Ind VS Pak: ವಿರೋಧಿಗಳ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ ಸರಿಯಾಗಿ ಆಡುತ್ತಿಲ್ಲ, ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ, ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಣೆ ಮಾಡಬೇಕು... ಹಿಂಗೆ ವಿರಾಟ್ ಕೊಹ್ಲಿ ಅವರ ವಿರೋಧಿಗಳು ಬಾಯಿ ಬಡಿದುಕೊಳ್ಳುತ್ತಿದ್ದರು. ಅದರಲ್ಲೂ ಆರ್‌ಸಿಬಿ ತಂಡದ ನಾಡಿ ಮಿಡಿತ ವಿರಾಟ್ ಕೊಹ್ಲಿ ಮೇಲೆ ಒತ್ತಡ ತರಲು ಹಲವರು ಕುತಂತ್ರ ಮಾಡಿದ್ದರು ಎನ್ನುವ ಆರೋಪ ಕೂಡ ಕೇಳಿಬಂದಿತ್ತು. ಆದರೆ ವಿರೋಧಿಗಳ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ, ಇಂದು ತಮ್ಮ ಬ್ಯಾಟ್ ಮೂಲಕವೇ ಅವರಿಗೆಲ್ಲಾ ಉತ್ತರ ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅತಿ ಚಿಕ್ಕ ವಯಸ್ಸಿಗೆ ಕ್ರಿಕೆಟ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗಾಗಿಯೇ ಕ್ರಿಕೆಟ್ ಅಖಾಡದಲ್ಲಿ ಕಲಿಯಲು ವಿರಾಟ್ ಕೊಹ್ಲಿ ಅವರಿಗೆ ಸಾಕಷ್ಟು ಸಮಯ & ಅವಕಾಶ ಸಿಕ್ಕಿತ್ತು. ಆದರೆ ವಿರಾಟ್ ಕೊಹ್ಲಿ ಈ ರೀತಿ ಬೆಳೆದ ರೀತಿ ನೋಡಿ ಹೊಟ್ಟೆ ಉರಿದುಕೊಂಡಿದ್ದ ಕೆಲವರು ಕುತಂತ್ರ ಮಾಡುತ್ತಲೇ ಬಂದಿದ್ದಾರೆ. ಅವರನ್ನೆಲ್ಲಾ ಹಿಂದಕ್ಕೆ ಹಾಕಿ ವಿರಾಟ್ ಕೊಹ್ಲಿ ಈಗ ಮುಂದೆ ನುಗ್ಗಿ ಬೆಳೆದಿದ್ದಾರೆ. ಇಷ್ಟು ದಿನಗಳ ಕಾಲ ಫಾರ್ಮ್‌ಗೆ ಮರಳಲು ಒದ್ದಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

Virat Kohli Returns to Form Against Pakistan in ICC Champions Trophy 2025

ಕೊಹ್ಲಿ ಅಬ್ಬರಕ್ಕೆ ಕಾಣೆಯಾದ ಪಾಕಿಸ್ತಾನ!

ಹೌದು, ಪಾಕಿಸ್ತಾನದ ಬೌಲಿಂಗ್ ಪಡೆಯನ್ನ ಇವತ್ತು ಮನಸ್ಸಿಗೆ ಬಂದ ರೀತಿ ದಂಡಿಸಿದರು ವಿರಾಟ್ ಕೊಹ್ಲಿ. ಆರಂಭದಲ್ಲಿ ಒಂದು ಕ್ಯಾಚ್ ನೀಡಿ ತಪ್ಪು ಮಾಡಿದ್ದ ವಿರಾಟ್ ಕೊಹ್ಲಿ ಮತ್ತೆ ಆ ತಪ್ಪು ಮಾಡಲೇ ಇಲ್ಲ. ಈ ಮೂಲಕ ಪ್ರತಿ ಹಂತದಲ್ಲೂ ಪಾಕಿಸ್ತಾನ ಪಡೆಯ ಬೌಲಿಂಗ್ ದಾಳಿಯನ್ನ ಖಡಕ್ ಆಗಿ ಎದುರಿಸಿ ನಿಂತರು. ಭಾರತ ತಂಡಕ್ಕೆ ಅಗತ್ಯವಿದ್ದ ಸಮಯದಲ್ಲೇ ಸರಿಯಾಗಿ ಸಾಥ್ ನೀಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ನೆರವಾದರು.

111 ಬಾಲ್ + 7 ಬೌಂಡರಿ = 100 ರನ್

ಪಾಕಿಸ್ತಾನ ಬೌಲರ್‌ಗಳ ಡ್ರಾಮಾ ಹೆಚ್ಚಾದರೂ ಅದನ್ನು ಲೆಕ್ಕಿಸದೆ ದಿಟ್ಟ ಹೋರಾಟ ತೋರಿದ ವಿರಾಟ್ ಕೊಹ್ಲಿ, 111 ಬಾಲ್ ಆಡಿ 7 ಬೌಂಡರಿಯನ್ನು ಬಾರಿಸಿ ಭರ್ಜರಿಯಾಗಿ 100 ರನ್ ಗಳಿಸಿ ಮಿಂಚಿದರು. ವಿರಾಟ್ ಕೊಹ್ಲಿ ಪ್ರತಿಯೊಬ್ಬ ಪಾಕ್ ಬೌಲರ್‌ನ ಕಾಡಿದರು. ಒಂದು ಕಡೆ ಪಾಕ್ ತಂಡ ವಿಕೆಟ್ ಉರುಳಿಸಲು ಪ್ರಯತ್ನ ಮಾಡುವಾಗಲೇ, ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ನಿಧಾನವಾಗಿ ರನ್ ಕದಿಯಲು ಶುರು ಮಾಡಿದರು.

ಹೀಗೆ ನೋಡ ನೋಡುತ್ತಲೇ ವಿರಾಟ್ ಕೊಹ್ಲಿ ಅರ್ಧ ಶತಕ ಗಳಿಸಿ ಶತಕದ ಕಡೆ ಮುನ್ನುಗ್ಗಿದ್ದರು ಆಗಲೂ ಪಾಕ್ ಟೀಂ ಎಲ್ಲಾ ರೀತಿ ಪ್ರಯತ್ನ ಮಾಡಿದರೂ ವರ್ಕೌಟ್ ಆಗಲೇ ಇಲ್ಲ. ಕೊನೆಗೂ ಕೊಹ್ಲಿ ಶತಕ ಸಿಡಿಸಿ ಮಿಂಚಿದರು. ಭಾರತ ಗೆಲ್ಲಲು ಕೊನೆಯ 2 ರನ್ ಬಾಕಿ ಇದ್ದಾಗ ಕಿಂಗ್ ಕೊಹ್ಲಿ 96 ರನ್ ಗಳಿಸಿದ್ದರು. ಹೀಗಿದ್ದಾಗ ವಿರಾಟ್ ಕೊಹ್ಲಿ ಸೆಂಚ್ಯುರಿ ಅನುಮಾನ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೊನೆಗೆ ಬೌಂಡರಿ ಬಾರಿಸಿ 4 ರನ್ ಕದ್ದು ಸೆಂಚ್ಯುರಿ ಗುರಿ ಮುಟ್ಟಿದರು ವಿರಾಟ್ ಕೊಹ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+