಮುಂಚೂಣಿಗೆ ಬಂದಿದ್ದಾರೆ.
ಪೂರಾನ್ ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ 98 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಿಂದಾಗಿ, ವೆಸ್ಟ್ ಇಂಡೀಸ್ ತಂಡವು ಗೆದ್ದಿತು, ಆದರೆ ಪೂರನ್ ಕೇವಲ ಎರಡು ರನ್‌ಗಳಿಂದ ಶತಕ ವಂಚಿತರಾದರು.
ವೆಸ್ಟ್ ಇಂಡೀಸ್ ತಂಡವು ಈಗಾಗಲೇ ತವರಿನಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2024 ರ ಸೂಪರ್ 8 ಅನ್ನು ತಲುಪಿದೆ. ಈಗ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್‌ನ ವಿವಿಧ ಮೈದಾನಗಳಲ್ಲಿ ನಡೆಯಲಿವೆ. ವೆಸ್ಟ್ ಇಂಡೀಸ್ ತಂಡವು ಸೂಪರ್ 8 ರಲ್ಲಿ ಯುಎಸ್ಎ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಆಡಲಿದೆ.












Click it and Unblock the Notifications