Virat Kohli IPl Salary: ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಸಂಬಳ 21 ಕೋಟಿ, ಸಿಗೋದು ಬರೋ 12.5 ಕೋಟಿ ರೂ.! ಕಾರಣ ತಿಳಿಯಿರಿ

Virat Kohli IPl Salary: ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರು ಐಪಿಎಲ್‌ನಲ್ಲಿ ಅವರ ಸಂಬಳ 21 ಕೋಟಿ ರೂಪಾಯಿ ಇದೆ. ಹಾಗಾದರೆ ಇದರಲ್ಲಿ ಅವರ ಕೈಗೆ ಸಿಗುವ ಹಣ ಎಷ್ಟು ಎಂದು ಕೇಳಿದರೆ ಶಾಕ್‌ ಆಗುವುದಂತೂ ಗ್ಯಾರಂಟಿ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ವಿರಾಟ್‌ ಕೊಹ್ಲಿ ಅವರು ರಾಯಲ್‌ ಚಾಲೆಂಜರ್ಸ್ ತಂಡದಿಂದ 21 ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 40ರಷ್ಟು ಹೆಚ್ಚಳ ಆಗಿದೆ. ಆದರೆ, ಈ ದೊಡ್ಡ ಮೊತ್ತದ ಆದಾಯದ ಮೇಲೆ ತೆರಿಗೆ ಎಷ್ಟು ಕಟ್ಟಾಗಾಲಿದ ಎನ್ನುವ ಶಾಕಿಂಗ್ ವಿಚಾರ ಇಲ್ಲಿದೆ.

Virat Kohli to get only Rs 13 Cr in rs 21 Cr IPL salary

ವಿರಾಟ್ ಕೊಹ್ಲಿ ಆರ್‌ಸಿಬಿಯ ಆಟಗಾರನಾಗಿ ಒಪ್ಪಂದದ ಮೂಲಕ ಇಷ್ಟು ಆದಾಯ ಗಳಿಸುತ್ತಾರೆ. ಈ ಆದಾಯವನ್ನು ಭಾರತದ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 28ರ ಅಡಿಯಲ್ಲಿ ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಎಂದು ಪರಿಗಣಿಸಲಾಗುತ್ತದೆ. ಇದರ ಮೇಲೆ ತೆರಿಗೆ ನಿರ್ಧಾರವಾಗಲಿದೆ.

ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, ವಿರಾಟ್ ಕೊಹ್ಲಿ ಅವರಂತಹ ಉನ್ನತ ಆದಾಯ ಪಡಯುವವರು, ಗರಿಷ್ಠ ತೆರಿಗೆ ಕಟ್ಟುತ್ತಾರೆ. ಅವರ ಐಪಿಎಲ್ ಸಂಬಳವು 15 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಹಿನ್ನೆಲೆ 21 ಕೋಟಿ ರೂಪಾಯಿಗಳ ಮೇಲೆ ಶೇಕಡಾ 30ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಅಲ್ಲದೆ, ಆರೋಗ್ಯ ಮತ್ತು ಶಿಕ್ಷಣ ಸೆಸ್‌ಗಾಗಿ ಶೇಕಡಾ 4ರಷ್ಟು ಹೆಚ್ಚುವರಿ ಶುಲ್ಕವನ್ನು ಹಾಕಲಾಗುತ್ತದೆ.

ಆದ್ದರಿಂದ, ವಿರಾಟ್ ಕೊಹ್ಲಿ ಅವರು ತಮ್ಮ 21 ಕೋಟಿ ರೂಪಾಯಿ ಐಪಿಎಲ್ ಆದಾಯದಲ್ಲಿ 8.19 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ತೆರಿಗೆ ಕಡಿತದ ನಂತರ ವಿರಾಟ್ ಕೊಹ್ಲಿಯ ಕೈಗೆ 21 ಕೋಟಿಯಲ್ಲಿ ಬರೀ 12.81 ಕೋಟಿ ರೂಪಾಯಿ ಸಿಗುತ್ತದೆ.

ವಿರಾಟ್ ಕೊಹ್ಲಿಯ ಐಪಿಎಲ್ ಗಳಿಕೆಯನ್ನು ನೋಡೋದಾದ್ರೆ, 2008ರಲ್ಲಿ ಕೇವಲ 12 ಲಕ್ಷ ರೂಪಾಯಿ ಇತ್ತು. 2011 ಮತ್ತು 2013ರ ನಡುವೆ 8.28 ಕೋಟಿ ರೂಪಾಯಿಗಳಿಗೆ ಏರಿಕೆಯಾಯಿತು. 2014ರಿಂದ 2017ರ ವರೆಗೆ 12.5 ಕೋಟಿ ರೂಪಾಯಿಗಳಿಗೆ ಮತ್ತು 2018 ರಿಂದ 2021ರವರೆಗೆ 17 ಕೋಟಿ ರೂಪಾಯಿ ಇತ್ತು.

2022 ರಿಂದ 2024ರ ವೇಳೆಯಲ್ಲಿ ಕೊಹ್ಲಿ ಅವರ ಸಂಬಳ 15 ಕೋಟಿ ರೂಪಾಯಿಗೆ ಇಳಿಕೆಯಾಯಿತು. ಆದರೆ 2025ರ ಐಪಿಎಲ್‌ ಆವೃತ್ತಿಯಲ್ಲಿ ಅವರ ಗಳಿಕೆಯು ಶೇಕಡ 40% ರಷ್ಟು ಏರಿಕೆಯಾಗಿದ್ದು, 21 ಕೋಟಿ ರೂಪಾಯಿಗೆ ಆಗಿದೆ.

ಯಾವ್ಯಾವ ವರ್ಷ ಎಷ್ಟು ಸಂಬಳ?

* 2008-2010 - 12 ಲಕ್ಷ ರೂಪಾಯಿ
* 2011-2013 - 8.28 ಕೋಟಿ ರೂಪಾಯಿ
* 2014-2017 - 12.5 ಕೋಟಿ ರೂಪಾಯಿ
* 2018-2021 - 17 ಕೋಟಿ ರೂಪಾಯಿ
* 2022-2024 - 15 ಕೋಟಿ ರೂಪಾಯಿ
* 2025 - 21 ಕೋಟಿ ರೂಪಾಯಿ

ಇನ್ನು ಇಂದಿನ ಐಪಿಎಲ್‌ 2025ರ ಪಂದ್ಯದಲ್ಲಿ ಆರ್‌ಸಿಬಿ, ಸಿಎಸ್‌ಕೆ ಮುಖಾಮುಖಿಯಾಗಲಿವೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸಂಜೆ 7:30ರಿಂದ ಪಂದ್ಯ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+