20 ವರ್ಷದಿಂದ ಕ್ರಿಕೆಟ್ ಆಡ್ತಾ ಇದ್ದೀನಿ ಹೋಗಲೇ ಬಚ್ಚಾ... Virat Kohli

1,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಕೋಟಿ ಕೋಟಿ ಒಡೆಯ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಅಂದ್ರೆ ಎಲ್ಲರಿಗೂ ಪ್ರೀತಿ, ವಿರೋಧಿಗಳಿಗೆ & ಶತ್ರುಗಳಿಗೆ ಭಯವೂ ಇದೆ. ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕೆಣಕಿ ಉಳಿದವರು ಇಲ್ಲವೇ ಇಲ್ಲ ಅಂತಾ ಹೇಳಬಹುದು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ 20 ವರ್ಷದಿಂದ ಕ್ರಿಕೆಟ್ ಆಡ್ತಾ ಇದ್ದೀನಿ ಹೋಗಲೇ ಬಚ್ಚಾ ಅಂತಾ...

ನಮ್ಮ ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹವಾ ಹೇಗೆ ಇದೆಯೋ ಅದೇ ರೀತಿ ವಿರಾಟ್ ಕೊಹ್ಲಿ ಅವರನ್ನು ಕಂಡರೆ ಕೂಡ ಹವಾ ಇದೆ. ವಿರಾಟ್ ಕೊಹ್ಲಿ ಅವರನ್ನ ಕೋಟಿ ಕೋಟಿ ಅಭಿಮಾನಿಗಳು ಇಷ್ಟಪಡುತ್ತಾರೆ. ಹಾಗೇ ವಿರಾಟ್ ಕೊಹ್ಲಿ ಶತ್ರುಗಳು ಕಿಂಗ್ ಕೊಹ್ಲಿಯನ್ನ ಕಂಡರೆ ಹೆದರಿ ಮೂಲೆ ಸೇರಿಕೊಳ್ಳುತ್ತಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂದ್ರೆ ನಮ್ಮ ಆರ್‌ಸಿಬಿ ತಂಡದ ಆಟಗಾರರನ್ನು ಯಾರೂ ಕೆಣಕುವುದಿಲ್ಲ. ಅದಕ್ಕೆ ಕಾರಣ ಕೂಡ 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ!

Virat Kohli Said This To Punjab Kings Player Harpreet Brar On Cricket Field

20 ವರ್ಷದಿಂದ ಕ್ರಿಕೆಟ್ ಆಡ್ತಾ ಇದ್ದೀನಿ ಹೋಗಲೇ...

ಕ್ರಿಕೆಟ್ ಲೋಕದಲ್ಲಿ ವಿರಾಟ್ ಕೊಹ್ಲಿ ಹವಾ ಹೇಗಿದೆ ಅಂದ್ರೆ, ಒಂದೇ ಒಂದು ಜಾಹೀರಾತು ಪ್ರಮೋಷನ್‌ಗೆ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆಯುತ್ತಾರೆ ಕಿಂಗ್ ವಿರಾಟ್ ಕೊಹ್ಲಿ ಅನ್ನೋ ಮಾತು ಇದೆ. ಹೀಗಿದ್ದಾಗ ವಿರಾಟ್ ಕೊಹ್ಲಿ ಅವರನ್ನ ಹಾಗೂ ಆರ್‌ಸಿಬಿ ಆಟಗಾರ ಪಡೆಯನ್ನ ಯಾರೂ ಕೆಣಕುವ ಸಾಹಸವನ್ನೇ ಮಾಡುವುದಿಲ್ಲ. ಅಕಸ್ಮಾತ್ ಕೆಣಕಿಬಿಟ್ಟರೆ ಅವರ ಕ್ರಿಕೆಟ್ ಜೀವನ ಮುಗಿದು ಹೋಯಿತು ಅಂತಾನೇ ಅರ್ಥ... ಹೀಗಿದ್ದಾಗಲೇ, ವಿರಾಟ್ ಕೊಹ್ಲಿ 20 ವರ್ಷದಿಂದ ಕ್ರಿಕೆಟ್ ಆಡ್ತಾ ಇದ್ದೀನಿ ಹೋಗಲೇ ಬಚ್ಚಾ ಅಂತಾ...

ಹೌದು, ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಐಪಿಎಲ್ ಮ್ಯಾಚ್ ನಡೀತಾ ಇದೆ ಅಂದ್ರೆ ಅಲ್ಲಿ ತಂಡ ಯಾವುದೇ ಇರಲಿ ಆದ್ರೆ ಹವಾ ಮಾತ್ರ ನಮ್ಮ ಆರ್‌ಸಿಬಿ ತಂಡದ ಅಭಿಮಾನಿಗಳದ್ದೇ ಆಗಿರುತ್ತೆ. ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಜೈಕಾರ ಸ್ವರ್ಗ ಲೋಕಕ್ಕೂ ಕೇಳುವಂತೆ ಇರುತ್ತದೆ. ಇನ್ನು ವಿರಾಟ್ ಕೊಹ್ಲಿ ಅವರನ್ನ ಕ್ರಿಕೆಟ್ ಮೈದಾನದಲ್ಲಿ ಯಾರಾದರೂ ಕೆಣಕಿ ಕಿರಿಕ್ ಮಾಡಿದರೆ, ವಿರಾಟ್ ಕೊಹ್ಲಿ ಅಭಿಮಾನಿಗಳು & ಆರ್‌ಸಿಬಿ ಅಭಿಮಾನಿಗಳು ರೊಚ್ಚಿಗೆದ್ದು ಕೂಗುತ್ತಾರೆ. ಇದೆಲ್ಲಾ ಸರಿಯಾಗಿ ಗೊತ್ತಿದ್ದರೂ ಪಂಜಾಬ್ ತಂಡದ ಆಟಗಾರ ವಿರಾಟ್ ಕೊಹ್ಲಿ ಜೊತೆಗೆ ಕಿರಿಕ್ ಮಾಡಿಕೊಂಡು ಸರಿಯಾಗಿ ತಿಂದಿದ್ದಾರೆ!

ಸರಿಯಾಗಿ ತಿರುಗೇಟು ಕೊಟ್ಟ ಕಿಂಗ್ ಕೊಹ್ಲಿ!

ಯೆಸ್, ಪಂಜಾಬ್ ತಂಡದ ಆಟಗಾರ ಹರ್‌ಪ್ರೀತ್ ಬ್ರಾರ್ ಇದೀಗ ವಿರಾಟ್ ಕೊಹ್ಲಿ ಅವರನ್ನ ಕೆಣಕಲು ಹೋಗಿ ಸರಿಯಾಗಿ ತಿಂದಿದ್ದಾರೆ. ಅಂದಹಾಗೆ ಪಂಜಾಬ್ ಮೈದಾನದಲ್ಲೇ ಆರ್‌ಸಿಬಿ ತಂಡ ಕಳೆದ ಭಾನುವಾರ ಮ್ಯಾಚ್ ಗೆದ್ದಿತ್ತು. ಈ ಪಂದ್ಯದಲ್ಲಿ ಅದ್ಧೂರಿಯಾಗಿ ಆರ್‌ಸಿಬಿ ತಂಡ ಆಡುವಾಗ, ಕ್ರಿಕೆಟ್ ಮೈದಾನದಲ್ಲೇ ವಿರಾಟ್ ಕೊಹ್ಲಿ ಅವರನ್ನ ಕೆಣಕಿದ್ದ ಪಂಜಾಬ್ ತಂಡದ ಬೌಲರ್ ಹರ್‌ಪ್ರೀತ್ ಬ್ರಾರ್. ಹೀಗೆ ಸುಖಾಸುಮ್ಮನೆ ತಮ್ಮನ್ನು ಕೆಣಕಲು ಬಂದಿದ್ದ ಪಂಜಾಬ್ ಆಟಗಾರನಿಗೆ ಸರಿಯಾಗೇ ತಿರುಗೇಟು ನೀಡಿದ್ದಾರೆ ವಿರಾಟ್ ಕೊಹ್ಲಿ. 20 ವರ್ಷದಿಂದ ಕ್ರಿಕೆಟ್ ಆಡ್ತಾ ಇದ್ದೀನಿ ಹೋಗಲೇ ಬಚ್ಚಾ... ಅನ್ನೋ ರೀತಿಯಲ್ಲಿ ವಿರಾಟ್ ಕೊಹ್ಲಿ ರಿಯಾಕ್ಷನ್‌ನ ಕೊಟ್ಟು ಹರ್‌ಪ್ರೀತ್ ಬ್ರಾರ್‌ಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಫ್ಯಾನ್ಸ್ ಶೇರ್ ಮಾಡುತ್ತಿದ್ದಾರೆ.

ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದ್ದ ಕೊಹ್ಲಿ!

ವಿರಾಟ್ ಕೊಹ್ಲಿ ಅವರ ಬಳಿ ಕೋಟಿ ಕೋಟಿ ಹಣ ಇದ್ದರೂ, ಬೇರೆಯವರಿಗೆ ಸಹಾಯವನ್ನ ಮಾಡುವುದು ಮರೆತಿಲ್ಲ. ಕಷ್ಟದಲ್ಲೇ ಬೆಳೆದು ಬಂದು ಇದೀಗ ದೊಡ್ಡ ಸ್ಟಾರ್ ಆಟಗಾರನಾಗಿ ನಿಂತಿರುವ ವಿರಾಟ್ ಕೊಹ್ಲಿಗೆ ಬಡವರ ಕಷ್ಟ ಅರ್ಥ ಆಗುತ್ತದೆ. ಇದೇ ಕಾರಣಕ್ಕೆ ಹಲವಾರು ಕ್ರಿಕೆಟ್ ಆಟಗಾರರಿಗೆ ಸಹಾಯ ಮಾಡಿದ್ದಾರೆ ವಿರಾಟ್ ಕೊಹ್ಲಿ. ಹೀಗಿದ್ದಾಗ ತಮ್ಮ ಬಳಿ ಬಂದು ಎಂಆರ್‌ಎಫ್ ಬ್ಯಾಟ್ ಕೇಳಿದರೆ ಇಲ್ಲ ಎನ್ನುವುದಿಲ್ಲ ವಿರಾಟ್ ಕೊಹ್ಲಿ. ತಮ್ಮ ಬ್ಯಾಟ್ ಗಿಫ್ಟ್ ಕೊಟ್ಟು ಕಳುಹಿಸುತ್ತಾರೆ. ಅಲ್ಲದೆ ಬೇರೆ ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವ & ಕಷ್ಟದಲ್ಲಿ ಇರುವ ಕ್ರೀಡಾಪಟುಗಳಿಗೆ ಕೂಡ ಕೊಹ್ಲಿ ನೆರವಾಗುತ್ತಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+